Advertisement

ಲಂಕಾ ಸಂಸತ್‌ ಅಮಾನತು ತೆರವುಗೊಳಿಸಿದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ

11:56 AM Nov 01, 2018 | udayavani editorial |

ಕೊಲಂಬೋ : ಶ್ರೀಲಂಕೆಯ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಸಂಸತ್‌ ಅಮಾನತನ್ನು ತೆರವುಗೊಳಿಸಿದ್ದಾರೆ. ಪ್ರಧಾನಿ ರಣಿಲ್‌ ವಿಕ್ರಮಸಿಂಘ ಅವರ ಹಠಾತ್‌ ಪದಚ್ಯುತಿಯಿಂದ ದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು ಕೊನೆಗಾಣಿಸುವ ದಿಶೆಯಲ್ಲಿ ಸಿರಿಸೇನ ಅವರು ಶಾಸಕರ ಸಭೆಯನ್ನು ನಡೆಸಿದ್ದಾರೆ. 

Advertisement

ಕಳೆದ ಶುಕ್ರವಾರ ಅತ್ಯಂತ ನಾಟಕೀಯ ವಿದ್ಯಮಾನವಾಗಿ ಅಧR$Ò ಸಿರಿಸೇನ ಅವರು ವಿಕ್ರಮಸಿಂಘ ಅವರನ್ನು ಹುದ್ದೆಯಿಂದ ಕಿತ್ತು ಹಾಕಿ ಅವರ ಸ್ಥಾನದಲ್ಲಿ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಷ ಅವರನ್ನು ಸ್ಥಾಪಿಸಿದರು. 

ಮಾತ್ರವಲ್ಲದೆ ನ.16ರ ವರೆಗೆ ದೇಶದ ಸಂಸತ್ತನ್ನು ಅಮಾನತುಗೊಳಿಸಿದ್ದರು. ಆ ಮೂಲಕ ವಿಕ್ರಮಸಿಂಘ ಅವರ ಪಾಳಯದಿಂದ ರಾಜಪಕ್ಷ ಅವರ ಪಾಳಯದೆಡೆಗೆ ಸಾಗುವ ಚತುರಮತಿಗಳಿಗೆ ಸಮಯಾವಕಾಶವನ್ನು ಕಲ್ಪಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next