Advertisement

ಶ್ರೀ ರಾಮ ಸೇವಾ ಸಂಕಲ್ಪ ಅಭಿಯಾನ: ಕಲ್ಯಾಣಪುರ ಗಿರಿಜಾ ಪೂಜಾರ್ತಿ ಮನೆಗೆ ಶಿಲಾನ್ಯಾಸ

07:57 PM Jan 26, 2023 | Team Udayavani |

ಉಡುಪಿ: ಅಯೋಧ್ಯ ಶ್ರೀ ರಾಮ ಸೇವಾ ಸಂಕಲ್ಪ ಅಭಿಯಾನದಡಿ ಕಲ್ಯಾಣಪುರ ಗಿರಿಜಾ ಪೂಜಾರ್ತಿ ಅವರಿಗೆ ನಿರ್ಮಿಸಲಾಗುತ್ತಿರುವ ಮನೆಗೆ ರವಿವಾರ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶಾಸಕ ಕೆ. ರಘುಪತಿ ಭಟ್‌ ಶಿಲಾನ್ಯಾಸವನ್ನು ನೆರವೇರಿಸಿದರು.

Advertisement

ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ 2024 ಜನವರಿ ವೇಳೆಗೆ ಪೂರ್ಣಗೊಂಡು, ಅಯೋಧ್ಯಾಧಿಪತಿ ಶ್ರೀ ರಾಮಚಂದ್ರರ ಭವ್ಯ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಪ್ರಸ್ತುತ ಇರುವ ಈ ಒಂದು ವರ್ಷದ ಅವಧಿಯಲ್ಲಿ ದೇಶದಾದ್ಯಂತ ರಾಮ ರಾಜ್ಯದ ನಿರ್ಮಾಣದ ಕನಸಿನ ನೆಲೆಯಲ್ಲಿ ವ್ಯಕ್ತಿಗತವಾಗಿ ಹಾಗೂ ಸಂಘ ಸಂಸ್ಥೆಗಳು ಸೇರಿ ಒಂದಷ್ಟು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎನ್ನುವ ಆಶಯದಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದರು ಅಯೋಧ್ಯ ಶ್ರೀ ರಾಮ ಸೇವಾ ಸಂಕಲ್ಪ ಅಭಿಯಾನ ಸಂಯೋಜಿಸಿದ್ದಾರೆ ಎಂದು ಶಾಸಕ ಭಟ್‌ ತಿಳಿಸಿದರು.

ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ, ಪ್ರ. ಕಾರ್ಯದರ್ಶಿಗಳಾದ ಸಚಿನ್‌ ಪೂಜಾರಿ, ಸ್ಥಳೀಯರಾದ ಸದಾನಂದ ಪೂಜಾರಿ, ಅಶೋಕ್‌ ಹೇರೂರು, ಮೀರಾ ಸದಾನಂದ ಪೂಜಾರಿ, ಹೇಮಾ ಅಶೋಕ್‌, ಗಿರೀಶ್‌ ಅಡಿಗ, ಉದಯ ಮರಕಾಲ, ಆನಂದ, ರೇವತಿ, ಗಣೇಶ್‌ ನಾಯಕ್‌ ಶಿರಿಯರ, ಸುದರ್ಶನ್‌ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next