Advertisement

ಶ್ರೀಲಂಕಾಕ್ಕೆ ಇನ್ನಿಂಗ್ಸ್‌ ಗೆಲುವು; ಸರಣಿ ಸಮಬಲ: ಚಂಡಿಮಾಲ್‌ ದ್ವಿಶತಕ

11:17 PM Jul 11, 2022 | Team Udayavani |

ಗಾಲೆ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವು ಇನ್ನಿಂಗ್ಸ್‌ ಮತ್ತು 39 ರನ್ನುಗಳಿಂದ ಗೆಲುವು ಸಾಧಿಸಿದೆ.

Advertisement

ಇದರಿಂದಾಗಿ ಎರಡು ಪಂದ್ಯಗಳ ಟೆಸ್ಟ್‌ ಸರಣಿ 1-1ರಿಂದ ಸಮಬಲದಲ್ಲಿ ಅಂತ್ಯಗೊಂಡಿತು.

ಆಸ್ಟ್ರೇಲಿಯದ 364 ರನ್ನಿಗೆ ಉತ್ತರ ವಾಗಿ ಶ್ರೀಲಂಕಾ ತಂಡವು ದಿನೇಶ್‌ ಚಂಡಿಮಾಲ್‌ ಅವರ ಅಜೇಯ ದ್ವಿಶತಕದ ಸಾಧನೆಯಿಂದ 554 ರನ್‌ ಗಳಿಸಿ ಆಲೌಟಾಯಿತು. ಇದರಿಂದಾಗಿ ಆತಿಥೇಯ ತಂಡ 190 ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್‌ ನಡೆ ಸಿದ ಆಸ್ಟ್ರೇಲಿಯ ತಂಡವು ಅಂತಿಮ ದಿನವಾದ ಸೋಮವಾರ ಪ್ರಭಾತ್‌ ಜಯಸೂರ್ಯ ಅವರ ಬಿಗು ದಾಳಿಗೆ ತತ್ತರಿಸಿ ಕೇವಲ 151 ರನ್ನಿಗೆ ಆಲೌಟಾಗಿ ಇನ್ನಿಂಗ್ಸ್‌ ಸೋಲು ಕಂಡಿತು.

ಆಸ್ಟ್ರೇಲಿಯ ವಿರುದ್ಧ ಸರಣಿ ಸಮ
ಬಲಗೊಳಿಸಿರುವುದು ಶ್ರೀಲಂಕಾದ ಬಲುದೊಡ್ಡ ಸಾಧನೆಯಾಗಿದೆ. ಇದಕ್ಕೆ ಚಂಡಿಮಾಲ್‌ ಅವರ ಜೀವ ನಶ್ರೇಷ್ಠ ನಿರ್ವಹಣೆ ಮತ್ತು ಪ್ರಭಾತ್‌ ಜಯಸೂರ್ಯ ಅವರ ಅದ್ಭುತ ನಿರ್ವ ಹಣೆ ಕಾರಣವಾಗಿದೆ. ಟೆಸ್ಟ್‌ಗೆ ಪದಾ ರ್ಪಣೆಗೈದ ಪಂದ್ಯದಲ್ಲಿಯೇ ಜಯ ಸೂರ್ಯ ಒಟ್ಟಾರೆ 12 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ.

Advertisement

ಸಂಕ್ಷಿಪ್ತ ಸ್ಕೋರು
ಶ್ರೀಲಂಕಾ 554 (ಚಂಡಿಮಾಲ್‌ 206 ಔಟಾಗದೆ, ಕರುಣರತ್ನೆ 86, ಕುಸಲ್‌ ಮೆಂಡಿಸ್‌ 85, ಸ್ಟಾರ್ಕ್‌ 89ಕ್ಕೆ 4, ಸ್ವೀಪ್ಸನ್‌ 103ಕ್ಕೆ 3); ಆಸ್ಟ್ರೇಲಿಯ 364 ಮತ್ತು 151 (ಲಬುಸ್‌ಚಾಗ್ನೆ 32, ಪ್ರಭಾತ್‌ ಜಯಸೂರ್ಯ 59ಕ್ಕೆ 6, ತೀಕ್ಷಣ 29ಕ್ಕೆ 2, ರಮೇಶ್‌ ಮೆಂಡಿಸ್‌ 47ಕ್ಕೆ 2).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next