ಕೊಲಂಬೊ: ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ತಂಡ ಪ್ರಕಟಗೊಂಡಿದೆ.
ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಒಶಾದ ಫೆರ್ನಾಂಡೊ ತಂಡಕ್ಕೆ ಮರಳಿದ್ದಾರೆ. ಆದರೆ ಬೆನ್ನುನೋವಿನಿಂದ ಚೇತರಿಸದ ಪಥುಮ್ ನಿಸ್ಸಂಕ ಆಯ್ಕೆಯಾಗಿಲ್ಲ.
21 ವರ್ಷದ, ಅಗ್ರ ಕ್ರಮಾಂಕದ ಬ್ಯಾಟರ್ ಕಮಿಲ್ ಮಿಶಾರ ಮತ್ತು ಎಡಗೈ ಸೀಮರ್ ದಿಲ್ಶನ್ ಮದುಶಂಕ ಈ ತಂಡದ ಹೊಸಬರು.
ಶ್ರೀಲಂಕಾ ತಂಡ: ದಿಮುತ್ ಕರುಣಾರತ್ನೆ (ನಾಯಕ), ಕಮಿಲ್ ಮಿಶಾರ, ಒಶಾದ ಫೆರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವ, ಕಮಿಂಡು ಮೆಂಡಿಸ್, ನಿರೋಶನ್ ಡಿಕ್ವೆಲ್ಲ, ದಿನೇಶ್ ಚಂಡಿಮಾಲ್, ರಮೇಶ್ ಮೆಂಡಿಸ್, ಚಮಿಕ ಕರುಣಾರತ್ನೆ, ಸುಮಿಂದ ಲಕ್ಷಣ, ಕಸುನ್ ರಜಿತ, ವಿಶ್ವ ಫೆರ್ನಾಂಡೊ, ಅಸಿತ ಫೆರ್ನಾಂಡೊ, ದಿಲ್ಶನ್ ಮದುಶಂಕ, ಪ್ರವೀಣ್ ಜಯವಿಕ್ರಮ, ಲಸಿತ್ ಎಂಬುಲೆªàನಿಯ.