Advertisement
ಜಡಿಮಳೆಯಲ್ಲೇ ಶ್ರೀ ಕ್ಷೇತ್ರಕ್ಕೆ ಭಕ್ತರು ಬೆಳಗ್ಗೆ ನಾಲ್ಕು ಗಂಟೆಯಿಂದ ಆರಂಭಗೊಂಡು ಮಧ್ಯಾಹ್ನನದ ತನಕ ಆಗಮಿಸಿ ಕೆಲವರು ಮೊದಲು ಗದಾತೀರ್ಥದಲ್ಲಿ ಸ್ನಾನ ಮಾಡಿ ಅನಂತರ ಸಮುದ್ರ ಸ್ನಾನ ಮಾಡಿದರು. ಶ್ರಾವಣ ಅಮಾವಾಸ್ಯೆಯ ದಿನ ಸ್ನಾನ ಮಾಡುವಾಗ ನೀರಿನಲ್ಲಿ ಔಷಧೀಯ ಗುಣ ಇರುತ್ತದೆ ಎಂಬ ನಂಬಿಕೆಯಿಂದ ಭಕ್ತರು ಸಮುದ್ರದ ಉಪ್ಪುನೀರಿನ ತೀರ್ಥಸ್ನಾನಗೈದು ಪಾಪ ವಿಮೋಚನೆ ಮತ್ತು ಚರ್ಮರೋಗ, ಸಿಡುಬು, ಅಬುìದ, ಅಸ್ತಮಾ ಮೊದಲಾದ ರೋಗ ಬಾಧೆಗಳ ನಿವಾರಣೆಗೆ ಶ್ರೀ ಸೋಮನಾಥ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ತೀರ್ಥಸ್ನಾಕ್ಕೆ ದಕ್ಷಿಣಕನ್ನಡದ ವಿವಿಧ ಭಾಗ, ಕಾಸರಗೋಡು ಹಾಗೂ ಉಡುಪಿಯಿಂದಲೂ ಭಕ್ತರು ಆಗಮಿಸಿ ಸಮುದ್ರಸ್ನಾನ ಆರಂಭಿಸುವುದಕ್ಕೆ ಮುಂಚಿತವಾಗಿ ನಂಬಿಕೆ ಸಂಪ್ರದಾಯದ ಪ್ರಕಾರ ವೀಳ್ಯದೆಲೆ ಮತ್ತು ಅಡಕೆಯನ್ನು ಸಮುದ್ರಕ್ಕೆ ಸಮರ್ಪಿಸಿ ನಂತರ ತೀರ್ಥಸ್ನಾನಗೈದರು. ಶ್ರಾವಣ ಅಮಾವಾಸ್ಯೆಯ ದಿನ ಸೋಮೇಶ್ವರ ದೇವಸ್ಥಾನದಲ್ಲಿ ತಿಲಹೋಮಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ಇಲ್ಲ. ಈ ದಿನ ಸುಮಾರು ಐದರಿಂದ ಹತ್ತರಷ್ಟು ತಿಲಹೋಮ ಪಿಂಡಪ್ರದಾನ ನಡೆದರೆ ಮಹಾಲಯ ಅಮಾವಾಸ್ಯೆ ಹಾಗೂ ಆಟಿ ಅಮಾವಾಸ್ಯೆಯಂದು ಸಾಧಾರಣ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಿಲಹೋಮ ಪಿಂಡಪ್ರದಾನ ನಡೆಯುತ್ತದೆ. ತೀರ್ಥಸ್ನಾನಕ್ಕೆ ಕೃಷಿಕರು ಆಗಮಿಸುವುದರಿಂದ ಪ್ರತೀ ವರ್ಷದಂತೆ ಈ ಬಾರಿಯೂ ಕತ್ತಿ ಮಾರಾಟಗಾರರು ಆಗಮಿಸಿ ಮಳಿಗೆಗಳನ್ನು ಹಾಕಿದ್ದು ಈ ಬಾರಿ ಭಕ್ತರ ಸಂಖ್ಯೆ ಇಳಿಮುಖವಾಗಿರುವುದರಿಂದ ಕತ್ತಿ ಮಾರಾಟಗಾರರಿಗೆ ವ್ಯವಹಾರ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರೊಬ್ಬರು ತಿಳಿಸಿದರು.
Related Articles
ಪ್ರತೀ ವರ್ಷದಂತೆ ಈ ಬಾರಿಯೂ ತೀರ್ಥಸ್ನಾನಕ್ಕೆ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ನಡೆಸಿದ್ದು, ರಕ್ಷಣೆ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ಸಹಕಾರದಿಂದ ಯಾವುದೇ ಅಡೆ ತಡೆಯಿಲ್ಲದೆ ಈ ಬಾರಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸೋಮೇ ಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಅವರು ತಿಳಿಸಿದರು.
Advertisement
ಜೀವರಕ್ಷಕ ಈಜುಗಾರರಿಂದ ಮುನ್ನೆಚ್ಚರಿಕೆ ಕಾರ್ಯ
20ವರ್ಷಗಳಿಂದ ಸೋಮೇಶ್ವರ ಶ್ರಾವಣ ತೀರ್ಥಸ್ನಾನಕ್ಕೆ ವಿಶೇಷವಾಗಿ ಉಳ್ಳಾಲ ಜೀವರಕ್ಷಕ ಈಜುಗಾರ ಸಂಘದ ಸದಸ್ಯರು ಭಕ್ತರಿಗೆ ರಕ್ಷಣೆ ಕಾರ್ಯವನ್ನು ನೆರವೇರಿಸುತ್ತಿದ್ದು ಈ ಬಾರಿಯೂ ರಕ್ಷಣೆ ಕಾರ್ಯದಲ್ಲಿ ಸುಮಾರು 14ಜೀವರಕ್ಷಕ ಈಜುಗಾರರು ತೊಡಗಿಸಿಕೊಂಡಿದ್ದಾರೆ.