Advertisement

ಪಾಕಿಸ್ಥಾನ vs ಶ್ರೀಲಂಕಾ ದ್ವಿತೀಯ ಟೆಸ್ಟ್‌: ಮೊದಲ ದಿನ ಲಂಕಾ ಮೇಲುಗೈ

06:25 PM Jul 24, 2022 | Team Udayavani |

ಗಾಲೆ: ಪ್ರವಾಸಿ ಪಾಕಿಸ್ಥಾನ ವಿರುದ್ಧ ರವಿವಾರ ಆರಂಭಗೊಂಡ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ಮೇಲುಗೈ ಸಾಧಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 315 ರನ್‌ ಪೇರಿಸಿದೆ.

Advertisement

ತಮ್ಮ ಅಮೋಘ ಬ್ಯಾಟಿಂಗ್‌ ಪ್ರದರ್ಶನವನ್ನು ಮುಂದುವರಿಸಿದ ದಿನೇಶ್‌ ಚಂಡಿಮಾಲ್‌ 80 ರನ್‌ ಕೊಡುಗೆ ಸಲ್ಲಿಸಿದರು. ಆರಂಭಿಕರಾದ ಒಶಾದ ಫೆರ್ನಾಂಡೊ 50 ಮತ್ತು ದಿಮುತ್‌ ಕರುಣಾರತ್ನೆ 40 ರನ್‌ ಹೊಡೆದರು. ಇವರಿಬ್ಬರ ಮೊದಲ ವಿಕೆಟ್‌ ಜತೆಯಾಟದಲ್ಲಿ 92 ರನ್‌ ಒಟ್ಟುಗೂಡಿತು.

ಈ ಹಂತದಲ್ಲಿ ಶ್ರೀಲಂಕಾ ಕ್ಷಿಪ್ರ ಕುಸಿತವೊಂದನ್ನು ಕಂಡಿತು. 120 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಬಿತ್ತು. ಆಗ ಏಂಜೆಲೊ ಮ್ಯಾಥ್ಯೂಸ್‌ (42) ಚಂಡಿಮಾಲ್‌ ಕುಸಿತಕ್ಕೆ ತಡೆಯೊಡ್ಡಿ ನಿಂತರು. ಧನಂಜಯ ಡಿ ಸಿಲ್ವ 33 ರನ್‌ ಹೊಡೆದರು. 42 ರನ್‌ ಗಳಿಸಿರುವ ನಿರೋಷನ್‌ ಡಿಕ್ವೆಲ್ಲ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಪಾಕಿಸ್ಥಾನ ಪರ ಆಘಾ ಸಲ್ಮಾನ್‌ 2 ವಿಕೆಟ್‌ ಉರುಳಿಸಿದರು. ಗಾಲೆಯಲ್ಲೇ ಆಡಲಾದ ಮೊದಲ ಟೆಸ್ಟ್‌ ಪಂದ್ಯವನ್ನು ಪಾಕ್‌ 4 ವಿಕೆಟ್‌ಗಳಿಂದ ಜಯಿಸಿತ್ತು. ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ಶ್ರೀಲಂಕಾ ಈ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next