Advertisement

Sandalwood; ಇಂದು ಶ್ರೀಮುರಳಿ ಬರ್ತ್‌ಡೇ: ಅಭಿಮಾನಿಗಳಿಗೆ ‘ಬಘೀರ’ ಟೀಸರ್‌

10:41 AM Dec 17, 2023 | Team Udayavani |

ನಟ ಶ್ರೀಮುರಳಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರ “ಬ àರ’ ಚಿತ್ರದ ಟೀಸರ್‌ ಇಂದು ಬಿಡುಗಡೆಯಾಗುತ್ತಿದೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ “ಬಘೀರ’ ಚಿತ್ರದ ಟೀಸರ್‌ ಬಿಡುಗಡೆ ಮಾಡುತ್ತಿದೆ ಚಿತ್ರತಂಡ.

Advertisement

ಇನ್ನು, ಬರ್ತ್‌ ಡೇ ಹಿನ್ನೆಲೆಯಲ್ಲಿ ಇಂದು ಮುರಳಿ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಡಾ.ಸೂರಿ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸುತ್ತಿದೆ. ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಕಥೆ ಇದೆ.

ಮುರಳಿ ಕೂಡಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಈ ಹಿಂದೆ ಅವರು ಹೇಳಿದಂತೆ “ಬಘೀರ’ ಸಿನಿಮಾವನ್ನು ಯಾವುದೋ ಒಂದು ದೃಷ್ಟಿಕೋನದಿಂದ ನೋಡುವಂಥ ಸಿನಿಮಾವಲ್ಲ. ಇದು ಕೇವಲ ಆ್ಯಕ್ಷನ್‌ ಸಿನಿಮಾ, ಡ್ರಾಮಾ, ಸೆಂಟಿಮೆಂಟ್‌ ಅಂಥ ಯಾವುದೋ ಒಂದು ಕೆಟಗೆರಿಗೆ ಸೇರುವ ಸಿನಿಮಾವಲ್ಲ.

ಇದರಲ್ಲಿ ಒಳ್ಳೆಯ ವಿಷಯವಿದೆ. ಸೋಶಿಯಲ್‌ ಮೆಸೇಜ್‌ ಇದೆ. ನಮ್ಮ ನಡುವೆಯೇ ಹೇಳಿಕೊಳ್ಳಲಾಗದ ಹಲವು ವಿಚಾರಗಳಿವೆ ಎಂದಿದ್ದಾರೆ. ಈ ಚಿತ್ರಕ್ಕಾಗಿ ಮುರಳಿ ಸಾಕಷ್ಟು ವರ್ಕೌಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next