Advertisement
ಸ್ಥಳೀಯವಾಗಿ ಹಾಗೂ ನೆರೆಯ ಕೇರಳ, ತಮಿಳುನಾಡು, ಆಂದ್ರಪ್ರದೇಶ ಹಾಗೂ ಮಹರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಲ್ಲಿ ಭಕ್ತರನ್ನು ಹೊಂದಿರುವ ಈ ದೇವಿಯೂ ಸ್ಥಳೀಯರ ಗ್ರಾಮದೇವತೆಯಾಗಿದ್ದು,ಶ್ರೀ ಪಿರಿಯಾಪಟ್ಟಣದಮ್ಮ ಎಂದೇ ಪ್ರಸಿದ್ಧಿಯಾಗಿದೆ.
Related Articles
Advertisement
ಶ್ರೀ ಮಸಣಿಕಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಬಿ.ಎಂ.ರಸ್ತೆ, ಹಾಗೂ ಅಂಗಡಿ ಮುಗಂಟ್ಟುಗಳು ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು, ಅತ್ಯುತ್ತಮವಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳಿಗೆ ದೀಪಾಲಂಕಾರ ಮಾಡಿದವರಿಗೆ ಪುರಸಭೆ ವತಿಯಿಂದ ವಿಶೇಷ ಬಹುಮಾನವನ್ನು ನೀಡುವುದಾಗಿ ಪುರಸಭಾ ಆಡಳಿತ ಮಂಡಳಿ ಘೋಷಿಸಿದೆ.
ಇತಿಹಾಸ:
ಈ ದೇವಾಲಯವು ಹೋಯ್ಸಳ ಶೈಲಿಯಲ್ಲಿ ನಿರ್ಮಿತವಾಗಿದೆ. 12ನೇ ಶತಮಾನದ ಆದಿ ಭಾಗದಲ್ಲಿ ನಿರ್ಮಾಣಗೊಂಡ ದೇವಾಲಯದಲ್ಲಿ ಕಂಠೀರವ ನರಸರರಾಜ ಓಡೆಯರ ಕಾಲದಲ್ಲಿ ದಾಳಿ ನಡೆದ ಸಂದರ್ಭ ಯುದ್ಧದ ಗೆಲುವಿನ ಸಂಕೇತವಾಗಿ ದೇವಾಲಯದ ಮೂಲ ಮೂರ್ತಿಯನ್ನು ಕೊಂಡ್ಯೋದನೆಂದು ಇತಿಹಾಸ ತಿಳಿಸುತ್ತದೆ.
ಪ್ರಸ್ತುತ ಈ ದೇವಾಲಯ ಮೂಲಮೂರ್ತಿಯನ್ನು ಮೈಸೂರಿನ ತ್ರಿನೇಶ್ವರ ದೇವಾಲಯದ ಹಿಂಭಾಗದಲ್ಲಿ ಪಿರಿಯಾಪಟ್ಟಣದ ಚಾಮುಂಡೇಶ್ವರಿ ಎಂದು ಬರೆದು ಇಡಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ. 1644 ಯುದ್ಧದ ನಂತರ ಪಾಳಾಬಿದ್ದ ದೇವಾಲಯವನ್ನು ನಾರಸಿಂಗ ಪಟ್ಟಣ ನಿರ್ಮಾಣವಾಗಿ ಕೋಟೆ ನಿರ್ಮಿಸಿದಾಗ ಕೋಟೆ ಹೊರಗೆ ಶಕ್ತಿ ದೇವತೆಯನ್ನು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಈ ದೇವಾಲಯವು ಮಸಣೀಕಮ್ಮ ದೇವರಾಗಿ ಪ್ರಸಿದ್ದಿ ಹೊಂದಿದ್ದು ಇದನ್ನು ಪಿರಿಯಾಪಟ್ಟಣದಮ್ಮ ಎಂದು ಕರೆಯುವುದುಂಟು.
ಜಿಲ್ಲೆಯಲ್ಲಿ ಅಧಿಕ ಆದಾಯ ಹೊಂದಿರುವ ಈ ದೇವಾಲಯಗಳಲ್ಲಿ ಮೂರನೆ ಸ್ಥಾನದಲ್ಲಿದ್ದು, ಪ್ರಸ್ತುತ ಈ ದೇವಾಲಯವು ಮುಜಾರಾಯಿ ಇಲಾಖೆಯ ಅಧೀನದಲ್ಲಿದೆ.
-ಪಿ.ಎನ್.ದೇವೇಗೌಡ, ಪಿರಿಯಾಪಟ್ಟಣ