Advertisement

ಮಾನಹಾನಿ, ದುಷ್ಕೃತ್ಯದಿಂದ ನೆಮ್ಮದಿ ಹಾಳು.. ನಿಜವಾಯ್ತು ದರ್ಶನ್‌ ಬಗೆಗಿನ ಸ್ವಾಮೀಜಿ ಭವಿಷ್ಯ

07:02 PM Jun 19, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೋಪಿಯಾಗಿ ಪೊಲೀಸರ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಖ್ಯಾತ ನಟನೊಬ್ಬ ಇಂಥ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎನ್ನುವುದನ್ನು ನಂಬಲು ಬಹುತೇಕ ಜನರಿಗೆ ಇಂದಿಗೂ ಸಾಧ್ಯವಾಗುತ್ತಿಲ್ಲ.

Advertisement

ದರ್ಶನ್‌ ಅಭಿಮಾನಿಗಳಂತೂ, ವಿಚಾರಣೆ ಆಗಲಿ ನಮ್ಮ ನೆಚ್ಚಿನ ನಟ ಈ ರೀತಿ ಮಾಡಿಲ್ಲ ಎಂದೇ ವಾದಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸದ್ಯ ದರ್ಶನ್‌ ಬಂಧನದ ವಿಚಾರವೇ ಹೆಚ್ಚು ಸುದ್ದಿಯಾಗುತ್ತಿದೆ.

ದರ್ಶನ್‌ ಅವರಿಗೆ ಇಂತಹ ಕಂಟಕಗಳು ಎದುರುರಾಗುತ್ತದೆ ಎನ್ನುವುದು ಮೊದಲೇ ಭವಿಷ್ಯ ನುಡಿಯಲಾಗಿತ್ತು. ಆ ಸ್ವಾಮೀಜಿಯೊಬ್ಬರು ಹೇಳಿದ ಭವಿಷ್ಯದಂತೆಯೇ ದರ್ಶನ್‌ ಅವರ ಜೀವನದಲ್ಲಿ ಆಗುತ್ತಿದೆ. ದರ್ಶನ್‌ ಬಂಧನದ ಬಳಿಕ ಸಿದ್ಧಲಿಂಗೇಶ್ವರ ಗದ್ದುಗೆ ಮಠದ(ಕಾಲಜ್ಞಾನ ಮಠ) ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದ ಭವಿಷ್ಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಈ ವರ್ಷದ ಯುಗಾದಿ ಹಬ್ಬದ ಸಂದರ್ಭದಲ್ಲಿ ಸ್ವಾಮೀಜಿಯವರು 11 ಪುಟಗಳಲ್ಲಿ ಇಡೀ ವರ್ಷದಲ್ಲಿ ನಡೆಯಬಹುದಾದ  ಕಷ್ಟ- ನಷ್ಟ, ಸುಖ- ದುಃಖಗಳ ಬಗ್ಗೆ ಸಂಕ್ಷಿಪ್ತವಾಗಿ ಕಾಲಜ್ಞಾನ ಭವಿಷ್ಯವನ್ನು ನುಡಿದ್ದರು. ಇದರಲ್ಲಿ ನಟ ದರ್ಶನ್‌ ಅವರ ಬಗ್ಗೆ, ಅವರಿಗೆ ಮುಂದಾಗುವ ಆಪತ್ತಿನ ಬಗ್ಗೆಯೂ ಭವಿಷ್ಯವನ್ನು ನುಡಿದಿದ್ದರು.

ಭವಿಷ್ಯದಲ್ಲಿ ಏನಿದೆ? ಸ್ವಾಮೀಜಿ ಹೇಳಿದ್ದೇನು?: ನಮ್ಮ ಕರ್ನಾಟಕದ ಖ್ಯಾತ ನಟರಾದ ಚಾಲೆಂಜಿಗ್ ಸ್ಟಾರ್ ದರ್ಶನ್ ರವರು ಬಹಳ ಕಷ್ಟದಿಂದ ಮೇಲೆ ಬಂದಿರುವವರು. ಅವರ ಪ್ರತಿಭೆ ಹಾಗೂ ಅವರು ಪಡೆದಿರುವ ಪ್ರಸಿದ್ಧಿ ನಮ್ಮೆಲ್ಲರಿಗೂ ಸಂತೋಷದಾಯಕವಾದ ಮತ್ತು ಹೆಮ್ಮೆಯ ವಿಷಯವಾಗಿದೆ. ಆದರೆ ಈ ವರ್ಷ ಅವರಿಗೆ ಅನೇಕ ರೀತಿಯಿಂದ ಶತ್ರುಗಳ ತೊಂದರೆ, ಅನಾರೋಗ್ಯ ಬಾಧೆ, ಮಾನಹಾನಿಗಳು, ಅನೇಕ ರೀತಿಯ ದುಷ್ಕೃತ್ಯಗಳ ಪ್ರಯೋಗದಿಂದ ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ. ಮತ್ತು ನಿಮ್ಮ ರಕ್ಷಣಾವಲಯವನ್ನು ಹೆಚ್ಚು ಮಾಡುವುದು ಸೂಕ್ತವೆಂದು ಭವಿಷ್ಯ ನುಡಿದಿದ್ದರು.

Advertisement

ವರ್ಷದ ಆರಂಭದಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ನಡುವಿನ ಸೋಶಿಯಲ್‌ ಮೀಡಿಯಾ ಸಮರದಿಂದ ಹಿಡಿದು ಕೊಲೆ ಪ್ರಕರಣದಲ್ಲಿ ಆರೋಪಿಯಾಗುವವರೆಗೂ ದರ್ಶನ್‌ ಅವರ ವ್ಯಕ್ತಿತ್ವಕ್ಕೆ ಹಾಗೂ ಪ್ರತಿಷ್ಠೆಗೆ ಪೆಟ್ಟು ಬೀಳುತ್ತಲೇ ಬಂದಿದೆ.

ಶ್ರೀಗಳ ಮಾತಿಗಾದರೂ ದರ್ಶನ್‌ ಗೌರವ ಕೊಟ್ಟ ಸ್ವಲ್ಪ ಎಚ್ಚರಿಕೆಯಿಂದ ಇದ್ದರೂ, ಇಂದು ದರ್ಶನ್‌ ಅವರಿಗೆ ಈ ಸ್ಥಿತಿ ಬರುತ್ತಿಲ್ಲಿಲ್ಲ ಎಂದು ಕೆಲವರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next