Advertisement

ಶೀಘ್ರವೇ ಶ್ರೀಲಂಕಾ ಮಂತ್ರಿಮಂಡಲ ವಿಸ್ತರಣೆ?

11:49 PM Jul 23, 2022 | Team Udayavani |

ಕೊಲಂಬೋ: ಶ್ರೀಲಂಕಾದಲ್ಲಿ ನೂತನವಾಗಿ ರಾಷ್ಟ್ರಪತಿಯಾಗಿ ಪ್ರಮಾಣ ಸ್ವೀಕರಿಸಿರುವ ರೆನಿಲ್‌ ವಿಕ್ರಮಸಿಂಘೆ ಅವರು ಶೀಘ್ರವೇ ಮಂತ್ರಿ ಮಂಡಲ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.

Advertisement

ಪ್ರಧಾನಿ ದಿನೇಶ್‌ ಗುಣವರ್ದೆನ ಅವರೊಂದಿಗೆ ಒಟ್ಟು 18 ಸದಸ್ಯರನ್ನು ಶುಕ್ರವಾರ ಸಂಸತ್ತಿಗೆ ನೇಮಕ ಮಾಡಿಕೊಳ್ಳಲಾಗಿದೆ. ಸರ್ವ ಪಕ್ಷಗಳ ಸರಕಾರ ರಚನೆ ಯಾಗಲಿರುವ ಹಿನ್ನೆಲೆ ಒಟ್ಟು 30 ಸಚಿವರನ್ನು ಒಳಗೊಂಡ ಮಂತ್ರಿ ಮಂಡಲ ರಚನೆಯಾಗುವ ಸಾಧ್ಯತೆಯಿದೆ. ಶೀಘ್ರವೇ ಸಚಿವ ಸಂಪುಟವು ವಿಸ್ತರಣೆಯಾಗಲಿದೆ ಎಂದು ಪ್ರವಾಸೋದ್ಯಮ ಸಚಿವರಾಗಿರುವ ಹರಿನ್‌ ಫ‌ರ್ನಾಂಡೋ ಅವರು ತಿಳಿಸಿದ್ದಾರೆ.

ಬೆಲೆಬಾಳುವ ಕಲಾಕೃತಿಗಳು ನಾಪತ್ತೆ: ಇತ್ತೀಚೆಗೆ, ರೊಚ್ಚಿಗೆದ್ದ ಶ್ರೀಲಂಕಾದ ಜನತೆ ಅಲ್ಲಿನ ರಾಷ್ಟ್ರಾಧ್ಯಕ್ಷರ ನಿವಾಸಕ್ಕೆ ನುಗ್ಗಿ ಮಜಾ ಹೊಡೆದಿದ್ದು ಎಲ್ಲರಿಗೂ ನೆನಪಿರಬಹುದು. ಈಗ ನೂತನ ಅಧ್ಯಕ್ಷರ ಆಯ್ಕೆಯಾಗಿದ್ದು ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರಿಗಾಗಿ ಬಂಗಲೆಯನ್ನು ಸಜ್ಜುಗೊಳಿಸಲು ಮುಂದಾದ ಸಿಬಂದಿಯು ಬಂಗಲೆಯನ್ನು ಪರಿಶೀಲಿಸಲಾಗಿ, ಅದರ ಲ್ಲಿದ್ದ ಸುಮಾರು 1 ಸಾವಿರದಷ್ಟು ಕಲಾಕೃತಿಗಳು ನಾಪತ್ತೆ ಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next