Advertisement

ಅಜ್ಜರಕಾಡಿನಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ

12:23 AM Nov 26, 2022 | Team Udayavani |

ರಾಜ್ಯದಲ್ಲಿ ಬೆಂಗಳೂರು, ಮಂಡ್ಯ ಮತ್ತು ಉಡುಪಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಯಾಗಲಿದೆ. ಉಡುಪಿ ಕೇಂದ್ರವು ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯನ್ನು ಒಳಗೊಂಡು ಕಾರ್ಯನಿರ್ವಹಿಸಲಿದೆ.

Advertisement

ಉಡುಪಿ: ಕ್ರೀಡಾ ಕ್ಷೇತ್ರವು ವೈಜ್ಞಾನಿಕ ಆಯಾಮದಲ್ಲಿ ಹಲವು ವೈಶಿಷ್ಟéಗಳಿಂದ ಮೇಲ್ದರ್ಜೆ ಗೇರಲ್ಪಟ್ಟಿದೆ. ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತೀಯ ಕ್ರೀಡಾಪಟುಗಳು ಎಲ್ಲ ಸವಾಲು ಗಳನ್ನು ಎದುರಿಸಿ ಸಮರ್ಥ ಚಾಂಪಿಯನ್‌ಗಳನ್ನಾಗಿ ರೂಪಿಸಲು ಕೇಂದ್ರ ಸರಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದರಲ್ಲಿ ಕ್ರೀಡಾ ಪಟುಗಳ ಕಾರ್ಯ ಕ್ಷಮತೆ, ಮನೋ ಬಲವನ್ನು ವೃದ್ಧಿಸುವ ನೆಲೆಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರಗಳ (ನ್ಪೋರ್ಟ್ಸ್ ಸೈನ್ಸ್‌ ಸೆಂಟರ್‌) ಸ್ಥಾಪನೆ ಮಹತ್ವದ್ದಾಗಿದೆ.

ಕೇಂದ್ರ ಸರಕಾರ, ಕ್ರೀಡಾ ಸಚಿವಾಲಯ, ಖೇಲೋ ಇಂಡಿಯಾ ಯೋಜನೆಯಡಿ ಈ ಕೇಂದ್ರಗಳು ಸ್ಥಾಪನೆಯಾಗಲಿವೆ. ಉಡುಪಿ ಕೇಂದ್ರವು ರೂಪುಗೊಂಡ ಬಳಿಕ ಕರಾವಳಿ, ಮಲೆನಾಡಿನ ಸ್ಥಳೀಯ ಕ್ರೀಡಾಪಟುಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಕ್ರೀಡಾ ಕ್ಷೇತ್ರದ ತಜ್ಞರು. ಉಡುಪಿ ನಗರ ವ್ಯಾಪ್ತಿ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಕ್ರೀಡಾಂಗಣದ ಒಳಾಂಗಣ ವಿಭಾಗದಲ್ಲಿ ಈ ಕೇಂದ್ರ ರೂಪುಗೊಳ್ಳಲಿದೆ.

ಕ್ರೀಡಾ ವಿಜ್ಞಾನ ಕೇಂದ್ರದ ವೈಶಿಷ್ಟ್ಯ
ಬಯೋಮೆಕಾನಿಕ್ಸ್‌, ಕೈನೆಸೋ ಲಾಜಿ, ಆ್ಯತ್ಲೀಟ್‌ ಮಾನಿಟರಿಂಗ್‌ ಸಾಫ್ಟ್ವೇರ್‌, ಕ್ರೀಡಾ ಫಿಸಿಯೋ ಥೆರಪಿಸ್ಟ್‌, ಸ್ಟ್ರೆಂಥ್‌ ಆ್ಯಂಡ್‌ ಕಂಡಿಷ ನಿಂಗ್‌, ಕ್ರೀಡಾ ಪೌಷ್ಟಿಕ ತಜ್ಞರು, ಕ್ರೀಡಾ ಮನಃಶಾಸ್ತ್ರಜ್ಞ, ಕ್ರೀಡಾ ಔಷಧ ವಿಭಾಗ ಸಹಿತ ಹಲಾವರು ವಿಭಾಗಗಳು ಈ ಕೇಂದ್ರದಲ್ಲಿ ಲಭ್ಯ ವಿವೆ. ಗಾಯ ತಡೆಗಟ್ಟುವಿಕೆ ಮತ್ತು ಗುಣಪಡಿಸುವ ವಿಧಾನ, ವೇಗ ಮತ್ತು ಚುರುಕುತನ, ಜಾಯಿಂಟ್‌ ಸ್ಟಾಬಿಲಿಟಿ, ಮೊಬಿಲಿಟಿ ಟ್ರೈನಿಂಗ್‌, ಸ್ಟ್ರೆಂಥ್‌ ಆ್ಯಂಡ್‌ ಪವರ್‌ ಟ್ರೈನಿಂಗ್‌, ಕಾರ್ಡಿಯ ಸ್ಪಿರೇಟ್ರಿ ಫಿಟ್‌ನೆಸ್‌ ಬಗ್ಗೆ ತರಬೇತಿ ಸಂಬಂಧಿಸಿದ ಚಟು ವಟಿಕೆಗಳು ಕೇಂದ್ರದಲ್ಲಿ ನಡೆಯಲಿವೆ.

ಉಡುಪಿ ಸೇರಿದಂತೆ ರಾಜ್ಯದ ಮೂರು ಕಡೆ ಕ್ರೀಡಾ ವಿಜ್ಞಾನ ಕೇಂದ್ರ ಮಂಜೂರಾಗಿದೆ. ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ 2 ಕೋ.ರೂ. ವೆಚ್ಚದಲ್ಲಿ ಸ್ಥಾಪನೆಯಾಗುತ್ತಿದೆ. ಇದಕ್ಕೆ ಅಗತ್ಯವಿರುವ ಪರಿಕರಗಳು ಈಗಾಗಲೇ ಆಗಮಿಸಿವೆ. ಆಯಾ ವಿಭಾಗಕ್ಕೆ ತಜ್ಞರು ಮತ್ತು ಸಿಬಂದಿಯನ್ನು ನೇಮಕ ಮಾಡಲಾಗುತ್ತದೆ. ಒಂದೂವರೆ ತಿಂಗಳಲ್ಲಿ ಕೇಂದ್ರವು ಸಿದ್ಧವಾಗಲಿದೆ.
– ಡಾ| ರೋಶನ್‌ ಶೆಟ್ಟಿ ,
ಸಹಾಯಕ ನಿರ್ದೇಶಕರು, ಕ್ರೀಡಾ ಇಲಾಖೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next