Advertisement

ಕೊಲ್ಲೂರು ದೇಗುಲ: ದಾಖಲೆಯ ಹುಂಡಿ ಹಣ ಸಂಗ್ರಹ: 2 ತಿಂಗಳಲ್ಲಿ 1.36 ಕೊ.ರೂ. ಕಾಣಿಕೆ

01:18 AM Nov 11, 2021 | Team Udayavani |

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ 2 ತಿಂಗಳ ಅವಧಿಯಲ್ಲಿ ಭಕ್ತರಿಂದ ಸಂಗ್ರಹವಾದ ಹುಂಡಿ ಕಾಣಿಕೆ ಹಣದ ಲೆಕ್ಕಾಚಾರ ಬುಧವಾರ ನಡೆದಿದ್ದು, ದಾಖಲೆಯ 1.36 ಕೋಟಿ ರೂ. ಲಭಿಸಿದೆ. ಇದು ಕ್ಷೇತ್ರದ ಚರಿತ್ರೆಯಲ್ಲೇ ದಾಖಲೆ.

Advertisement

ಈವರೆಗೆ ಕೊರೊನಾ ನಿಯಮಾವಳಿ ಅನುಸಾರವಾಗಿ ಭಕ್ತರ ಪ್ರವೇಶಕ್ಕೆ ದೇಗುಲಗಳಲ್ಲಿ ನಿರ್ಬಂಧ ಇದ್ದ ಹಿನ್ನೆಲೆಯಲ್ಲಿ ಆದಾಯ ಬಹಳಷ್ಟು ಕುಸಿದಿತ್ತು. 2 ವರ್ಷಗಳಿಂದೀಚೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಇದೀಗ ನಿರ್ಬಂಧ ಸಡಿಲಿಕೆಯಿಂದ ಕಳೆದ 2 ತಿಂಗಳಿನಿಂದ ಕೊಲ್ಲೂರು ದೇಗುಲಕ್ಕೆ ಪ್ರತಿದಿನ ಕನಿಷ್ಠ 8 ಸಾವಿರದಷ್ಟು ಭಕ್ತರು ಆಗಮಿಸಿ ವಿವಿಧ ಹರಕೆಯೊಡನೆ ಶ್ರೀದೇವಿಗೆ ಕಾಣಿಕೆ ರೂಪದಲ್ಲಿ ಚಿನ್ನಾಭರಣ ಸಹಿತ ನಗದು ಅರ್ಪಿಸುತ್ತಿದ್ದಾರೆ.

ನ. 10ರಂದು ಹುಂಡಿಯಲ್ಲಿ 585 ಗ್ರಾಂ ಚಿನ್ನ ಹಾಗೂ 6,400 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. 2020ನೇ ಸಾಲಿನ ನವರಾತ್ರಿಯಂದು 92,00,000 ರೂ. ಸಂಗ್ರಹವಾಗಿತ್ತು. ಚಿನ್ನ 615 ಗ್ರಾಂ ಹಾಗೂ ಬೆಳ್ಳಿ 3,500 ಗ್ರಾಂ ಸಂಗ್ರಹವಾಗಿತ್ತು. 3 ವರುಷಗಳ ಹಿಂದೆ 3 ತಿಂಗಳ ಅವಧಿಯಲ್ಲಿ 1.11 ಕೋಟಿ ರೂ. ಹುಂಡಿ ಹಣ ಸಂಗ್ರಹ ದಾಖಲೆಯಾಗಿದ್ದರೆ, ಈದೀಗ ಕೊರೊನಾ ಸಂದರ್ಭದಲ್ಲಿ ಕೇವಲ 52 ದಿನಗಳಲ್ಲಿ 1.36 ಕೋಟಿ ರೂ. ಸಂಗ್ರಹವಾಗಿದೆ.

ಇದನ್ನೂ ಓದಿ:ಗ್ರಾಮೀಣ ಪ್ರದೇಶದಲ್ಲಿ 5ಜಿ ಸೌಲಭ್ಯ : ವಿಐ-ನೋಕಿಯಾ ಯಶಸ್ವಿ ಪ್ರಯೋಗ

ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಮಹೇಶ ಹಾಗೂ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸಮಿತಿ ಸದಸ್ಯರಾದ ಗೋಪಾಲಕೃಷ್ಣ ನಾಡ, ಸಂಧ್ಯಾರಮೇಶ, ರತ್ನಾ ರಮೇಶ ಕುಂದರ್‌, ಉಪಕಾರ್ಯ ನಿರ್ವಹಣಾಧಿ ಕಾರಿ ಗೋವಿಂದ ನಾಯ್ಕ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next