Advertisement

ಶ್ರೀಲಂಕಾ-ಆಸ್ಟ್ರೇಲಿಯ ಗಾಲೆ ಟೆಸ್ಟ್‌: ಸ್ಟೀವನ್‌ ಸ್ಮಿತ್‌, ಲಬುಶೇನ್‌ ಶತಕ

11:33 PM Jul 08, 2022 | Team Udayavani |

ಗಾಲೆ: ಆತಿಥೇಯ ಶ್ರೀಲಂಕಾ ವಿರುದ್ಧ ಶುಕ್ರವಾರ ಗಾಲೆಯಲ್ಲಿ ಆರಂಭಗೊಂಡ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯ 5 ವಿಕೆಟಿಗೆ 298 ರನ್‌ ಗಳಿಸಿದೆ.

Advertisement

ಮಾರ್ನಸ್‌ ಲಬುಶೇನ್‌ ಮತ್ತು ಸ್ಟೀವನ್‌ ಸ್ಮಿತ್‌ ಅವರ ಶತಕ ಆಸೀಸ್‌ ಸರದಿಯ ಆಕರ್ಷಣೆ ಆಗಿತ್ತು.

ಲಬುಶೇನ್‌ 156 ಎಸೆತ ನಿಭಾಯಿಸಿ 104 ರನ್‌ ಹೊಡೆದರು (12 ಬೌಂಡರಿ). ಸ್ಮಿತ್‌ 109 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (212 ಎಸೆತ, 14 ಬೌಂಡರಿ).

ಡೇವಿಡ್‌ ವಾರ್ನರ್‌ (5) ಅವರನ್ನು ಬೇಗನೇ ಬೌಲ್ಡ್‌ ಮಾಡಿದ ಕಸುನ್‌ ರಜಿತ ಲಂಕೆಗೆ ಮೇಲುಗೈ ಒದಗಿಸಿದರು. ಖ್ವಾಜಾ 37 ರನ್‌ ಮಾಡಿ ನಿರ್ಗಮಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next