Advertisement

ನಿಸರ್ಗ ಬಡಾವಣೆಯಲ್ಲಿ ಕ್ರೀಡಾ ಉತ್ಸವ

11:48 AM Nov 10, 2018 | Team Udayavani |

ಬೆಂಗಳೂರು: ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿ ಆರು ವರ್ಷದ ಮಕ್ಕಳಿಂದ 60 ವರ್ಷದ ವಯೋಮಾನದ ಎಲ್ಲಾ ನಿವಾಸಿಗಳಿಗೆ ಇತೀಚೆಗೆ ವಿವಿಧ ಕ್ರೀಡಾವಳಿಗಳ ಕ್ರೀಡಾ ಉತ್ಸವ-2018ಅನ್ನು ವಿಎಲ್‌ಎನ್‌ ಕ್ರೀಡಾ ಸಮಿತಿ ಹಮ್ಮಿಕೊಂಡಿದೆ.

Advertisement

ನಿರ್ಮಾಣ್‌ ಸಮೂಹ ಸಂಸ್ಥೆಗಳ ಸಂಸ್ಥಾಪಕರೂ, ನಿಪ್‌ ಮ್ಯಾಟ್‌ನ ಅಧ್ಯಕ್ಷರೂ ಆದ ಲಕ್ಷೀನಾರಾಯಣ್‌ ಮಾತನಾಡಿ, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಆವಶ್ಯಕವಾಗಿದ್ದು ಕ್ರೀಡೆಗಳಿಗೆ ಹೆಚ್ಚಿನ ಪೋ›ತ್ಸಾಹ ನೀಡುವಂತೆ ಬಡಾವಣೆಯ ನಿವಾಸಿಗಳಿಗೆ ಸಲಹೆ ನೀಡಿದರು.

ಜಿಗಣಿ ಆರಕ್ಷಕ ಠಾಣೆಯ- ಆರಕ್ಷಕ ನಿರೀಕ್ಷಕರಾದ ಸಿದ್ದೇಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಡಾವಣೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರವಲ್ಲದೆ ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಪೋ›ತ್ಸಾಹ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಿಸರ್ಗ ಬಡಾವಣೆಯ ಪಶ್ಚಿಮ ದ್ವಾರದ ಭದ್ರತಾ ಕಚೇರಿಯ ಮುಂಭಾಗದಲ್ಲಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಸೆಂಟ್‌ ಜೋಸೆಫ್‌ ಶಾಲಾ ಮಕ್ಕಳ ಜೊತೆಯಲ್ಲಿ ಪಥ ಸಂಚಲನದೊಂದಿಗೆ ಕ್ರೀಡಾ ಜ್ಯೋತಿಯನ್ನು ಹಿಡಿದು ಬಡಾವಣೆಯ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ನಂತರ ವಿಎಲ್‌ಎನ್‌ ಹೊರಾಂಗಣ ಕ್ರೀಡಾಂಗಣಕ್ಕೆ ತಲುಪಿ ಮುಖ್ಯ ದ್ವಾರದಲ್ಲಿ ಉದ್ಘಾಟನೆ ನೆರವೇರಿಸಲಾಯಿತು.

ರೆಡ್‌ ಬ್ರಿಡ್ಜ್ ಇಂಟರ್‌ ನ್ಯಾಷನಲ್‌ ಅಕಾಡೆಮಿಯ ಅಧಿಕಾರಿ ಪೆಮ್‌ ಲಚುಂಗಾ³, ವಿಕಾಸ್‌ ಹಾಗೂ ನಿಸ್ವಾರ್ಥ್, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಬಿ.ಎಂ. ಭಾರತಿ ಹಾಗೂ ನಿಪ್‌ ಮ್ಯಾಟ್‌ ವಿಶ್ವಸ್ಥರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಡಾವಣೆ ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

ಕ್ರೀಡಾ ಸ್ಪರ್ಧೆಗಳು ನ.4 ರಿಂದ 30 ರವರೆಗೆ ನಡೆಯಲಿದ್ದು, ಎಲ್ಲಾ ಸ್ಪರ್ಧೆಗಳನ್ನು ಬಡಾವಣೆಯ ನಿವಾಸಿಗಳಿಗೆ ಅನುಕೂಲವಾಗುವಂತೆ ಭಾನುವಾರದಂದು ನಡೆಯಲಿವೆ ಎಂದು ಎಲ್‌ಎನ್‌ ಕ್ರೀಡಾ ಸಮಿತಿಯ ಸಂಚಾಲಕ ಮೈಕೊ ನಾಗರಾಜ್‌ರವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next