Advertisement

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಕ್ರೀಡೆಗಳು ಸಹಕಾರಿ: ಧರಿಕಾರ

04:45 PM Aug 03, 2022 | Shwetha M |

ಮುದ್ದೇಬಿಹಾಳ: ವಿದ್ಯಾರ್ಥಿ ಜೀವನದಲ್ಲಿ ಆಟಗಳು ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ ಬೌದ್ಧಿಕ ಶಕ್ತಿಯನ್ನೂ ಬಲಪಡಿಸುತ್ತವೆ. ಆತ್ಮವಿಶ್ವಾಸದ ಜೊತೆಗೆ ಸಹೋದರತ್ವ ಗುಣಗಳನ್ನೂ ಬೆಳೆಸುತ್ತವೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಹೇಳಿದರು.

Advertisement

ಸಂತ ಕನಕದಾಸ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಕಾರಿ ಮತ್ತು ಕ್ಷೇತ್ರ ಸಮನ್ವಯಾಕಾರಿ ಕಾರ್ಯಾಲಯದ ವತಿಯಿಂದ ಏರ್ಪಡಿಸಿದ್ದ ನಗರ ದಕ್ಷಿಣ ವಲಯ ಮಟ್ಟದ ಖಾಸಗಿ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್‌.ಮದರಿ ಮಾತನಾಡಿ, ಕ್ರೀಡೆಗಳಲ್ಲಿ ಯಾರೇ ಗೆಲ್ಲಲಿ, ಸೋಲಲಿ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣವನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು. ಇದು ದೇಶದ ಉತ್ತಮ ಪ್ರಜೆಗಳನ್ನು ರೂಪಿಸಲು ನೆರವಾಗುತ್ತದೆ ಎಂದರು.

ತಾಲೂಕು ಕುರುಬರ ಸಂಘದ ಉಪಾಧ್ಯಕ್ಷ ಸಂತೋಷ, ಎಸ್‌ಡಿಎಂಸಿ ಅಧ್ಯಕ್ಷ ಮಲಕೇಂದ್ರಗೌಡ ಪಾಟೀಲ, ಕಾರ್ಯದರ್ಶಿ ಬಿ.ಎಸ್‌.ಮೇಟಿ, ಸಂಘಟನಾ ಕಾರ್ಯದರ್ಶಿ ನಾಗಪ್ಪ ರೂಢಗಿ, ಬಿಆರ್‌ಪಿ ಸಿದ್ದನಗೌಡ, ಶಿಕ್ಷಣ ಸಂಯೋಜಕರಾದ ವಿಜಯಲಕ್ಷ್ಮೀ ಚಿಲ್ಲಾಳಶೆಟ್ಟರ, ಎಸ್‌.ಎಸ್‌.ರಾಮತಾಳ, ಮುಖ್ಯಾಧ್ಯಾಪಕ ಬಿ.ಎಸ್‌ .ಪಣೇದಕಟ್ಟಿ ಇದ್ದರು. ಶಿಕ್ಷಕಿ ಎಂ.ಆರ್‌.ತಡಸದ ಪ್ರಾರ್ಥಿಸಿದರು. ಸಿಆರ್‌ಪಿ ಜಿ.ಎಚ್‌.ಚವ್ಹಾಣ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಾಧ್ಯಾಪಕ ಎಂ.ಎನ್‌.ಯರಝರಿ ಸ್ವಾಗತಿಸಿದರು. ಶಿಕ್ಷಕ ಗೋಪಾಲ ಹೂಗಾರ ನಿರೂಪಿಸಿದರು. ಶಿಕ್ಷಕ ಎಂ.ಸಿ.ಕಬಾಡೆ ವಂದಿಸಿದರು.

ವಿವಿಧ ಆಟಗಳ ಫಲಿತಾಂಶ: ಬಾಲಕರ ಗುಂಪು ಆಟಗಳಾದ ಖೋಖೋದಲ್ಲಿ ಸಂತ ಕನಕದಾಸ ಪ್ರಾಥಮಿಕ ಶಾಲೆ, ಕಬಡ್ಡಿಯಲ್ಲಿ ಜ್ಞಾನಭಾರತಿ ಪ್ರಾಥಮಿಕ ಶಾಲೆ, ವಾಲಿಬಾಲ್‌ನಲ್ಲಿ ಇಂದಿರಾನಗರದ ಪ್ರಾಥಮಿಕ ಶಾಲೆ, ರಿಯೆಲ್ಲಿ ಜ್ಞಾನಭಾರತಿ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡರು. ಬಾಲಕರ ವೈಯುಕ್ತಿಕ ಆಟಗಳಾದ 100 ಮೀ. ಓಟದಲ್ಲಿ ಜ್ಞಾನಭಾರತಿ ಶಾಲೆಯ ಅಭಿಷೇಕ ರಾಠೊಡ ಪ್ರಥಮ, ಚೇತನ ಪ್ರಾಥಮಿಕ ಶಾಲೆಯ ಸಾಗರ ಕುಂಬಾರ ದ್ವಿತೀಯ, 200 ಮೀ. ಓಟದಲ್ಲಿ ಸಂತ ಕನಕದಾಸ ಶಾಲೆಯ ರಾಕೇಶ ಚವ್ಹಾಣ ಪ್ರಥಮ, ಚೇತನ ಶಾಲೆಯ ಸಾಗರ ಕುಂಬಾರ ದ್ವಿತೀಯ, 400 ಮೀ. ಓಟದಲ್ಲಿ ಸಂತ ಕನಕದಾಸ ಶಾಲೆಯ ರಾಕೇಶ್‌ ಚವ್ಹಾಣ ಪ್ರಥಮ, ಜ್ಞಾನಭಾರತಿ ಶಾಲೆಯ ಸುದೀಪ ರಾಠೊಡ ದ್ವಿತೀಯ, 600 ಮೀ. ಓಟದಲ್ಲಿ ಸಂತ ಕನಕದಾಸ ಶಾಲೆಯ ರೋಹಿತ್‌ ಹಿರೇಮಠ ಪ್ರಥಮ, ರಾಕೇಶ್‌ ಚವ್ಹಾಣ ದ್ವಿತೀಯ, ಚಕ್ರ ಎಸೆತದಲ್ಲಿ ಸಂತ ಕನಕದಾಸ ಶಾಲೆಯ ಸಂತೋಷ ನಾಯಕ ದ್ವಿತೀಯ ಸ್ಥಾನ ಪಡೆದುಕೊಂಡರು.

Advertisement

ಬಾಲಕಿಯರ ಗುಂಪು ಆಟಗಳಾದ ಖೋಖೋ, ವಾಲಿಬಾಲ್‌, ರಿಲೇಗಳಲ್ಲಿ ಸಂತ ಕನಕದಾಸ ಪ್ರಾಥಮಿಕ ಶಾಲೆ ತಂಡ ಪ್ರಥಮ, ಕಬಡ್ಡಿಯಲ್ಲಿ ಜ್ಞಾನಭಾರತಿ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡವು. ಬಾಲಕಿಯರ ವೈಯುಕ್ತಿಕ ಆಟಗಳಾದ 100 ಮೀ. ಓಟದಲ್ಲಿ ಸಂತ ಕನಕದಾಸ ಶಾಲೆಯ ಐಶ್ವರ್ಯ ಹಡಲಗೇರಿ ಪ್ರಥಮ, ಜ್ಞಾನಭಾರತಿ ಶಾಲೆಯ ಪಲ್ಲವಿ ಬಿರಾದಾರ ದ್ವಿತೀಯ, 200 ಮೀ. ಓಟದಲ್ಲಿ ಜ್ಞಾನಭಾರತಿ ಶಾಲೆಯ ಪಲ್ಲವಿ ಬಿರಾದಾರ ಪ್ರಥಮ, ಸಂತ ಕನಕದಾಸ ಶಾಲೆಯ ಬಸಮ್ಮ ಚಿನಿವಾರ ದ್ವಿತೀಯ, 400 ಮೀ. ಓಟದಲ್ಲಿ ಸಂತ ಕನಕದಾಸ ಶಾಲೆಯ ಐಶ್ವರ್ಯ ಹಡಲಗೇರಿ ಪ್ರಥಮ, ಜ್ಞಾನಭಾರತಿ ಶಾಲೆಯ ಪಲ್ಲವಿ ಬಿರಾದಾರ ದ್ವಿತೀಯ, 600 ಮೀ. ಓಟದಲ್ಲಿ ಸಂತ ಕನಕದಾಸ ಶಾಲೆಯ ಭಾಗ್ಯಶ್ರೀ ಯಾಳವಾರ ಪ್ರಥಮ, ಬಸಮ್ಮ ಚಿನಿವಾರ ದ್ವಿತೀಯ ಸ್ಥಾನ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next