Advertisement

ಏಕದಿನ ಪಂದ್ಯ: 300 ರನ್‌ ಬಾರಿಸಿಯೂ ಆಸ್ಟ್ರೇಲಿಯ ವಿರುದ್ಧ ಸೋತ ಶ್ರೀಲಂಕಾ

10:54 PM Jun 15, 2022 | Team Udayavani |

ಪಲ್ಲೆಕೆಲೆ: ಆತಿಥೇಯ ಶ್ರೀಲಂಕಾ ಎದುರಿನ ಟಿ20 ಸರಣಿಯನ್ನು ಗೆದ್ದ ಆಸ್ಟ್ರೇಲಿಯ ಮೊದಲ ಏಕದಿನ ಪಂದ್ಯವನ್ನು ಡಿ-ಎಲ್‌ ನಿಯಮದಂತೆ 2 ವಿಕೆಟ್‌ಗಳಿಂದ ಜಯಿಸಿ ಶುಭಾರಂಭ ಮಾಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 7 ವಿಕೆಟಿಗೆ ಭರ್ತಿ 300 ರನ್‌ ಪೇರಿಸಿತು. 13ನೇ ಓವರ್‌ ವೇಳೆ ಮಳೆ ಸುರಿದುದರಿಂದ ಆಸ್ಟ್ರೇಲಿಯಕ್ಕೆ ಗುರಿಯನ್ನು ಮರು ನಿಗದಿ ಗೊಳಿಸಲಾಯಿತು. 44 ಓವರ್‌ಗಳಲ್ಲಿ 282 ರನ್‌ ಟಾರ್ಗೆಟ್‌ ಲಭಿಸಿತು. ಮ್ಯಾಕ್ಸ್‌ವೆಲ್‌ ಅವರ ಪ್ರಚಂಡ ಬ್ಯಾಟಿಂಗ್‌ ಸಾಹಸ ದಿಂದ ಆಸೀಸ್‌ 42.3 ಓವರ್‌ಗಳಲ್ಲಿ 8 ವಿಕೆಟಿಗೆ 282 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಮ್ಯಾಕ್ಸ್‌ವೆಲ್‌ 7ನೇ ಕ್ರಮಾಂಕದಲ್ಲಿ ಆಡಲಿಳಿದು 51 ಎಸೆತಗಳಿಂದ ಅಜೇಯ 80 ರನ್‌ ಬಾರಿಸಿದರು. ಸಿಡಿಸಿದ್ದು 6 ಸಿಕ್ಸರ್‌ ಹಾಗೂ 6 ಫೋರ್‌. ಅಂತಿಮ 2 ಓವರ್‌ಗಳಲ್ಲಿ ಆಸೀಸ್‌ ಜಯಕ್ಕೆ 12 ರನ್‌ ಬೇಕಿತ್ತು. “ಮ್ಯಾಕ್ಸಿ’ 43ನೇ ಓವರ್‌ನ 2-3ನೇ ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿ ಲೆಕ್ಕ ಚುಕ್ತಾ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next