Advertisement

2022: ನೆನಪುಗಳ ಮೆರವಣಿಗೆ; ಯಶಸ್ಸಿನ ತೇರಿಗೆ ಸಂಭ್ರಮದ ಗರಿ

10:24 PM Dec 29, 2022 | Team Udayavani |

2022 ಭಾರತಕ್ಕೆ ಅವಿಸ್ಮರಣೀಯ ವರ್ಷ. ಕಾಮನ್‌ವೆಲ್ತ್‌ನಲ್ಲಿ ಉತ್ತಮ ಸಾಧನೆ, ದೇಶೀಯ ತಂತ್ರಜ್ಞಾನದ  ಅನಾವರಣ,  ಸುದೀರ್ಘ‌ ಸಮಯದ ಬಳಿಕ ಫ‌ುಟ್ಬಾಲ್‌ ವಿಶ್ವಕಪ್‌ ಗೆದ್ದ ಅರ್ಜೆಂಟೀನಾ, ತೆರೆಗೆ ಸರಿದ ಕ್ರೀಡಾ ದಿಗ್ಗಜರು, ಸದ್ದು ಮಾಡಿದ ಬೆಡಗಿಯರು…. 

Advertisement

ವಿದಾಯದ ಹೊತ್ತು :

ರೋಜರ್‌ ಫೆಡರರ್‌ :

ಟೆನಿಸ್‌ ಲೋಕದ ಧ್ರುವತಾರೆ, 20 ಗ್ಯಾನ್‌ಸ್ಲಾéಮ್‌ಗಳನ್ನು ಗೆದ್ದಿರುವ ರೋಜರ್‌ ಫೆಡರರ್‌, 270 ವಾರಗಳ ಕಾಲ ಟೆನಿಸ್‌ನ ಅಗ್ರ ರ್‍ಯಾಂಕಿಂಗ್‌ನಲ್ಲಿ ಇದ್ದರು. ಸೆ.15 ರಂದು ವೃತ್ತಿಜೀವನಕ್ಕೆ ವಿದಾಯ ಹೇಳಿದರು.

ಸೆರೆನಾ ವಿಲಿಯಮ್ಸ್‌ :

Advertisement

ಮಹಿಳಾ ಟೆನಿಸ್‌ನ ಅನಭಿಷಕ್ತ ರಾಣಿ ಸೆರೆನಾ ಕೂಡ ಸೆಪ್ಟಂಬರ್‌ನಲ್ಲಿ ವೃತ್ತಿಜೀವನದಿಂದ ಹಿಂದೆ ಸರಿದರು. 23 ಬಾರಿ ಗ್ಯಾನ್‌ಸ್ಲಾéಮ್‌ಗಳನ್ನು ಗೆದ್ದಿರುವ ಇವರು 319 ವಾರಗಳ ಕಾಲ ನಂಬರ್‌ 1 ಸ್ಥಾನದಲ್ಲಿದ್ದರು.

ಮಿಥಾಲಿ ರಾಜ್‌ :

ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್‌ ಅವರದ್ದು ದೊಡ್ಡ ಹೆಸರು. 1999ರಿಂದ 2022ರ ವರೆಗೆ ಭಾರತ ತಂಡದ ಪರ ಆಡಿದ ಇವರು, ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ್ದಾರೆ.

ಜೂಲನ್‌ ಗೋಸ್ವಾಮಿ:

2002ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜೂಲನ್‌ ಗೋಸ್ವಾಮಿ, ಜಗತ್ತಿನ ಬೆಸ್ಟ್‌ ಬೌಲರ್‌ ಎಂದೂ ಇವರು ಖ್ಯಾತರಾಗಿದ್ದರು. 3 ಮಾದರಿ ಸೇರಿಸಿ ಒಟ್ಟಾರೆಯಾಗಿ 355 ವಿಕೆಟ್‌ ಪಡೆದಿದ್ದಾರೆ.

ಕರೀಮ್‌ ಬೆನ್ಜೆಮಾ :

ಫ್ರಾನ್ಸ್‌ನ ಫ‌ುಟ್ಬಾಲ್‌ ಆಟಗಾರ ಕರೀಮ್‌ಬೆನ್ಜೆಮಾ ವಿದಾಯ ಘೋಷಿಸಿದ್ದಾರೆ. ಕತಾರ್‌ಫಿಫಾ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ್ದರು. 97 ಅಂತಾರಾಷ್ಟ್ರೀಯ ಪಂದ್ಯಗಳಿಂದ 37 ಗೋಲು ಗಳಿಸಿದ್ದರು.

ಸಾಧನೆಯ ಬಿಂಬ :  ಕಾಮನ್ವೆಲ್ತ್‌ನಲ್ಲಿ ಅತ್ಯುತ್ತಮ ಸಾಧನೆ :

ಅರವತ್ತೂಂದು ಪದಕಗಳು- ಇದು ಆಗಸ್ಟ್‌ನಲ್ಲಿ  ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಕಾಮನ್ವೆಲ್ತ್‌ ಗೇಮ್ಸ್‌ ಕ್ರೀಡಾಕೂಟ­ದಲ್ಲಿ ದೇಶಕ್ಕೆ ಸಿಕ್ಕಿದ್ದ ಪದಕ ಸಾಧನೆ. 22 ಚಿನ್ನ, 16 ಬಂಗಾರ, 23 ಕಂಚು-ಇದಿಷ್ಟೇ ಅಲ್ಲ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ನಮ್ಮ ದೇಶ ಇದುವರೆಗೆ ಸಾಧಿಸಿದ ಅತ್ಯಮೋಘ ಸಾಧನೆಯೇ ಆಗಿದೆ. 2010ರಲ್ಲಿ ನವ­ದೆಹಲಿ­ಯಲ್ಲಿ ನಡೆ­ದಿದ್ದ ಕ್ರೀಡಾ­ಕೂಟದಲ್ಲಿ ದೇಶದ ಗರಿಮೆಯ ಕ್ರೀಡಾಳು­ಗಳು ಒಟ್ಟು 101 ಪದಕ­ಗಳನ್ನು ಬಾಚಿ­ಕೊಂಡಿ­ದ್ದರು. ಅದರಲ್ಲಿ 22 ಚಿನ್ನದ ಪದಕಗಳೇ ಇದ್ದವು ಎನ್ನುವುದು ಪ್ರಧಾನ. ಜತೆಗೆ ಶೂಟಿಂಗ್‌ನಿಂದಲೇ 30 ಪದಕಗಳು ಬಂದಿದ್ದವು. ಅದನ್ನೇ ಈ ಬಾರಿಯದ್ದಕ್ಕೆ ಹೋಲಿಕೆ ಮಾಡಿ­ದರೆ, ಒಟ್ಟು 61 ಪದಕಗಳ ಪೈಕಿ 12 ಕುಸ್ತಿ ವಿಭಾಗದಿಂದ, ಭಾರ  ಎತ್ತುವ ಸ್ಪರ್ಧೆಯಿಂದ 10 ಪದಕಗಳು ಪ್ರಾಪ್ತ­ವಾ­ಗಿವೆ. 2018ಕ್ಕೆ ಹೋಲಿಕೆ ಮಾಡಿದರೆ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಪದಕಗಳು ಬಂದಿದ್ದರೆ, ಹಾಕಿಯಲ್ಲಿ ಒಂದು ಪದಕ ಹೆಚ್ಚುವರಿಯಾಗಿ ಸಿಕ್ಕಿದೆ.

ವಿಶ್ವಕಪ್‌ ಫ‌ುಟ್ಬಾಲ್‌:

ನ.20ರಿಂದ ಡಿ.18ರ ವರೆಗೆ ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾವಳಿ ನಡೆದಿದ್ದು ಫೈನಲ್‌ನಲ್ಲಿ ಫ್ರಾನ್ಸ್‌ ಅನ್ನು ಮಣಿಸಿರುವ ಅರ್ಜೆಂಟೀನ ಪ್ರಶಸ್ತಿ ಗಳಿಸಿದೆ. ಇದು ಅರ್ಜೆಂಟೀನಗೆ ಮೂರನೇ ಬಾರಿಗೆ ಸಿಕ್ಕ ಪ್ರಶಸ್ತಿ. ಒಟ್ಟು 32 ತಂಡಗಳು ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದವು.

ಭಾರತಕ್ಕೆ ಥಾಮಸ್‌ ಕಪ್‌:

ಬ್ಯಾಡ್ಮಿಂಟನ್‌ ಕ್ಷೇತ್ರದಲ್ಲಿ ಥಾಮಸ್‌ ಕಪ್‌ ಗೆದ್ದ ಹಿರಿಮೆ ಭಾರತದ ತಂಡಕ್ಕೆ ಸೇರುತ್ತದೆ. ಈ ಮೂಲಕ  73  ವರ್ಷಗಳ ಕೊರತೆಯನ್ನು ನೀಗಿದೆ. ಕೌಲಾಲಂಪುರದಲ್ಲಿ ಮೇನಲ್ಲಿ ನಡೆದಿದ್ದ ಪಂದ್ಯದಲ್ಲಿ ಬಲಿಷ್ಠ ಮಲೇಷ್ಯಾ ಮತ್ತು ಡೆನ್ಮಾರ್ಕ್‌ ತಂಡವನ್ನು ಮಣಿಸಿ ಪ್ರಶಸ್ತಿ ಗೆಲ್ಲಲಾಗಿತ್ತು.

ಐಎನ್‌ಎಸ್‌ ವಿಕ್ರಾಂತ್‌ :

ದೇಶೀಯ ತಂತ್ರಜ್ಞಾನ ಬಳಕೆ ಮಾಡಿ ಸ್ಥಾಪಿಸಿದ ಐಎನ್‌ಎಸ್‌ ವಿಕ್ರಾಂತ್‌ ಅನ್ನು ಸೆ.2ರಂದು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು. ಇದರ ನಿರ್ಮಾಣಕ್ಕಾಗಿ 20 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದರಲ್ಲಿ ಒಟ್ಟು 30 ಯುದ್ಧ ವಿಮಾನಗಳನ್ನು ನಿಲ್ಲಿಸಲು ಅವಕಾಶ ಇದೆ. ಅದು 262 ಮೀಟರ್‌ ಉದ್ದ, 62 ಮೀಟರ್‌ ಅಗಲ ಹೊಂದಿದೆ. 2,400 ವಿಭಾಗಗಳನ್ನೂ ಹೊಂದಿದೆ.

ವಿಕ್ರಮ್‌ ಎಸ್‌ :

ವಿಕ್ರಮ್‌ ಎಸ್‌ ಎಂಬ ಖಾಸಗಿ ರಾಕೆಟ್‌ ಅನ್ನು ಉಡಾವಣೆ ಮಾಡುವ ಮೂಲಕ ಭಾರತ ಮತ್ತೂಂದು ಹಿರಿಮೆ ಬರೆಯಿತು. ಹೈದರಾಬಾದ್‌ನ ಕಂಪನಿ  ಇದನ್ನು ರೂಪಿಸಿದೆ.  ನ. 18ರಂದು ಉಡಾಯಿಸಲಾಯಿತು. ಚೆನ್ನೈನ  ಅಗ್ನಿಕುಲ ಕಂಪನಿ ಖಾಸಗಿ ಲಾಂಚ್‌ಪ್ಯಾಡ್‌ ಅನ್ನು ರೂಪಿಸಿದೆ.

ಟಾಪ್‌ 5 ಸುಂದರಿಯರ ವಿವಾದ :

ರಶ್ಮಿಕಾ ಮಂದಣ್ಣ  :

ವರ್ಷವಿಡೀ ಸುದ್ದಿಯಲ್ಲಿದ್ದವರು ರಶ್ಮಿಕಾ ಮಂದಣ್ಣ. ಫ‌ುಷ್ಪಾ  ಮೂಲಕ ದೊಡ್ಡ ಯಶಸ್ಸು ಪಡೆದು ಈಗ ಬೇರೆ ಭಾಷೆಗಳಲ್ಲಿ ಮಿನುಗುತ್ತಿರುವ ರಶ್ಮಿಕಾ ಕನ್ನಡ ಕಡೆಗಣಿಸುತ್ತಿದ್ದಾರೆ  ಎಂಬ ಆರೋಪವಿದೆ. ಸದ್ಯ ದಕ್ಷಿಣದಲ್ಲಿ ರೋಮ್ಯಾಂಟಿಕ್‌ ಹಾಡುಗಳನ್ನೇ ನೋಡಿರಲಿಲ್ಲ ಎಂದಿರುವುದು ವಿವಾದಕ್ಕೆ ಕಾರಣವಾಗಿದೆ.

ಜಾಕ್ವೆಲಿನ್‌ ಫ‌ರ್ನಾಂಡೀಸ್‌ :

ಖಥರ್ನಾಕ್‌ ಆರೋಪಿ ಸುಕೇಶ್‌ ಚಂದ್ರಶೇಖರ್‌ನ ಸಂಗ ಬೆಳೆಸಿರುವ ಆರೋ ಪದ ಮೇಲೆ ಆಗಾಗ ಇ.ಡಿ. ಕಚೇರಿಗೆ ಅಲೆದಾಡುತ್ತಿರುವ ಜಾಕ್ವೆಲಿನ್‌, ಸಿನಿಮಾಗಿಂತಲೂ ಈ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ.

ದೀಪಿಕಾ ಪಡುಕೋಣೆ :

ಶಾರೂಖ್‌ ಅಭಿನಯದ ಪಠಾಣ್‌ ಚಿತ್ರದಲ್ಲಿ ನಟಿ ಸಿರುವ ದೀಪಿಕಾ ಪಡುಕೋಣೆಇದೇ ಸಿನಿಮಾದ ಬೇಷರಮ್‌ ಹಾಡಿನಲ್ಲಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬೇಕೆಂದೇ ಕೇಸರಿ ಉಡುಪು ಧರಿಸಿ, ಅವಮಾನ ಮಾಡಿದ್ದಾರೆ ಎನ್ನಲಾಗಿದೆ.

ರಿಚಾ ಛಡ್ಡಾ  :

ಬಾಲಿವುಡ್‌ ನಟಿ ರಿಚಾ ಛಡ್ಡಾ, “ಗಾಲ್ವಾನ್‌ ಸೇಸ್‌ ಹಾಯ್‌’ ಎಂದು ಟ್ವೀಟ್‌ ಮಾಡಿ ವಿವಾದ ಸೃಷ್ಟಿಸಿದ್ದರು. ಈ ಬಗ್ಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿ, ಕಡೆಗೆ ಇವರು ತಮ್ಮ ಟ್ವೀಟ್‌ ಡಿಲೀಟ್‌ ಮಾಡಿದರು.

ಕಂಗನಾ ರಣಾವತ್‌:

ಸದಾ ವಿವಾದದಲ್ಲೇ ಇರುವ ಕಂಗನಾ ರಣಾವತ್‌, 2022ರಲ್ಲೂ ಸುದ್ದಿಯಲ್ಲಿದ್ದರು. ತಲೈವಿ ನಟನೆಗಾಗಿ ಫಿಲ್ಮ್ಫೇರ್‌ ಉತ್ತಮ ನಟಿ ಪ್ರಶಸ್ತಿಗಾಗಿ ಇವರನ್ನು ನಾಮನಿರ್ದೇಶನ ಮಾಡಿತ್ತು. ಆದರೆ, ಕಂಗನಾ ಫಿಲ್ಮ್ಫೇರ್‌ ವಿರುದ್ಧ ಮಾತನಾಡಿ ಹೊರಬಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next