Advertisement
ಇಲ್ಲಿನ ಮಹಾತ್ಮ ಗಾಂಧಿ ವೃತ್ತದಿಂದ ಕೂಗಳತೆ ದೂರದಲ್ಲಿರುವ ಶಹಪುರ ಪೇಟೆಯಲ್ಲಿ 4-10-1919ರಲ್ಲಿ ವೀರಶೈವ ತರುಣ ಸಂಘದ ವಾಚನಾಲಯ ಸ್ಥಾಪನೆಗೊಂಡಿದೆ. ಸ್ವಾತಂತ್ರ್ಯಪೂರ್ವ ಶಹಪುರ ಹಳ್ಳಿಯಾಗಿದ್ದು, ಬಳಿಕ ಕಾಲಾಂತರದಲ್ಲಿ ಅದು ಶಹಪುರ ಪೇಟೆಯಾಗಿ, ಇದೀಗ ಬಸವೇಶ್ವರ ನಗರವೆಂದು ಗುರುತಿಸಿಕೊಂಡಿದೆ.
Related Articles
Advertisement
ಹೆಚ್ಚಿದ ಓದುಗರ ಸಂಖ್ಯೆ: ಬಳಿಕ ಮತ್ತೂಮ್ಮೆ ಕೊಡುಗೈ ದಾನಿಗಳು ಲೈಬ್ರರಿ ಜೀರ್ಣೋದ್ಧಾರಕ್ಕಾಗಿ ಕೈಜೋಡಿಸಿದರು. ಅವರ ನೆರವಿನ ಫಲವಾಗಿ ಜ| ತೋಂಟದ ಸಿದ್ಧಲಿಂಗ ಸ್ವಾಮಿಗಳಿಂದ 1976ರಲ್ಲಿ ಮೊದಲ ಮಹಡಿಯೂ ಲೋಕಾರ್ಪಣೆಗೊಂಡಿತು. ವಿದ್ಯಾರ್ಥಿಗಳು-ಓದುಗರ ಅನುಕೂಲಕ್ಕಾಗಿ ಅನೇಕರು ಪುಸ್ತಕ ಖರೀದಿಸಿ ಕೊಡುತ್ತಿದ್ದರು. ಪರಿಣಾಮ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆಯೂ ಹೆಚ್ಚಿತ್ತು. 1976 ರಿಂದ ಈಚೆಗೆ ಪ್ರತಿನಿತ್ಯ ಸರಾಸರಿ 45- 50 ಜನ ಓದುಗರು ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.
ಹಲವರಿಗೆ ಜ್ಞಾನದಾಲಯ: ಶಾಲೆ, ಕಾಲೇಜಿನಿಂದ ಮರಳುತ್ತಿದ್ದ ವಿದ್ಯಾರ್ಥಿಗಳು ಗ್ರಂಥಾಲಯದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು. ಶಾಲೆ ಬಿಟ್ಟವರು, ಅಕ್ಷರ ಜ್ಞಾನ ಹೊಂದಿದವರಿಗೆ ಇದು ಜ್ಞಾನದ ಆಲಯವಾಗಿತ್ತು. ಸ್ಥಳೀಯರಿಗೆ ದೇಶ-ವಿದೇಶ ಸುದ್ದಿ ತಿಳಿಯಲೆಂದು ರೇಡಿಯೋ ವಾರ್ತೆ ಕೇಳಿಸಲಾಗುತ್ತಿತ್ತು. ಹೀಗಾಗಿ ಇತರೆ ಬಡಾವಣೆಯಿಂದಲೂ ಇಲ್ಲಿಗೆ ಜನ ಬರುತ್ತಿದ್ದರು. ಕೆಲವರು ದಿನವಿಡೀ ಇದೇ ಗ್ರಂಥಾಲಯದಲ್ಲಿ ಕಾಲ ಕಳೆಯುತ್ತಿದ್ದರು.
ಆ ಪೈಕಿ ಗದಗ ದಂಡಪ್ಪ ಮಾನ್ವಿ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ| ವೀರಣ್ಣ ಹಳೇಮನಿ, ರೋಣ ತಾಲೂಕು ಆಸ್ಪತ್ರೆಯ ಡಾ| ವೀರೇಶ ಶೆಟ್ಟರ್, ಅನೇಕರು ಇಂಜಿನಿಯರ್‌ಗಳು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇಲ್ಲಿನ ಗ್ರಂಥಗಳನ್ನು ಬಳಸಿಕೊಂಡು ಡಾ|ರಶ್ಮಿ ಅಂಗಡಿ ಅವರು ಪಿಎಚ್‌ಡಿ ಪೂರ್ಣಗೊಳಿಸಿದರು. ಇಂತಹ ಅನೇಕ ವ್ಯಕ್ತಿಗಳಿಗೆ ಈ ಗ್ರಂಥಾಲಯ ಜ್ಞಾನ ದೀವಿಗೆಯಾಗಿದೆ ಎನ್ನುತ್ತಾರೆ ವಾಚನಾಲಯದ ಆಡಳಿತ ಮಂಡಳಿ ಸದಸ್ಯ ದಾನಪ್ಪ ಬಸಪ್ಪ ತಡಸದ. ನಾನಾ ಕಾರಣಗಳಿಂದ ಸರಕಾರದ ಗ್ರಂಥಾಲಯಗಳು ನಿರ್ವಹಣೆಯಿಲ್ಲದೇ ಸೊರಗುತ್ತಿವೆ. ಆದರೆ, ಯಾರ ನೆರವೂ ಬಯಸದೇ ಸ್ಥಳೀಯರೇ ಈ ಗ್ರಂಥಾಲಯವನ್ನು ಅಚ್ಚುಕಟ್ಟಾಗಿ ಮುನ್ನಡೆಸುತ್ತಿರುವುದು ಇತರರಿಗೆ ಮಾದರಿಯಾಗಿದೆ.
ಇಲ್ಲಿವೆ ಎರಡು ಸಾವಿರ ಪುಸ್ತಕಗಳು: ವಾಚನಾಲಯ ಆರಂಭದಲ್ಲಿ ಕೇವಲ 20 ಪುಸ್ತಕಗಳಿದ್ದವು. ಬಳಿಕ ದಾನಿಗಳು ಕೊಡಿಸಿದ ಹೊಸ ಪುಸ್ತಕಗಳು, ವಿದ್ಯಾರ್ಥಿಗಳು ಓದಿ ಮುಗಿಸಿದ ಹಳೆಯ ಪುಸ್ತಕಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಂಗ್ರಹಗೊಂಡಿದ್ದವು. 2007ರಲ್ಲಿ ಜ| ತೋಂಟದಾರ್ಯ ಮಠದವರೂ ಸಾಕಷ್ಟು ಪುಸ್ತಕ ನೀಡಿದ್ದರು. ಆದರೆ, ಕೆಲವರು ಮನೆಗೆ ಕೊಂಡೊಯ್ದು, ಮತ್ತೆ ಹಿಂದಿರುಗಿಸಿಲ್ಲ. ಸದ್ಯ ಕತೆ, ಕಾದಂಬರಿ ಹಾಗೂ ವಚನ ಸಾಹಿತ್ಯಕ್ಕೆ ಸಂಬಂಧಿಸಿ ಸುಮಾರು 2000ಕ್ಕಿಂತ ಹೆಚ್ಚು ಪುಸ್ತಕಗಳು ಇವೆ. ಇಂದಿಗೂ ಪ್ರತಿನಿತ್ಯ ಬೆಳಗ್ಗೆ 7 ರಿಂದ 11, ಸಂಜೆ 4 ರಿಂದ 6 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದೆ.
ಇವರೇ ರೂವಾರಿಗಳು : ಸ್ವಾತಂತ್ರ್ಯ ಪೂರ್ವದಲ್ಲಿ ವೀರಶೈವ ತರುಣ ಸಂಘ ಕಟ್ಟಿಕೊಂಡಿದ್ದ ಮಹದೇವಪ್ಪ ಪರಪ್ಪ ಮುಧೋಳ ಅವರ ಮುಂದಾಳತ್ವದಲ್ಲಿ ಬಸಪ್ಪ ಗೂಳಪ್ಪ ತಡಸದ, ದುಂಡಪ್ಪ ಕಾಡಪ್ಪ ಮುನವಳ್ಳಿ, ಕೊಟ್ರಬಸಪ್ಪ ಚನ್ನಬಸಪ್ಪ ಬಡಿಗಣ್ಣವರ, ಮುದುಕಯ್ಯ ಮಡಿವಾಳಯ್ಯ ಹಡಗಲಿಮಠ, ವಿರೂಪಾಕ್ಷಪ್ಪ ಪಿಳ್ಳಿ ಅವರು ಸದುದ್ದೇಶದಿಂದ ಗ್ರಂಥಾಲಯ ಇಂದು ಶತಮಾನದ ಹೊಸ್ತಿಲಲ್ಲಿದೆ. ಆಗೊಮ್ಮೆ- ಈಗೊಮ್ಮೆ ಸಮಸ್ಯೆ, ಸವಾಲುಗಳನ್ನು ಕಂಡರೂ, ಎಂದೂ ಬಾಗಿಲು ಮುಚ್ಚಿಲ್ಲ ಎಂಬುದು ಗಮನಾರ್ಹ.
-ವೀರೇಂದ್ರ ನಾಗಲದಿನ್ನಿ