Advertisement

ಕ್ರೀಡೆ ವಿದ್ಯಾರ್ಜನೆಗೆ ಪೂರಕ: ಸಚಿವ ಖಾದರ್‌

11:34 AM Oct 14, 2017 | Team Udayavani |

ಮಹಾನಗರ: ಕ್ರೀಡೆಯು ವಿದಾರ್ಥಿಗಳ ಜೀವನದಲ್ಲಿ ಮಹತ್ವವಾದ ಅಂಗ. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳ ಬೇಕು ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಅವರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ಎಕ್ಸ್‌ಪರ್ಟ್‌ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ-2017 ಉದ್ಘಾಟಿಸಿ ಮಾತನಾಡಿದರು.

ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಕ್ರೀಡಾಸ್ಫೂರ್ತಿ ನೀಡುವ ಮೂಲಕ ಆರೋಗ್ಯವಂತ ವಿದ್ಯಾರ್ಥಿಗಳು ಮಾತ್ರ ಉತ್ಕೃಷ್ಟ ಮಟ್ಟದ ಅಂಕವನ್ನು ಪಡೆದು ಸಾಧನೆ ಮಾಡಲು ಸಾಧ್ಯ. ಕ್ರೀಡೆಯಲ್ಲಿ ಇಚ್ಛಾ ಶಕ್ತಿಯ ಜತೆಯಲ್ಲಿ ಪ್ರಯತ್ನಶೀಲ ಮನೋಭಾವ ಕೂಡ ಮುಖ್ಯವಾಗಿದ್ದಾಗ ಗುರಿ ಮುಟ್ಟಬಹುದು ಎಂದರು.

ಸಂಸ್ಥೆಯ ಅಧ್ಯಕ್ಷ ಪ್ರೊ| ನರೇಂದ್ರ ಎಲ್‌. ನಾಯಕ್‌ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಉಪಾಧ್ಯಕ್ಷೆ ಉಷಾಪ್ರಭಾ ಎನ್‌. ನಾಯಕ್‌, ಟ್ರಸ್ಟಿ ಉಸ್ತಾದ್‌ ರಫೀ ಕ್‌ ಖಾನ್‌, ಹಳೆ ವಿದ್ಯಾರ್ಥಿ ಅಂಕುಶ್‌ ಎನ್‌. ನಾಯಕ್‌, ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಮಚಂದ್ರ ಭಟ್‌, ಕ್ರೀಡಾ ಸಂಯೋಜಕರಾದ ಪ್ರಮೋದ್‌ ಕಿಣಿ ಮೊದಲಾದವರು ಉಪಸ್ಥಿತರಿದ್ದರು. ಇಂಗ್ಲಿಷ್‌ ವಿಭಾಗ ಉಪನ್ಯಾಸಕಿ ಝೀಟಾ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next