ಮುಂಬಯಿ: ಬೊರಿವ ಲಿಯ ಓಲ್ಡ್ ಎಂ. ಎಚ್. ಕಾಲನಿಯ ಶ್ರೀ ಅಷ್ಟವಿನಾಯಕ ಅಯ್ಯಪ್ಪ ಭಕ್ತ ವೃಂದದ 22 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಹಾಗೂ ಅನ್ನಸಂತರ್ಪಣೆಯು ಡಿ. 3 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೊರಿವಲಿಯ ಗೊರೈ ರೋಡ್‌ನ ಓಲ್ಡ್ ಎಂಎಚ್‌ಬಿ ಕಾಲನಿಯ ಶಿವಮಂ ದಿರದ ಮ್ಹಾಡ ಗ್ರೌಂಡ್‌ನಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮವು ಬೆಳಗ್ಗೆ 9 ರಿಂದ ಸಹಸ್ರ ನಾಮಾರ್ಚನೆಯೊಂದಿಗೆ ಪ್ರಾರಂಭಗೊಂಡಿತು. ಆನಂತರ ನಡೆದ ಭಜನ ಕಾರ್ಯಕ್ರಮದಲ್ಲಿ ಪೂರ್ವಾಹ್ನ 11 ರಿಂದ ಮಧ್ಯಾಹ್ನ 12 ರವರೆಗೆ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದವರು ಹಾಗೂ ವಿವಿಧ ಭಕ್ತರಿಂದ ಭಕ್ತಿಗಾನ ವೈಭವ ನಡೆಯಿತು.
ಮಧ್ಯಾಹ್ನ 12 ರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಮಂಗಳಾರತಿಯು ಶ್ರದ್ಧಾಭಕ್ತಿಯಿಂದ ನಡೆಯಿತು. ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ವಿಶ್ವನಾಥ ಗುರುಸ್ವಾಮಿ ಬೆಳಗಾಂವ್, ಮಂಜುನಾಥ ರೈ ಗುರುಸ್ವಾಮಿ ಅವರು ನೆರವೇರಿಸಿ ಭಕ್ತಾದಿಗಳನ್ನು ಹರಸಿದರು. ಕಾರ್ಯಕ್ರಮದಲ್ಲಿ ಅಷ್ಟವಿನಾಯಕ ಭಕ್ತವೃಂದದ ಗುರುಸ್ವಾಮಿಗಳು, ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.
ಕಳೆದ 22 ವರ್ಷಗಳಿಂದ ಬೊರಿವಲಿ ಪಶ್ಚಿಮದಲ್ಲಿ ಜರಗುತ್ತಿರುವ ಅಷ್ಟ ವಿನಾಯಕ ಭಕ್ತವೃಂದದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಯ್ಯಪ್ಪ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಕೃತಾರ್ಥರಾಗುತ್ತಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗುರುಸ್ವಾಮಿಗಳು, ಸ್ಥಳೀಯ ಸಂಸದರು, ರಾಜಕೀಯ ಧುರೀಣರು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ ಮಹಾಅನ್ನಸಂತರ್ಪಣೆ ನಡೆಯಿತು. ನಗರ ಹಾಗೂ ಉಪನಗರಗಳಿಂದ ಆಗಮಿಸಿದ ಸಾವಿರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ 6.30ರಿಂದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್ ಮುಂಬಯಿ ಕಲಾವಿದರಿಂದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತೆ¾ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಚಿತ್ರ-ವರದಿ: ರಮೇಶ್ ಉದ್ಯಾವರ