Advertisement

ಐಪಿಎಲ್ ಹರಾಜು: ಮತ್ತೆ ಟ್ರೆಂಡಿಂಗ್ ಆದ ಚೆಲುವೆ ಕಾವ್ಯಾ ಮಾರನ್!

08:10 PM Dec 23, 2022 | Team Udayavani |

ಕೊಚ್ಚಿ : ಇಂಡಿಯನ್ ಪ್ರೀಮಿಯರ್ ಲೀಗ್ 2023 ಮಿನಿ-ಆಕ್ಷನ್ ಪ್ರಸ್ತುತ ಕೊಚ್ಚಿಯಲ್ಲಿ ನಡೆಯುತ್ತಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಎಲ್ಲರ ಗಮನ ಸೆಳೆದು ಸುದ್ದಿಯಾಗಿದ್ದಾರೆ.

Advertisement

ಐಪಿಎಲ್ ಹರಾಜಿನಲ್ಲಿ ಹಾಜರಿದ್ದ ಕಾವ್ಯಾ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಉಲ್ಲಾಸದ ಮಿಮ್ಸ್ ಗಳ ಪ್ರವಾಹವನ್ನು ಹರಿಸಿದ್ದಾರೆ.

ಕಾವ್ಯ ಚೆನ್ನೈ ಮೂಲದ ಮಾಧ್ಯಮ ಮತ್ತು ಟಿವಿ ಸಮೂಹ ಸನ್ ಟಿವಿ ನೆಟ್‌ವರ್ಕ್‌ನ ಮಾಲಕ ಕಲಾನಿತಿ ಮಾರನ್ ಅವರ ಪುತ್ರಿ. ಹರಾಜಿನಲ್ಲಿ ಅವರು ವಿಶೇಷವಾಗಿ ಇಂಗ್ಲೆಂಡ್ ಬ್ಯಾಟಿಂಗ್ ಸೆನ್ಸೇಶನ್ ಹ್ಯಾರಿ ಬ್ರೂಕ್‌ಗಾಗಿ ಹೈ-ವೋಲ್ಟೇಜ್ ಬಿಡ್ಡಿಂಗ್‌ನಲ್ಲಿ ಭಾಗಿಯಾಗಿದ್ದರು. ಸನ್ ರೈಸರ್ಸ್ ಅಂತಿಮವಾಗಿ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿ ರೂ.ಗೆ ಪಡೆದುಕೊಂಡಿತು. ಸ್ಫೋಟಕ ಇಂಗ್ಲೆಂಡ್ ಬ್ಯಾಟ್ಸ್ ಮ್ಯಾನ್ ಅನ್ನು ಖರೀದಿಸಿದ ನಂತರ, ಕಾವ್ಯಾ ಅವರ ಕುರಿತಾಗಿ ಟ್ವಿಟರ್‌ನಲ್ಲಿ ಪ್ರತಿಕ್ರಿಯೆಗಳು ವೈರಲ್ ಆಗಿದೆ.

ಕುತೂಹಲವೆಂದರೆ ,30ರ ಹರೆಯದ ಕಾವ್ಯಾ ಯಾವಾಗಲೂ ಐಪಿಎಲ್ ಹರಾಜಿನಲ್ಲಿ ತನ್ನ ಉಪಸ್ಥಿತಿ ತೋರುತ್ತಾರೆ. ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಕಾವ್ಯಾ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವೀಧರರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next