Advertisement

ಭಾರತ ವಿರುದ್ಧದ ಟಿ20-ಏಕದಿನ ಸರಣಿಗೆ ಶ್ರೀಲಂಕಾ ವನಿತಾ ತಂಡ ಪ್ರಕಟ

04:01 PM Jun 20, 2022 | Team Udayavani |

ಕೊಲಂಬೋ: ಭಾರತ ವನಿತಾ ಕ್ರಿಕೆಟ್ ತಂಡದ ವಿರುದ್ಧದ ತವರಿನಲ್ಲಿ ನಡೆಯಲಿರುವ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಗೆ ಶ್ರೀಲಂಕಾ ತಂಡ ಆಯ್ಕೆ ಮಾಡಲಾಗಿದೆ.

Advertisement

ನಾಯಕಿ ಚಾಮರಿ ಅತ್ತಪತ್ತು ಎರಡೂ ತಂಡಗಳನ್ನು ಮುನ್ನಡೆಸಲಿದ್ದಾರೆ.ಹಾಸಿನಿ ಪೆರೇರಾ, ನೀಲಾಕ್ಷಿ ಡಿ ಸಿಲ್ವಾ, ಓಶಾದಿ ರಣಸಿಂಗ್ ಮತ್ತು ಇನೋಕಾ ರಣವೀರರಂತಹ ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನಷ್ಟೇ ಏಕದಿನ ತಂಡಕ್ಕೆ ಪದರ್ಪಣೆ ಮಾಡಬೇಕಿರುವ ವಿಶ್ಮಿ ಗುಣರತ್ನೆ ಎರಡೂ ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್ 23ರಿಂದ 27ರವರೆಗೆ ಡಾಂಬುಲಾದಲ್ಲಿ ಮೂರು ಟಿ20 ಪಂದ್ಯಗಳು ನಡೆಯಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ ಒಂದರಿಂದ ಏಳರವರೆಗೆ ಪಲ್ಲೆಕೆಲೆಯಲ್ಲಿ ನಡೆಯಲಿದೆ. ಈ ಸರಣಿಯು 2022-25ರ ಐಸಿಸಿ ವನಿತಾ ಚಾಂಪಿಯನ್ ಶಿಪ್ ನ ಭಾಗವಾಗಿರಲಿದೆ.

ಶ್ರೀಲಂಕಾ ತಂಡ: ತಂಡ: ಚಾಮರಿ ಅತ್ತಪತ್ತು (ನಾ), ಹಾಸಿನಿ ಪೆರೇರಾ, ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ, ಓಶಾಧಿ ರಣಸಿಂಗ್, ಸುಗಂದಿಕಾ ಕುಮಾರಿ, ಇನೋಕಾ ರಣವೀರಂ, ಅಚಿನಿ ಕುಲಸೂರ್ಯ, ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ಮಲ್ಶ ಶೆಹಾನಿ, ಅಮಾ ಕಾಂಚನಾ, ಉದೇಶಿಕಾ ಪ್ರಬೋಧನಿ, ರಶ್ಮಿ ಡಿ ಸಿಲ್ವಾ, ಹನ್ಸಿಮಾ ಕರುಣಾರತ್ನೆ, ಕೌಶಾನಿ ನುತ್ಯಂಗನ, ಸತ್ಯ ಸಂದೀಪನಿ, ತಾರಿಕಾ ಸೆವ್ವಂಡಿ.

ಭಾರತ ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉ.ನಾ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿ.ಕೀ), ಎಸ್ ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ಸಿಮ್ರಾನ್ ಬಹದ್ದೂರ್, ರಿಚಾ ಘೋಷ್ (ವಿ.ಕೀ), ಪೂಜಾನಾ ವಸ್ತ್ರಾಕರ್ ಸಿಂಗ್, ರೇಣುಕಾ ಸಿಂಗ್, ಜೆಮಿಮಾ ರಾಡ್ರಿಗಸ್, ರಾಧಾ ಯಾದವ್.

Advertisement

ಭಾರತ ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉ.ನಾ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿ.ಕೀ), ಎಸ್ ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ಸಿಮ್ರಾನ್ ಬಹದ್ದೂರ್, ರಿಚಾ ಘೋಷ್ (ವಿ.ಕೀ), ಪೂಜಾ ವಸ್ತ್ರಾಕರ್, ಮೇಘನಾ ವಸ್ತ್ರಾಕರ್ ಸಿಂಗ್, ರೇಣುಕಾ ಸಿಂಗ್, ತಾನಿಯಾ ಭಾಟಿಯಾ (ವಿ.ಕೀ), ಹರ್ಲೀನ್ ಡಿಯೋಲ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next