Advertisement

ಮಹಿಳಾ ವಿಭಾಗದಿಂದ ಶ್ರೀಕೃಷ್ಣ ಜನ್ಮಾಷ್ಟಮಿ

01:05 PM Sep 10, 2021 | Team Udayavani |

ನಲಸೋಪರ: ಬಂಟರ ಸಂಘ ವಸಾಯಿ – ಡಹಾಣೂ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆ. 30ರಂದು ನಲಸೋಪರ ಫಾಯರ್‌ ಬ್ರಿಗೇಡ್‌ ಸಮೀಪದ ರಿಜೆನ್ಸಿ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಬಂಟರ ಸಂಘ ಮುಂಬಯಿ ಪಶ್ಚಿಮ ವಲಯ ಸಮನ್ವಯಕರಾದ ಶಶಿಧರ ಕೆ. ಶೆಟ್ಟಿ ಇನ್ನಂಜೆ ಅವರ ಸಹಕಾರದೊಂದಿಗೆ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ಪಾಂಡು ಶೆಟ್ಟಿ ಅವರ ಮಾರ್ಗದರ್ಶ ನದೊಂದಿಗೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ ಶೆಟ್ಟಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಭಜನೆ, ಕೀರ್ತನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಜಗನ್ನಾಥ ಡಿ. ಶೆಟ್ಟಿ ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯೆಯರು ಉಪಸ್ಥಿತರಿದ್ದರು.

ಇದನ್ನೂ ಓದಿ:ಮಹಿಳೆಯರು ಮಂತ್ರಿಗಳಾಗಬಾರದು, ಮಕ್ಕಳನ್ನಷ್ಟೇ ಹೆರಬೇಕು: ತಾಲಿಬಾನ್

Advertisement

Udayavani is now on Telegram. Click here to join our channel and stay updated with the latest news.

Next