ಮುಂಬಯಿ: ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನ ಮುಂಬಯಿ ಇದರ ವಿಂಶತಿ ವರ್ಷ ಸಾಂಸ್ಕೃತಿಕ ಉತ್ಸವವು ಅ. 22ರಂದು ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿದ್ದು, ಗಣ್ಯಾತಿಗಣ್ಯರು ದೀಪಪ್ರಜ್ವಲಿಸಿ ಸಂಭ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಕೃಷ್ಣ ವಿಠuಲ ಪ್ರತಿಷ್ಠಾನ ಮುಂಬಯಿ ಸಂಸ್ಥಾಪಕಾಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರ ನೇತೃತ್ವದಲ್ಲಿ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಷನ್ ಮುಂಬಯಿ ಘಟಕದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಪಾಲ್ಗೊಂಡಿದ್ದರು.
ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಪ್ರಸಿದ್ಧ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತ, ಸಮಾಜ ಸೇವೆಯಲ್ಲಿ ಸಾಧನೆಗೈದ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಸಂಗೀತ-ಕಲಾ ಕ್ಷೇತ್ರದ ಸಾಧಕ ಪದ್ಮನಾಭ ಸಸಿಹಿತ್ಲು ಅವರಿಗೆ ಸಂಸ್ಥೆಯ ವಿಂಶತಿ ಪ್ರಶಸ್ತಿ ಗೌರವವನ್ನು ಪ್ರದಾನಿಸಲಾಯಿತು.
ಅಲ್ಲದೆ ವಿವಿಧ ಕ್ಷೇತ್ರಗಳ ಸಾಧಕರುಗಳಾದ ಬೋಳ ಸೋಮಶೇಖರ್ ಭಟ್, ರಘುರಾಮ ಕೆ. ಶೆಟ್ಟಿ, ರಾಘು ಪಿ. ಶೆಟ್ಟಿ, ವಿಠಲ ಸುಂದರ್ ನಾಯಕ್, ಶ್ಯಾಮ ಎನ್. ಶೆಟ್ಟಿ, ಪಾಂಡುರಂಗ ಶೆಟ್ಟಿ, ಪದ್ಮನಾಭ ಪಯ್ಯಡೆ, ಅಜೆಕಾರು ಶಿವರಾಮ ಶೆಟ್ಟಿ, ಸಿಬಿಡಿ ಭಾಸ್ಕರ್ ಶೆಟ್ಟಿ, ಜಗನ್ನಾಥ್ ಪುತ್ರನ್, ಕೃಷ್ಣ ವಿ. ಆಚಾರ್ಯ, ಕಲ್ಯಾ ದಯಾನಂದ ಪೂಜಾರಿ, ಭುಜಂಗ ಎಂ. ಶೆಟ್ಟಿ, ಕೆ. ಎಂ. ಶೆಟ್ಟಿ, ಶಾರದಾ ಸೂರು ಕರ್ಕೇರ, ಮದ್ರಾಡಿ ದಿವಾಕರ ಶೆಟ್ಟಿ, ಸುಧೀರ್ ವಿ. ಹೆಗ್ಡೆ ಅವರನ್ನು ಶ್ರೀ ಕೃಷ್ಣವಿಠಲಾನುಗ್ರಹ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು.
ಪ್ರಾರಂಭದಲ್ಲಿ ಕರಾವಳಿಯ ಪ್ರಸಿದ್ಧ ಯಕ್ಷ ಭಾಗವತ ದಿಗ್ಗಜರುಗಳಾದ ಬಲಿಪ ನಾರಾಯಣ, ಗಾನ ಗಂಧರ್ವ ಪಟ್ಲ ಸತೀಶ್ ಶೆಟ್ಟಿ, ಲಕ್ಷ್ಮೀನಾರಾಯಣ ಪುಣಿಂಚಿತ್ತಾಯರ ಯಕ್ಷಗಾಯನ-ನಾಟ್ಯ ಸಿಂಚನ ಎಂಬ ವಿಶೇಷ ಕಾರ್ಯಕ್ರಮವು ಜನಮನ ರಂಜಿಸಿತು. ಅಪರಾಹ್ನ 2.30 ರಿಂದ ಯಕ್ಷ ಗಾಯನ-ನಾಟ್ಯ ಸಿಂಚನ ಕಾರ್ಯಕ್ರಮವು ಕು| ಪ್ರಿಯಾಂಜಲಿ ರಾವ್ ಮತ್ತು ಕು| ನಿಕಿತಾ ಸದಾನಂದ ಅಮೀನ್ ಬಳಗದಿಂದ ಹಾಗೂ ಕು| ವೈಷ್ಣವಿ ಶಶಿಧರ ಶೆಟ್ಟಿ ಅವರಿಂದ ನಡೆಯಿತು.
ಶ್ರೀ ಕೃಷ್ಣ ವಿಠuಲ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಪೆರ್ಮುದೆ ಅಶೋಕ್ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಶಾಸ್ತಿÅ, ಆರೋಗ್ಯ ಸಮೃದ್ಧಿ ಯೋಜನೆಯ ಕಾರ್ಯಾಧ್ಯಕ್ಷ ಗೋಪಾಲ್ ಎಸ್. ಪುತ್ರನ್, ಧರ್ಮ ಸಮೃದ್ಧಿ ಯೋಜನೆಯ ಕಾರ್ಯಾಧ್ಯಕ್ಷ ವಿರಾರ್ ಶಂಕರ್ ಬಿ. ಶೆಟ್ಟಿ, ಶಿಕ್ಷಣ ಸಮೃದ್ಧಿ ಯೋಜನೆಯ ಕಾರ್ಯಾಧ್ಯಕ್ಷ ಕಳತ್ತೂರು ವಿಶ್ವನಾಥ ಶೆಟ್ಟಿ, ಸಂಸ್ಕೃತಿ ಸಮೃದ್ಧಿ ಯೋಜನೆಯ ಕಾರ್ಯಾಧ್ಯಕ್ಷೆ ಸುಮಾ ವಿ. ಭಟ್, ಉಪಾಧ್ಯಕ್ಷರುಗಳಾದ ರಮೇಶ್ ಡಿ. ಸಾವಂತ್, ಹರೀಶ್ ಎಸ್. ಶೆಟ್ಟಿ, ಸುರೇಂದ್ರ ಎ. ಪೂಜಾರಿ, ಜತೆ ಕಾರ್ಯದರ್ಶಿಗಳಾದ ಶಶಿಧರ ಬಿ. ಶೆಟ್ಟಿ, ಕುಕ್ಕೆಹಳ್ಳಿ ಸದಾನಂದ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಂದಾ ಎಸ್. ಉಪಾಧ್ಯಾಯ, ಕಾರ್ಯದರ್ಶಿ ಸುಶೀಲಾ ದೇವಾಡಿಗ, ಯುವ ವಿಭಾಗದ ನವೀನ್ ಪಡು ಇನ್ನ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ-ವರದಿ : ಸುಭಾಷ್ ಶಿರಿಯಾ