Advertisement

ಕ್ರೀಡೆ ದೈಹಿಕ-ಮಾನಸಿಕ ಆರೋಗ್ಯಕ್ಕೆ ಸಹಕಾರಿ

04:38 PM Aug 10, 2022 | Team Udayavani |

ಶಹಾಬಾದ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾ ಗಿದ್ದು, ಖುಷಿಯಿಂದ ಆಟವಾಡಿ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ದೇವೆಂದ್ರ ರೆಡ್ಡಿ ಹೇಳಿದರು.

Advertisement

ನಗರದ ಬಿವಿಎಮ್‌ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎರಡು ವರ್ಷಗಳಿಂದ ಕೋವಿಡ್‌ ದಾಳಿಗೆ ಇಡೀ ಜಗತ್ತೆ ನಲುಗಿ ಹೋಗಿತ್ತು. ಅದರಿಂದ ಶಾಲೆಗಳ ಚಟುವಟಿಕೆಗಳು ಸ್ಥಗಿತವಾಗಿದ್ದವು. ಈ ಸಂದಿಗ್ಧ ಸ್ಥಿತಿಯಲ್ಲಿ ಕ್ರೀಡಾಕೂಟ ಮರೆತೆ ಹೋಗಿತ್ತು. ಈಗ ಕ್ರೀಡಾಕೂಟ ಆಯೋಜಿಸಿರುವುದರಿಂದ ಮಕ್ಕಳಲ್ಲಿ ಉತ್ಸಾಹ ಕಂಡುಬರುತ್ತಿದೆ ಎಂದರು. ಶಿಕ್ಷಣ ಸಂಯೋಜಕ ಶ್ರೀಧರ ರಾಠೊಡ ಮಾತನಾಡಿ, ಶಿಕ್ಷಣದ ಜತೆಗೆ ಕ್ರೀಡೆ ಅಗತ್ಯ. ಉತ್ತಮ ಆರೋಗ್ಯವಿರುವ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ ಎಂದರು.

ನಗರಸಭೆ ಉಪಾಧ್ಯಕ್ಷೆ ಸಲೀಮಾ ಬೇಗಂ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಭಾವಿ, ಬಿಆರ್‌ಪಿ ಅಶ್ವಿ‌ನಿ, ಚಿದಾನಂದ ಕುಡ್ಡನ್‌, ಚನ್ನಬಸಪ್ಪ ಕೊಲ್ಲೂರ್‌, ಕ್ರೀಡಾಕೂಟ ಸಂಯೋಜಕರಾದ ಬನ್ನಪ್ಪ ಸೈದಾಪುರ, ಸಿಆರ್‌ಸಿಗಳಾದ ಸತ್ಯನಾರಾಯಣ, ಮರೆಪ್ಪ ಭಜಂತ್ರಿ, ಶಿವಪುತ್ರ ಕರಣಿಕ್‌, ಸಂತೋಷ ಸಲಗರ, ದೇವೇಂದ್ರ ದೊರೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಕರಾದ ಎಚ್‌.ವೈ.ರಡ್ಡೇರ್‌, ಅಮೃತಪ್ಪ ಹಾಗೂ ಕ್ರೀಡಾಪಟು ಹರ್ಷ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next