Advertisement

ಹೊನ್ನೇಸರದ ಶ್ರೀ ನೀಲಕಂಠೇಶ್ವರ

12:35 PM Feb 10, 2018 | |

ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಶಿವ ಬಗೆಬಗೆಯ ರೂಪಗಳಿಂದ ಪೂಜಿಸಲ್ಪಡುತ್ತಾನೆ. ಕೆಳದಿ ಅರಸರ ಸಾಮ್ರಾಜ್ಯದಲ್ಲಂತೂ ಎಲ್ಲೆಲ್ಲೂ ಶಿವ ದೇವಾಲಯ ಕಂಡು ಬರುತ್ತದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊನ್ನೇಸರ ಗ್ರಾಮದಲ್ಲಿರುವ ಶ್ರೀನೀಲಕಂಠೇಶ್ವರ ದೇವಾಲಯ, ಸದಾ ಭಕ್ತರ ಮನೋಭಿಷ್ಠ ಈಡೇರುವ ಪವಿತ್ರ ಕ್ಷೇತ್ರವೆಂಬ ಖ್ಯಾತಿ ಪಡೆದಿದೆ.

Advertisement

ಸಾಗರ-ಹೊಸನಗರ ಹೆದ್ದಾರಿಯಲ್ಲಿ ಹೊನ್ನೇಸರ ಗ್ರಾಮದಲ್ಲಿ ಮುಖ್ಯ ಹೆದ್ದಾರಿಯಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಈ ದೇವಾಲಯ ಕಟ್ಟಡ ವಿನ್ಯಾಸ, ಪ್ರಶಾಂತ ವಾತಾವರಣಗಳಿಂದ ಭಕ್ತರ ಮನಸ್ಸು ಸೆಳೆಯುತ್ತದೆ. ಈ ದೇವಾಲಯಕ್ಕೆ ಸುಮಾರು 500 ವರ್ಷದ ಇತಿಹಾಸವಿದೆ. ಕೆಳದಿ ಸಾಮ್ರಾಜ್ಯ ಉದಯಕ್ಕಿಂತ ಮೊದಲೇ ಇಲ್ಲಿನ ಶಿವನ ಆವಾಸವಿರುವ ಉಲ್ಲೇಖ ದೊರೆತಿದೆ.

ತುಂಬ ಹಿಂದೆ, ಕಾಲದಲ್ಲಿ ಈ ನೀಲಕಂಠೇಶ್ವರ ದೇವರ ಗುಡಿ ಮುಂಡಿಗೇಸರ ಗ್ರಾಮದಲ್ಲಿತ್ತಂತೆ. ಸುಮಾರು 300 ವರ್ಷಗಳ ಹಿಂದೆ ಅಲ್ಲಿಂದ ಹೊನ್ನೇಸರಕ್ಕೆ ಸ್ಥಳಾಂತರಗೊಂಡಿದೆಯಂತೆ. ಇದು ಸೀಮೆಯ ದೇವಾಲಯವಾಗಿದ್ದು ಸೀಮಾ ವ್ಯಾಪ್ತಿಯ ಭಕ್ತರ ಉದಾರ ದೇಣಿಗೆಯ ಸಹಾಯದಿಂದ ನಡೆಸಲ್ಪಡುತ್ತಿತ್ತು.  ಆರಂಭದಲ್ಲಿ ಸಾಧಾರಣ ಚಿಕ್ಕ ಗುಡಿ ಹೊಂದಿದ್ದು ಜೀರ್ಣಾವಸ್ಥೆಯಲ್ಲಿತ್ತು. 2004 ರಲ್ಲಿ ಭಕ್ತರ ನಿವೇದನೆಗೆ ಸ್ಪಂದಿಸಿ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮಿಗಳು ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದರು. ಹಳೆಯ ದೇವಾಲಯದ ಕಟ್ಟಡ ಬಿಚ್ಚಿದಾಗ ಮರದ ದೊಡ್ಡ ತೊಲೆಯೊಂದರ ಮೇಲೆ ಸುಮಾರು 150 ವರ್ಷಗಳ ಹಿಂದಿನ ಹಿಂದೂ ವರ್ಷ ಪಂಚಾಂಗ ಆಧಾರಿತ ದಿನಾಂಕ ನಮೂದಾಗಿರುವುದು ಕಂಡು ಬಂದಿದೆ. ಈ ತೊಲೆಯನ್ನು ಈಗಲೂ ದೇವಾಲಯದಲ್ಲಿ ಸಂರಕ್ಷಿಸಿಡಲಾಗಿದೆ.

ದೇವಾಲಯ ಜೀರ್ಣೋದ್ಧಾರಕ್ಕಿಂತ ಮೊದಲು ಹೊನ್ನೇಸರದ ಗಣೇಶ ಭಟ್ಟರು ಮತ್ತು ತಿಮ್ಮಪ್ಪಯ್ಯ ಇನ್ನಿತರ ಯಕ್ಷಗಾನ ಕಲಾದರ ನೇತೃತ್ವದಲ್ಲಿ ಶ್ರೀನೀಲಕಂಠೇಶ್ವರ ಯಕ್ಷಗಾನ ಕಲಾ ಸಂಘ ಎಂಬ ಹೆಸರಿನ 
ಯಕ್ಷಗಾನದ ಹವ್ಯಾಸಿ ಮೇಳ ನಡೆಸಲಾಗುತ್ತಿತ್ತು. ಈ ಯಕ್ಷ ಕಲಾವಿದರ ಬಳಗದವರೇ ದೇವಾಲಯದ ಆಡಳಿತ ಮತ್ತು ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದರು. ಒಮ್ಮೆ ದೇವಾಲಯದ ಆವರಣದಲ್ಲಿ ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದ್ದಾಗ ರಾತ್ರಿ ನಟಿಸಬೇಕಾದ ಮುಖ್ಯ ಕಲಾವಿದರಲ್ಲಿ ಇಬ್ಬರು ಗೈರು ಹಾಜರಾಗಿದ್ದರು. ಕಿಕ್ಕಿರಿದು ಪ್ರೇಕ್ಷಕರು ಸೇರಿದ್ದರು. ಕಲಾ ಸಂಘದ ಮುಖ್ಯಸ್ಥರಿಗೆ ಮುಜುಗರ ಉಂಟಾಗುವ ಸನ್ನಿವೇಶ ಸೃಷ್ಟಿಯಾಯಿತು. ದೇವರೇ ನೀನೇ ಕಾಪಾಡು ಎಂದು ಪ್ರಾರ್ಥಿಸಿದರು. ಯಕ್ಷಗಾನ ಪ್ರದರ್ಶನ ಆರಂಭಗೊಂಡಿತ್ತು. ಸರಿರಾತ್ರಿಯ ಸುಮಾರಿಗೆ ಸಹಸ್ರಾರು ಸಂಖ್ಯೆಯ ದೀಪದ ಹುಳುಗಳು ರಂಗಸ್ಥಳ ಮುತ್ತಿಕೊಂಡು ಯಕ್ಷಗಾನ ಪ್ರದರ್ಶನ ಕಾಣದಂತೆ ಆಯಿತು. ಪ್ರೇಕ್ಷಕರೆಲ್ಲ ದೇವರ ಮಹಿಮೆ ಎಂದು ಮಾತಾಡಿಕೊಂಡು ಮನೆಗೆ ಹಿಂತಿರುಗಿದರು. ಹೀಗೆ ಸಂಕಷ್ಟದಲ್ಲಿ ಭಕ್ತರನ್ನು ಕಾಪಾಡಿದ ಹಲವು ದಂತಕಥೆಗಳಿವೆ. ಇದು ಖಾÏತ ನಾಟಕಕಾರ ದಿವಂಗತ ಕೆ.ವಿ. ಸುಬ್ಬಣ್ಣನವರ  ಮನೆ ದೇವರು ಕೂಡ ಆಗಿದೆ.  ಅದಕ್ಕಾಗಿ ಅವರು ಹೆಗ್ಗೊàಡಿನಲ್ಲಿ ಸ್ಥಾಪಿಸಿದ ನಾಟಕ ಸಂಘಕ್ಕೆ ಶ್ರೀನೀಲಕಂಠೇಶ್ವರ ನಾಟಕ ಸಂಘ (ನೀನಾಸಂ) ಎಂದು ನಾಮಕರಣ ಮಾಡಿದ್ದರು. ಸುಬ್ಬಣ್ಣನವರು ಎಲ್ಲ ನಾಟಕಗಳ ಪ್ರದರ್ಶನಕ್ಕೂ ಮೊದಲು ಭಕ್ತಿಯಿಂದ ಈ ದೇವರ ಭಾವಚಿತ್ರಕ್ಕೆ ನಮಿಸುತ್ತಿದ್ದರು.

Advertisement

 ಜೀರ್ಣೋದ್ಧಾರಕ್ಕೂ ಮೊದಲು ದೇವರ ಗರ್ಭಗುಡಿಯಲ್ಲಿ ಗಣಪತಿ ಮತ್ತು ದೇವಿಯ ವಿಗ್ರಹವಿತ್ತು. ದೇವಾಲಯ ವಾಸ್ತು ಶಾಸ್ತ್ರಜ್ಞ ಮಹೇಶ ಮುನಿಯಂಗಳ ಇವರ ಮಾರ್ಗದರ್ಶನದಂತೆ ಹೊಸದಾಗಿ ದೇವಾಲಯ ನಿರ್ಮಿಸಿದಾಗ ಈ ಪರಿವಾರ ದೇವತೆಗಳ ವಿಗ್ರಹವನ್ನು ಗರ್ಭ ಗುಡಿಯಿಂದ ಹೊರಗೆ ಪ್ರತ್ಯೇಕ ಸ್ಥಳದಲ್ಲಿ ಪ್ರತಿಷ್ಟಾಪಿಸಲಾುತು.

ಪ್ರತಿ ವರ್ಷ ಮಾಘ ಶುದ್ಧ ಹುಣ್ಣಿಮೆಯ ದಿನ ದೇವಾಲಯದಲ್ಲಿ ಆಯನೋತ್ಸವ ನಡೆಸಲಾಗುತ್ತಿದೆ.1962 ರಲ್ಲಿ ಮಾಘ ಶುದ್ಧ ಹುಣ್ಣಿಮೆಯ ದಿನ ಭಗವಾನ್‌ ಶ್ರೀಧರ ಸ್ವಾಮಿಗಳು ಆಕಸ್ಮಿಕವಾಗಿ ಇಲ್ಲಿಗೆ ಭೇಟಿ ನೀಡಿದರು ಅವರು ದೇವರ ಗರ್ಭಗೃಹದಲ್ಲಿ ಧ್ಯಾನಸ್ಥರಾಗಿ ಕುಳಿತ್ತಿದ್ದ ದಿನವೇ ಮಾಘ ಶುದ್ಧ ಹುಣ್ಣಿಮೆಯಂದೇ ಪ್ರಾಚೀನ ಕಾಲದಲ್ಲಿ ಈ ದೇವರ ಪ್ರತಿಷ್ಠಾಪನೆ ನಡೆದಿತ್ತು. ಆ ಕಾರಣದಿಂದ ಪ್ರತಿ ವರ್ಷ ಈ ದಿನದಂದು ಉತ್ಸವ ನಡೆಸಲು ಸೂಚಿಸಿದರು.ಅದರಂತೆ ಈಗಲೂ ಸಹ ಉತ್ಸವ ನಡೆಸಲಾಗುತ್ತಿದೆ.

ಫೋಟೋ ಮತ್ತು ಲೇಖನ : ಎನ್‌ .ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next