ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಾ.8ರಿಂದ 13ರವರೆಗೆ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ನಡೆಯಲಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿದ್ದು, ಮಾ.8ರಿಂದ
ಪ್ರತಿದಿನ ಬೆಳಗ್ಗೆ ಗುರುರಾಯರಿಗೆ ವಿಶೇಷ ಪೂಜೆಜರುಗಲಿದೆ. ಶ್ರೀ ರಾಘವೇಂದ್ರ ವಿಜಯ ಕುರಿತಾಗಿ ಜ್ಞಾನಯಜ್ಞದಡಿ ವಿವಿಧ ಪಂಡಿತರು ವಿಶೇಷ ಉಪನ್ಯಾಸ ನೀಡುವರು.
ಮಾ.12ರಂದು ಮಹಾರುದ್ರಯಾಗ, 13ರಂದು ಚೆನ್ನೈನ ಶ್ರೀ ರಾಘವೇಂದ್ರ ಸ್ವಾಮಿ ಅವರ ನಾದಹಾರ ಸೇವಾ ಟ್ರಸ್ಟ್‌ನ 450 ಕಲಾವಿದರಿಂದ ನಾದಹಾರ ಸಮರ್ಪಣ ಸೇವೆ, ತಿರುಮಲದ ಶ್ರೀನಿವಾಸ ಶೇಷವಸ್ತ್ರ ಸಮರ್ಪಣ ಕಾರ್ಯಕ್ರಮ ಜರುಗಲಿದೆ. 6 ದಿನಗಳಲ್ಲಿ ತುಮಕೂರಿನ ವಿ.ಮಾರುತಾಚಾರ್, ಅಥಣಿಯ ವಿ.ಗುರುರಾಜಾಚಾರ್ ಗುಡಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಬಳ್ಳಾರಿಯ ವೆಂಕೋ ಬಾಚಾರ್ ಪಿ. ಉಡ್ಡಿಹಾಳ, ಕನ್ನಡ ವಿವಿಯ ಎ.ವಿ.ನಾವಡ, ಸಿಂಧನೂರಿನ ವಿ.ರಂಗನಾಥರಾವ್ ಸಾಲಗುಂದಾ, ಡಾ| ಹರೀಶ ಮೂರ್ತಿ ಸೇರಿ 21 ಸಾಧಕರನ್ನು ಅಭಿನಂದಿಸಲಾಗುವುದು.