Advertisement

SRH ಸ್ಫೋಟಕ ಆಟ ಮುಂದುವರಿಸಲಿದೆ: ಸಿಮೋನ್‌ ಹೆಲ್ಮೋಟ್‌

09:38 AM May 23, 2024 | Team Udayavani |

ಅಹ್ಮದಾಬಾದ್‌: ಸನ್‌ರೈಸರ್ ಹೈದರಾಬಾದ್‌ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ರನ್‌ ಬರಗಾಲ ಅನುಭವಿಸಿ ಸೋತಿರಬಹುದು, ಆದರೆ ತಂಡದ ಆಕ್ರಮಣಕಾರಿ ಆಟ ಮುಂದುವರಿಯಲಿದೆ ಎಂಬುದಾಗಿ ಸಹಾಯಕ ಕೋಚ್‌ ಸಿಮೋನ್‌ ಹೆಲ್ಮೋಟ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

“ಇಂದು ನಮ್ಮ ರಾತ್ರಿ ಆಗಿರಲಿಲ್ಲ. ಅಂದಮಾತ್ರಕ್ಕೆ ಎಲ್ಲವೂ ಮುಗಿದಿಲ್ಲ. ಒಮ್ಮೊಮ್ಮೆ ಹೀಗಾಗುತ್ತದೆ. ಮುಂದಿನ ಪಂದ್ಯದಲ್ಲಿ ನಮ್ಮ ಅಗ್ರೆಸ್ಸೀವ್‌ ಬ್ರ್ಯಾಂಡ್‌ ಆಫ್ ಕ್ರಿಕೆಟ್‌ ಮುಂದುವರಿಯಲಿದೆ’ ಎಂಬುದಾಗಿ ಹೆಲ್ಮೋಟ್‌ ಹೇಳಿದರು.

ಹೈದರಾಬಾದ್‌ ಕುಸಿತಕ್ಕೆ ಆರಂಭಿಕ ರಾದ ಟ್ರ್ಯಾವಿಸ್‌ ಹೆಡ್‌ ಮತ್ತು ಅಭಿಷೇಕ್‌ ಶರ್ಮ ಅವರ ತ್ವರಿತ ನಿರ್ಗಮನವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಸಿಮೋನ್‌ ಹೆಲ್ಮೋಟ್‌ ಕೂಡ ಒಪ್ಪಿಕೊಳ್ಳುತ್ತಾರೆ.

“ಟ್ರ್ಯಾವಿಸ್‌ ಹೆಡ್‌ ಮತ್ತು ಮಿಚೆಲ್‌ ಸ್ಟಾರ್ಕ್‌-ಇಬ್ಬರೂ ಆಕ್ರಮಣಕಾರಿ ಆಟ ಗಾರರು. ಹೆಡ್‌ ಬಿರುಸಿನ ಬ್ಯಾಟಿಂಗ್‌ ನಡೆಸಿದರೆ, ಸ್ಟಾರ್ಕ್‌ ಘಾತಕ ಬೌಲಿಂಗ್‌ ನಡೆಸುವರು. ಆದರೆ ಒಮ್ಮೆಗೆ ಒಬ್ಬರಷ್ಟೇ ಗೆಲ್ಲಲು ಸಾಧ್ಯ. ನಾಡಿದ್ದು 24ರಂದು ಹೆಡ್‌ ತಮ್ಮ ನೈಜ ಆಟಕ್ಕೆ ಮರಳುವುದನ್ನು ನಾವು ಕಾಣಬೇಕಿದೆ’ ಎಂದರು.

ಟಾಸ್‌ ನಿರ್ಣಾಯಕವಲ್ಲ
ಅಹ್ಮದಾಬಾದ್‌ನಲ್ಲಿ ಚೇಸಿಂಗ್‌ ತಂಡಗಳೇ ಹೆಚ್ಚಿನ ಗೆಲುವು ಸಾಧಿಸಿದರೂ ಪ್ಯಾಟ್‌ ಕಮಿನ್ಸ್‌ ಮೊದಲು ಬ್ಯಾಟಿಂಗ್‌ ಆಯ್ದುಕೊಂಡದ್ದೇಕೆ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಹುಟ್ಟಿ ಕೊಂಡಿದೆ. ಇದಕ್ಕೂ ಹೆಲ್ಮೋಟ್‌ ಜವಾಬು ನೀಡಿದ್ದಾರೆ.

Advertisement

“ಟಾಸ್‌ನಿಂದ ಏನೂ ಮಾಡಲಾಗದು. ದುರದೃಷ್ಟವಶಾತ್‌ ಇಂದು ನಮ್ಮ ದಿನವಾಗಿರಲಿಲ್ಲ. ಈ ಅಂಗಳದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದವರು ದೊಡ್ಡ ಸ್ಕೋರ್‌ ದಾಖಲಿಸಿ ಚೇಸಿಂಗ್‌ ತಂಡದ ಮೇಲೆ ಒತ್ತಡ ಹೇರಿದ ನಿದ ರ್ಶನಗಳೂ ಇವೆ. ಆದರೆ ನಮ್ಮಿಂದ ಇದು ಸಾಧ್ಯವಾಗಲಿಲ್ಲ’ ಎಂದರು.

ಇದನ್ನೂ ಓದಿ: Archery World Cup: ಆರ್ಚರಿ ವಿಶ್ವಕಪ್‌ ಸ್ಟೇಜ್‌-2: ವನಿತಾ ಕಾಂಪೌಂಡ್‌ ತಂಡ ಫೈನಲ್‌ಗೆ

Advertisement

Udayavani is now on Telegram. Click here to join our channel and stay updated with the latest news.

Next