Advertisement
ಮುಜರಾಯಿ ಇಲಾಖೆಗೆ ಸೇರುವ ಈ ದೇವಾಲಯವನ್ನು ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಸೇವಾ ಟ್ರಸ್ಟ್ ಸದಸ್ಯರು ಒಗ್ಗೂಡಿ ಇದೀಗ ಹಳೆಯ ವಿಗ್ರಹವನ್ನು ಹಾಗೆಯೇ ಇದ್ದ ಸ್ಥಳದಲ್ಲಿಯೇ ಉಳಿಸಿಕೊಂಡು ದೇವಾಲಯ ನಿರ್ಮಿಸುವಲ್ಲಿ ಸಫಲರಾಗಿದ್ದಾರೆ.
Related Articles
Advertisement
ವರದನಾಯಕನಹಳ್ಳಿಯ ಪುರಾತನ ದೇವಿಯರಾದ ಪಟಾಲಮ್ಮದೇವಿ ಮತ್ತು ವೀರಸೊಣ್ಣಮ್ಮದೇವಿಯರ ಶಿಲಾ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಜೀರ್ಣೋದ್ಧಾರದ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ವರದನಾಯಕನಹಳ್ಳಿ ಎಂಬ ಹೆಸರು ವರದನಾಯಕ ಎಂಬ ಪಾಳೇಗಾರಸ್ಥಾಪಿಸಿದ್ದರಿಂದ ಬಂದಿದೆ ಎಂದು ಹಿರಿಯರು ಹೇಳುತ್ತಾರೆ. ಆತನ ಕನಸಿನಲ್ಲಿ ಬಂದ ಗ್ರಾಮದೇವತೆಯರು, ಗ್ರಾಮದಲ್ಲಿ ತಮಗಿರುವ ಗುಡಿ ಸಣ್ಣದು, ದೊಡ್ಡದಾಗಿ ಕಟ್ಟಿಸುವಂತೆ ಆಜ್ಞಾಪಿಸಿದಾಗ ಆತ ಈಗಿರುವ ಸ್ಥಳದಲ್ಲಿ ದೇವಿಯರಿಗೆ ಗುಡಿ ಕಟ್ಟಿಸಿದನಂತೆ. ಭೂಮಿ ಆಗಸ ಒಂದಾಗುವಂತೆ ಕಂಡ ದೇವಿಯರ ದರ್ಶನದಿಂದ ಆತ ಅವರದಾಸಾನುದಾಸನಾದ ಎಂಬುದು ಪ್ರತೀತಿ ಇದೆ. ಈ ಶಕ್ತಿದೇವತೆಗಳ ರಥೋತ್ಸವವನ್ನು ಗ್ರಾಮಸ್ಥರು ಒಗ್ಗೂಡಿ ನೆಂಟರನ್ನೆಲ್ಲಾ ಕರೆಸಿ ಆಚರಿಸುತ್ತಾರೆ. ಅನ್ನಸಂತರ್ಪಣೆ, ಪಾನಕ ಸೇವೆ, ದೀಪೋತ್ಸವ, ಮೆರವಣಿಗೆ, ಕಲಾಪ್ರದರ್ಶನ ಮುಂತಾದವುಗಳೊಂದಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಟ್ರಸ್ಟ್ ವತಿಯಿಂದ ಹಳೆಯ ದೇವಸ್ಥಾನಜೀರ್ಣೋದ್ಧಾರಗೊಳಿಸಿ ದೇವರ ವಿಗ್ರಹ ಹಾಗೂ ವಿನೂತನ ರೀತಿಯಲ್ಲಿ ದೇವಸ್ಥಾನ ಕಟ್ಟಲು ಯೋಜನೆ ರೂಪಿಸಿದ್ದು, ಅದರ ಪ್ರಯುಕ್ತ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.