Advertisement

ಡಬ್ಲ್ಯುಟಿಟಿಸಿ ಫೈನಲ್ಸ್‌ ಶ್ರೀಜಾ, ಶರತ್‌, ಮಾನಿಕಾ ಅರ್ಹತೆ

11:22 PM Jan 11, 2023 | Team Udayavani |

ಲುಸೈಲ್‌ (ಕತಾರ್‌): ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಮಿಕ್ಸೆಡ್‌ ಡಬಲ್ಸ್‌ ಚಿನ್ನ ವಿಜೇತೆ ಶ್ರೀಜಾ ಅಕುಲಾ, ಖ್ಯಾತ ಆಟಗಾರ ಅಚಂತಾ ಶರತ್‌ ಕಮಲ್‌ ಮತ್ತು ಮಾನಿಕಾ ಬಾತ್ರಾ ಅವರು ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ಡರ್ಬಾನ್‌ ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ (ಡಬ್ಲ್ಯುಟಿಟಿಸಿ) ಫೈನಲ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದ್ದಾರೆ.

Advertisement

ಕತಾರ್‌ನಲ್ಲಿ ಸಾಗುತ್ತಿರುವ ಏಷ್ಯನ್‌ ಡಬ್ಲ್ಯುಟಿಟಿಸಿ ಕಾಂಟಿನೆಂಟಲ್‌ ಹಂತದ ಕೂಟದಲ್ಲಿ ಈ ಮೂವರು ಆಟಗಾರರು 16ರ ಸುತ್ತಿನ ಹೋರಾಟದಲ್ಲಿ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿದರು.

ಶ್ರೀಜಾ ವಿಶ್ವದ 21ನೇ ರ್‍ಯಾಂಕಿನ ಚೈನೀಸ್‌ ತೈಪೆಯ ಚೆನ್‌ ಅವರನ್ನು 4-3 ಅಂತರದಿಂದ ಉರುಳಿಸಿದರೆ ಶರತ್‌ ಕಮಾಲ್‌ ಇರಾನಿನ ಅಹ್ಮದಿಯನ್‌ ಅಮಿನ್‌ ಅವರನ್ನು ಸುಲಭವಾಗಿ ಮಣಿಸಿ ಅರ್ಹತೆ ಗಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next