Advertisement

ಶ್ರೀಲಂಕಾ ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆ ದಾಳಿ, 50 ಮಂದಿಗೆ ಗಾಯ

12:11 PM Jul 22, 2022 | Team Udayavani |

ಕೊಲಂಬೊ: ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆಗೊಂಡ ಬೆನ್ನಲ್ಲೇ ಲಂಕಾದ ಭದ್ರತಾ ಪಡೆಗಳು ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಶಿಬಿರದ ಮೇಲೆ ದಾಳಿ ನಡೆಸಿರುವ ಘಟನೆ ಶುಕ್ರವಾರ (ಜುಲೈ 22) ನಡೆದಿದೆ.

Advertisement

ಇದನ್ನೂ ಓದಿ:ಕಾಂಗ್ರೆಸ್ ನವರು ದೇಶವನ್ನು 70 ವರ್ಷ ಲೂಟಿ ಮಾಡಿದ್ದಾರೆ: ಸಚಿವ ಅಶೋಕ್

ರಾನಿಲ್ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಪ್ರತಿಭಟನಾಕಾರರ ಎರಡು ಸಂಘಟನೆಗಳು ಆರೋಪಿಸಿವೆ.

ನೂರಾರು ಪೊಲೀಸರು 12ಕ್ಕೂ ಅಧಿಕ ಪ್ರತಿಭಟನಾಕಾರರ ಕ್ಯಾಂಪ್ ಗಳನ್ನು ರೈಫಲ್ ಗಳಿಂದ ಹೊಡೆದು ತೆರವುಗೊಳಿಸಲು ಯತ್ನಿಸುತ್ತಿರುವ ಫೂಟೇಜ್ ಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಹಿಂಸಾಚಾರಕ್ಕೊಳಗಾಗಿದ್ದ ಪ್ರದೇಶಗಳಲ್ಲಿ ಸೇನಾಪಡೆಗಳು ಮುಂಜಾನೆ ಪಥಸಂಚಲನ ನಡೆಸಿದ್ದು, ಅಧ್ಯಕ್ಷರ ಸಚಿವಾಲಯದ ಮುಂಭಾಗದಲ್ಲಿ ಹಾದು ಹೋಗುವ ಸಂದರ್ಭದಲ್ಲಿ ಎರಡೂ ಕಡೆ ಇದ್ದ ಪ್ರತಿಭಟನಾಕಾರರ ಟೆಂಟ್ ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿರುವ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ.

Advertisement

ದೇಶದಿಂದ ಪರಾರಿಯಾಗಿರುವ ಗೊಟಬಯ ರಾಜಪಕ್ಸೆಯ ನಿಕಟವರ್ತಿಯಾಗಿರುವ ನೂತನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅಧಿಕಾರಕ್ಕೇರಿದ ನಂತರ ಪ್ರತಿಭಟನಾಕಾರರನ್ನು ಹತ್ತಿಕ್ಕಲಿದ್ದಾರೆ ಎಂಬ ಭಯ ಇದೀಗ ನಿಜವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಭದ್ರತಾ ಪಡೆಯ ದಾಳಿಯಲ್ಲಿ ಕನಿಷ್ಠ 50 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಇದರಲ್ಲಿ ಕೆಲವು ಪತ್ರಕರ್ತರೂ ಸೇರಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೊಂದು ವ್ಯವಸ್ಥಿತ ಮತ್ತು ಪೂರ್ವನಿಯೋಜಿತ ದಾಳಿಯಾಗಿದೆ ಎಂದು ಪ್ರತಿಭಟನಾ ಸಂಘಟನೆಯ ಚಾಮೀರಾ ದೆಡ್ದವಾಗೆ ರಾಯಿಟರ್ಸ್ ಗೆ ತಿಳಿಸಿದ್ದಾರೆ. ಭದ್ರತಾ ಪಡೆ ಜನರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next