Advertisement

ದೈಹಿಕ-ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

05:21 AM Feb 23, 2019 | Team Udayavani |

ದಾವಣಗೆರೆ: ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳು ಸಹಕಾರಿ ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಸಚಿವ ಪ್ರೊ| ಪಿ. ಕಣ್ಣನ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಎಸ್‌.ಎಸ್‌. ಬಡಾವಣೆಯ ಎ ಬ್ಲಾಕ್‌ನ ಶ್ರೀಮತಿ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಶುಕ್ರವಾರ ಎಸ್‌ಬಿಸಿ ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದಿಂದ ಹಮ್ಮಿಕೊಂಡಿರುವ ದಾವಣಗೆರೆ ವಿವಿಯ ಅಂತರ್‌ ಕಾಲೇಜುಗಳ ಮಹಿಳಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. 

ದೈಹಿಕ ಶ್ರಮವಿಲ್ಲದಿದ್ದರೆ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಅದಕ್ಕಾಗಿ ದೇಹ ಮತ್ತು ಮನಸ್ಸಿಗೆ ವ್ಯಾಯಮ, ಶಕ್ತಿ, ಚೈತನ್ಯ ತುಂಬುವ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪ್ರತಿನಿತ್ಯ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಂಡ ಜನರು ಹೆಚ್ಚು ಆರೋಗ್ಯವಂತರಾಗಿ, ಸದೃಢರಾಗಿರುತ್ತಾರೆ ಎಂದರು.

ಗ್ರಾಮೀಣ ಪ್ರದೇಶದ ಜನರು ಆಟಕ್ಕೆ ಸಮನಾಗಿ ಕೆಲಸ ಮಾಡುವುದರಿಂದ ದೈಹಿಕವಾಗಿ ಸದೃಢರಾಗಿರುತ್ತಾರೆ. ದೇಹದ ಎಲ್ಲಾ ಅಂಗಾಗಗಳು ಬಲಿಷ್ಠವಾಗಿರುತ್ತವೆ. ಹಾಗಾಗಿ ಯುವ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಹೆಚ್ಚೆಚ್ಚು ಕ್ರಿಯಾಶೀಲರಾಗಿ ಭಾಗವಹಿಸಿ ಆರೋಗ್ಯವಾಗಿರಬೇಕು.
ಕ್ರೀಡೆಯಿಂದ ಓದಿನಲ್ಲಿ ಕೂಡ ಹೆಚ್ಚು ಆಸಕ್ತಿ, ಚೈತನ್ಯ ಮೂಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಬಿಸಿ ಪ್ರಥಮ ದರ್ಜೆ ಕಾಲೇಜು ಅಧ್ಯಕ್ಷ ಬಿ.ಸಿ.ಉಮಾಪತಿ ಮಾತನಾಡಿ, ಪ್ರತಿಯೊಬ್ಬರು ಸಹ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಹಿಂದಿನ ಕಾಲದಲ್ಲಿ ಯಾವುದೇ ಅನುಕೂಲಗಳು ಇರಲಿಲ್ಲ. ಎಲ್ಲವನ್ನು ಪರಿಶ್ರಮದ ಮೂಲಕವೇ ಪಡೆದುಕೊಳ್ಳಬೇಕಾಗಿತ್ತು. ಇದೀಗ ತಂತ್ರಜ್ಞಾನದಿಂದ ಸೌಲಭ್ಯಗಳು ದೊರೆಯುತ್ತಿದ್ದು, ದೈಹಿಕವಾಗಿ ಶ್ರಮ ಪಡುವ ಅಗತ್ಯವೇ ಇಲ್ಲದಂತಾಗಿದೆ ಎಂದು ಹೇಳಿದರು.

Advertisement

ಕುಡಿಯುವ ನೀರು, ಸೇವಿಸುವ ಆಹಾರ, ಗಾಳಿ ಪರಿಶುದ್ಧವಾಗಿಲ್ಲ. ಹಾಗಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು. ಇದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ದೇಹ ದಣಿಸಿದಷ್ಟು, ಗಟ್ಟಿಗೊಂಡಷ್ಟು ಹೆಚ್ಚು ಆರೋಗ್ಯವಂತರಾಗಿ ಇರಬಹುದು ಎಂದರು. 

ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ್‌, ಥ್ರೋಬಾಲ್‌, ಬಾಲ್‌ ಬ್ಯಾಡ್ಮಿಂಟನ್‌, ಖೊ-ಖೋ, ಹ್ಯಾಂಡ್‌ ಬಾಲ್‌, ಟೆನ್ನಿಕ್ವಾಯಿಟ್‌ ಸೇರಿದಂತೆ 7 ಬಗೆಯ ಆಟಗಳಿದ್ದು, 25 ಕಾಲೇಜಿನಿಂದ ಸುಮಾರು 250ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.  ದಾವಣಗೆರೆ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಸ್‌. ರಾಜ್‌ಕುಮಾರ್‌, ಎಸ್‌ಬಿಸಿ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ| ಕೆ. ಷಣ್ಮುಖ, ಎಂಎಚ್‌. ಬೇತೂರಮಠ, ಲೆ. ರಾಜಶೇಖರ್‌, ಎಂ.ಎಚ್‌. ನಿಜಾನಂದ್‌ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next