ಜೈಪುರ: ಇಲ್ಲಿನ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಐಪಿಎಲ್ ಪಂದ್ಯವು ರೋಮಾಂಚಕ ತಿರುವುಗಳಿಗೆ ಸಾಕ್ಷಿಯಾಯಿತು. ಕುತೂಹಲಕಾರಿಯಾಗಿ ನಡೆದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಗೆಲುವು ಸಾಧಿಸಿತು.
ಕೊನೆಯ ಓವರ್ ಗೆ 17 ರನ್ ಬೇಕಿದ್ದ ಪಂದ್ಯ ಕೊನೆಯ ಎಸೆತದಲ್ಲಿ ಐದು ರನ್ ತನಕ ಬಂದಿತ್ತು. ಅಬ್ದುಲ್ ಸಮದ್ ಸ್ಟ್ರೈಕ್ ನಲ್ಲಿದ್ದರು. ಸಂದೀಪ್ ಶರ್ಮಾ ಎಸೆತವನ್ನು ಸಮದ್ ಲಾಂಗ್ ಆಫ್ ಗೆ ಚಚ್ಚಿದರು. ಲಾಂಗ್ ಆಫ್ ಫೀಲ್ಡರ್ ಕ್ಯಾಚ್ ಹಿಡಿದಾಗ ರಾಜಸ್ಥಾನ ಆಟಗಾರರು ಪಂದ್ಯ ಗೆದ್ದ ಸಂತಸದಲ್ಲಿ ಕುಣಿದಾಡಿದರು. ಆದರೆ ಅದು ನೋ ಬಾಲ್ ಆಗಿತ್ತು. ಶರ್ಮಾ ಬೌಲಿಂಗ್ ಕ್ರೀಸ್ ನಿಂದ ಎದುರು ಕಾಲಿಟ್ಟು ಚೆಂಡೆಸೆದಿದ್ದರು.
ಸಮದ್ ಮತ್ತು ಹೈದರಾಬಾದ್ ಗೆ ಮತ್ತೊಂದು ಅವಕಾಶ. ಅದೂ ಫ್ರೀ ಹಿಟ್. ಮತ್ತೊಂದು ಯಾರ್ಕರ್ ಪ್ರಯತ್ನಿಸಿದ ಶರ್ಮಾ ಸ್ವಲ್ಪ ಎಡವಿದರು. ಈ ಬಾರಿ ತಪ್ಪು ಮಾಡದ ಸಮದ್ ಚೆಂಡನ್ನು ಸಿಕ್ಸರ್ ಗೆ ಬಾರಿಸಿದರು. ಹೈದರಾಬಾದ್ ತಂಡವು ಗೆಲುವು ಸಾಧಿಸಿತು.
Related Articles
ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ತಂಡವು ಎರಡು ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿದರೆ, ಸನ್ ರೈಸರ್ಸ್ ಹೈದರಾಬಾದ್ ತಂಡವು ಆರು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿ ಜಯ ಸಾಧಿಸಿತು.
ಇದು ಜೈಪುರ ಮೈದಾನದಲ್ಲಿ ಚೇಸ್ ಮಾಡಲಾದ ಅತೀ ದೊಡ್ಡ ಮೊತ್ತವಾಗಿದೆ. ಈ ಹಿಂದೆ 2012ರಲ್ಲಿ 197 ರನ್ ಚೇಸ್ ಮಾಡಲಾಗಿತ್ತು.