Advertisement

ಏಷ್ಯಾ ಕಪ್‌ ಸೂಪರ್‌-4: ಅಫ್ಘಾನಿಸ್ಥಾನ ವಿರುದ್ಧ ಶ್ರೀಲಂಕಾಕ್ಕೆ ರೋಚಕ ಜಯ

12:01 AM Sep 04, 2022 | Team Udayavani |

ಶಾರ್ಜಾ: ಏಷ್ಯಾ ಕಪ್‌ “ಸೂಪರ್‌ ಫೋರ್‌’ ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ 4 ವಿಕೆಟ್‌ಗಳಿಂದ ಅಫ್ಘಾನಿಸ್ಥಾನವನ್ನು ಮಣಿಸಿದೆ. ಲೀಗ್‌ ಹಂತದ ಸೋಲಿಗೆ ಸೇಡು ತೀರಿಸಿಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ 6 ವಿಕೆಟಿಗೆ 175 ರನ್‌ ಗಳಿಸಿದರೆ, ಶ್ರೀಲಂಕಾ 19.1 ಓವರ್‌ಗಳಲ್ಲಿ 6 ವಿಕೆಟಿಗೆ 179 ರನ್‌ ಬಾರಿಸಿತು. ಕುಸಲ್‌ ಮೆಂಡಿಸ್‌ (36), ಪಥುಮ್‌ ನಿಸ್ಸಂಕ (35) ಭದ್ರ ಬುನಾದಿ ನಿರ್ಮಿಸಿದರು. ಗುಣತಿಲಕ 33, ರಾಜಪಕ್ಸ 31 ರನ್‌ ಹೊಡೆದು ಲಂಕಾ ಗೆಲುವಿಗೆ ತಮ್ಮ ಕೊಡುಗೆ ಸಲ್ಲಿಸಿದರು.

ಅಫ್ಘಾನಿಸ್ಥಾನ ಪರ ಆರಂಭಕಾರ ರೆಹಮಾನುಲ್ಲ ಗುರ್ಬಜ್‌ 84 ರನ್‌ ಸಿಡಿಸಿದರು (45 ಎಸೆತ, 4 ಬೌಂಡರಿ, 6 ಸಿಕ್ಸರ್‌). ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

Advertisement

Udayavani is now on Telegram. Click here to join our channel and stay updated with the latest news.

Next