Advertisement

SPL23ಕರಾವಳಿ ಕೋಯಲ್ ಚಾಂಪಿಯನ್ಸ್: ಟೀಂ ಪ್ರತಿಮಾ ವಿನ್ನರ್, ಪಂಚಮ್ ಹಳೆಬಂಡಿ ಟೀಂ ರನ್ನರ್ ಅಪ್

03:45 PM Jun 06, 2023 | Team Udayavani |

ಮಂಗಳೂರು: ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅರುಣ್ಯ ಫೌಂಡೇಶನ್ ಹಾಗೂ ದಾಸ್ ಕುಡ್ಲ ಇವೆಂಟ್ಸ್ ಆಯೋಜಿಸಿದ್ದ, ಎಸ್ಪಿಎಲ್23 ಕರಾವಳಿ ಕೋಯಲ್ ಚಾಂಪಿಯನ್ಸ್ ಸಂಗೀತ ಸ್ಪರ್ಧೆಯಲ್ಲಿ ಟೀಂ ಪ್ರತಿಮಾ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದರೆ, ಪಂಚಮ್ ಹಳೆಬಂಡಿ ಟೀಂ ದ್ವಿತೀಯ ಸ್ಥಾನವನ್ನು ಪಡೆಯಿತು. ಎರಡು ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ 9 ಲೀಗ್, 3 ಸೆಮಿಫೈನಲ್ ಸೇರಿದಂತೆ 13 ಪಂದ್ಯಗಳಲ್ಲಿ ಅಮೋಘ 178 ಹಾಡುಗಳನ್ನು 72 ಸ್ಪರ್ಧಿಗಳು ಹಾಡಿದರು. ಖ್ಯಾತ ಹಿನ್ನೆಲೆ ಗಾಯಕರಾಗಿರುವ ಡಾ. ಜಯಶ್ರೀ ಅರವಿಂದ್ ಹಾಗೂ ಶಶಿಧರ್ ಕೋಟೆ ತೀರ್ಪುಗಾರರಾಗಿದ್ದರು.

Advertisement

ಸಂಜೆಯ ಕಾರ್ಯಕ್ರಮದ ಪಂಚಭಾಷಾ ರಸಮಂಜರಿ ಭಾಗವು ಪ್ರೇಕ್ಷಕರನ್ನು ರಂಜಿಸಿತು. ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿನ ಹಾಗೂ ಖವ್ವಾಲಿ, ಭಾವಗೀತೆ, ಚಲನಚಿತ್ರ ಗೀತೆಗಳ ಪ್ರಕಾರಗಳ ಹಾಡುಗಳನ್ನು ಯುವ ಮತ್ತು ಹಿರಿಯ ಪ್ರತಿಭಾವಂತ ಗಾಯಕರು ಹಾಡಿ ಮನರಂಜಿಸಿದರು.

‘ಮಧುಬನ ಕರೆದರೆ’ ಖ್ಯಾತಿಯ ವಾಣಿ ಹರಿಕೃಷ್ಣ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಕಲಾವಿದರ ಉಪಸ್ಥಿತಿಯಲ್ಲಿ ಡಾ. ಎಂ. ಮೋಹನ್ ಆಳ್ವರಿಗೆ ‘ಕಲಾವೀರ ತಿಲಕರತ್ನ ಗೌರವ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಹಿರಿಯ ಪತ್ರಕರ್ತ, ಮನೋಹರ್ ಪ್ರಸಾದ್ ಅವರಿಗೆ ಸಕಲ ಕಲಾಸಂಪನ್ನ ಗೌರವ ಪ್ರಶಸ್ತಿ, ಹಿರಿಯ ಗಾಯಕರಾದ ಶಾರದಾ ಬಾರ್ಕೂರು ಹಾಗೂ ಟಾಗೀರ್‌ ದಾಸ್‌ ಅವರಿಗೆ ಸಂಗೀತ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು.

ತಬಲಾ ವಾದಕ ಎಸ್‌. ಶಿವಾನಂದ ಶೇಟ್, ಗಾಯಕ ತೋನ್ಸೆ ಪುಷ್ಕಳ್ ಕುಮಾರ್, ಸಂಗೀತ ಸಂಯೋಜಕ ಕೆ. ರವಿಶಂಕರ್ ಅವರಿಗೆ ಹಿರಿಯ ಕಲಾ ಸಾಧಕ ಗೌರವ ಪ್ರಶಸ್ತಿಯನ್ನು ಅರ್ಪಿಸಲಾಯಿತು. ಹಲವಾರು ಗಣ್ಯರಿಗೆ ಕಲಾಪೋಷಕ ರತ್ನ ಗೌರವ ಪ್ರಶಸ್ತಿ, ವಿಶೇಷ ಸಾಧಕ ಗೌರವ ಪ್ರಶಸ್ತಿ, ಗೌರವ ಸಮಾಜಸೇವಾ ರತ್ನ ಪ್ರಶಸ್ತಿ, ಕಲಾಸಾಧಕ ಗೌರವ ಪ್ರಶಸ್ತಿ, ಗೌರವ ಸಮಾಜ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ವಿಶೇಷ ಚೇತನ ಪುಟಾಣಿ ಕಲಾವಿದರಿಗೆ ಕುಳಾಯಿ ಫೌಂಡೇಶನ್ ವತಿಯಿಂದ ಪ್ರತಿಭಾ ಕುಳಾಯಿ ಧನ ಸಹಾಯವನ್ನು ಹಸ್ತಾಂತರಿಸಿದರು.

ಎಲ್ಲಾ ಟೀಂಗಳ ನಾಯಕರು, ಉಪನಾಯಕರ ಉಪಸ್ಥಿತಿಯಲ್ಲಿ ಪಂಚಭಾ‍ಷಾ ಕಾರ್ಯಕ್ರಮದಲ್ಲಿ ವೇದವ್ಯಾಸ್ ಕಾಮತ್, ಶ್ರೀಪತಿ ಭಟ್, ಉದಯ್‌ ಗುರೂಜಿ, ಕೆ. ಆರ್. ಜನಾರ್ದನ ಬಾಬು, ದಿವಾಕರ್ ಬಿಜೈ, ಮುಖ್ಯ ಸಂಯೋಜಕ ರಮೇಶ್ಚಂದ್ರ, ಅರುಣ್ಯ ಫೌಂಡೇಶನ್ ಮ್ಯಾನೆಜಿಂಗ್ ಟ್ರಸ್ಟಿ ವಿಕ್ರಮ್‌ ಕೆ. ದಾಸ್‌ ಕುಡ್ಲ ಇವೆಂಟ್ಸ್‌ನ ಅಧ್ಯಕ್ಷ ಸದಾಶಿವದಾಸ್ ಪಾಂಡೇಶ್ವರ, ಅರುಣ್ಯ ಕಾರ್ಯದರ್ಶಿ ಶ್ರೀನಿವಾಸ ಪೆಜತ್ತಾಯ, ಕಾರ್ಯಕಾರಿ ಸಮಿತಿಯ ನಾರಾಯಣ ರಾಜ್, ಸಾಯಿ ಮಲ್ಲಿಕಾ, ಯತಿನ್, ಮಂಜುನಾಥ್, ಅನಿರುದ್ಧ್ ಇತರರು ಉಪಸ್ಥಿತರಿದ್ದರು.

Advertisement

ಪ್ರಶಸ್ತಿ ವಿವರ:

ಕಲಾವೀರ ತಿಲಕರತ್ನ ಗೌರವ ಪ್ರಶಸ್ತಿ – ಡಾ. ಎಂ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ

ಸಕಲ ಕಲಾಸಂಪನ್ನ ಗೌರವ ಪ್ರಶಸ್ತಿ – ಮನೋಹರ್ ಪ್ರಸಾದ್, ಹಿರಿಯ ಪತ್ರಕರ್ತರು

ಸಂಗೀತ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ – ಟಾಗೋರ್‌ ದಾಸ್ ಮತ್ತು ಶಾರದಾ ಬಾರ್ಕೂರು

ಹಿರಿಯ ಕಲಾ ಸಾಧಕ ಗೌರವ ಪ್ರಶಸ್ತಿ

ಶಾಂತರಾಮ ಶೆಟ್ಟಿ, ಹಿರಿಯ ಸಾಹಿತಿಗಳು

ಎಸ್‌. ಶಿವಾನಂದ ಶೇಟ್, ಹಿರಿಯ ತಬಲಾ ವಾದಕರು

ತೋನ್ಸೆ ಪುಷ್ಕಳ್‌ ಕುಮಾರ್, ಹಿರಿಯ ಗಾಯಕರು

ಕೆ. ರವಿಶಂಕರ್‌, ಸಂಗೀತ ಸಂಯೋಜಕರು

ಗೌರವ ಕಲಾಪೋಷಕ ರತ್ನ ಪ್ರಶಸ್ತಿ

ಪ್ರಮೋದ್ ಬಳ್ಳಾಲ್‌ಬಾಗ್

ಸಂತೋಷ್ ಕೆವಿನ್ ನಝರತ್, ಅಧ್ಯಕ್ಷರು, ವೆರಿಟೊ ಮೀಡಿಯಾ ಪ್ರೈ. ಲಿ.

ಮಹಮ್ಮದ್ ಹೆಜ್ಮಾಡಿ, ಸಮಾಜ ಸೇವಕರು

ಪ್ರಕಾಶ್ ಪಾಂಡೇಶ್ವರ್‌, ಚಲನಚಿತ್ರ ನಿರ್ಮಾಪಕರು/ನಿರ್ದೇಶಕರು

ಕಿರಣ್ ಬಿ., ಚೀಫ್ ಜನರಲ್ ಮ್ಯಾನೇಜರ್, ಎಂ.ಆರ್.ಪಿ.ಎಲ್

ದಿವಾಕರ್‌ ಪಾಂಡೇಶ್ವರ್, ಮಾಜಿ ಮಹಾಪೌರರು, ಮಂಗಳೂರು ಮಹಾನಗರ ಪಾಲಿಕೆ

ಬಿ. ಎಂ. ಶರೀಫ್ ಜೋಕಟ್ಟೆ, ಸಮಾಜ ಸೇವಕರು

ಮೀರಾ ಪಡಿಯಾರ್

ಕಲಾಪೋಷಕ ರತ್ನ ಗೌರವ ಪ್ರಶಸ್ತಿ

ಗಿರೀಶ್ ಪೂಜಾರಿ ಕಾಪು, ಇಂಡಸ್ಟ್ರಿಯಲ್‌ ಕ್ಯಾಟರರ್ಸ್, ಪೀಣ್ಯ, ಬೆಂಗಳೂರು

ಪ್ರತಿಭಾ ಕುಳಾಯಿ, ಅಧ್ಯಕ್ಷರು, ಕುಳಾಯಿ ಫೌಂಡೇಶನ್

ಎ. ಕೆ. ರವೀಂದ್ರ, ಅಧ್ಯಕ್ಷರು, ಕುವೈಟ್‌ ತುಳುಕೂಟ

ಬಿ. ನಾಗೇಂದ್ರ ಬಾಳಿಗಾ, ವಿಎನ್‌ಆರ್ ಗೋಲ್ಡ್, ಬಂಟ್ವಾಳ

ರತೀಂದ್ರನಾಥ್ (ಆಶು)

ಮಧುಸೂದನ ಎಂ. ಎಜಿಎಂ, ಬ್ಯಾಂಕ್ ಆಫ್ ಬರೋಡ, ಮಂಗಳೂರು

ಡಾ. ಅಣ್ಣಯ್ಯ ಕುಲಾಲ್, ಉಳೂರು

ಗೌರವ ಸಮಾಜ ಸೇವಾರತ್ನ ಪ್ರಶಸ್ತಿ

ದೀಪಕ್‌ ಕುಮಾರ್‌ ಎಂ., ಉಪ ಮುಖ್ಯ ಸಂಚಾರ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ, ಬೆಂಗಳೂರು

ಮಹಮ್ಮದ್‌ ಹನೀಫ್, ಹಿದಾಯತ್ ಫೌಂಡೇಶನ್

ಕಲಾಸಾಧಕ ಗೌರವ ಪ್ರಶಸ್ತಿ

ವಸಂತ್‌ ಕುಮಾರ್‌ ಕುಂಬ್ಳೆ, ಕೀಬೋರ್ಡ್ ವಾದಕರು

ಯಶವಂತ್ ದೇವಾಡಿಗ, ಕ್ಲಾರಿಯೋನೆಟ್‌ ವಾದಕರು

ದಾಮೋದರ ಭಾಗವತ್‌, ಹಿರಿಯ ತಬಲಾ ಪಟು

ಡಾ. ರಾಜೇಶ್‌ ಆಳ್ವ

ದೀಪ್ತಿ ಬಾಲಕೃಷ್ಣ, ಯಕ್ಷಗಾನ ತಾಳಮದ್ದಲೆ ಖ್ಯಾತಿ

ದೇವರಾಜ್‌, ಮ್ಯಾಂಡೊಲಿನ್ ವಾದಕರು

ಸತ್ಯವಿಜಯ ಭಟ್‌, ತಬಲಾ ವಾದಕರು

ಆನಂದ, ಜನರಲ್‌ ಮ್ಯಾನೆಜರ್, ಅದ್ವೈತ್ ಹ್ಯುಂಡೈ

ವಿಶೇಷ ಸಾಧಕ ಗೌರವ ಪ್ರಶಸ್ತಿ

ಡಾ. ಕೇಶವರಾಜ್‌, ವೇದಮಾಯು ಆಯುರ್ವೇದ ಆಸ್ಪತ್ರೆ

ಪ್ರೇಮ್‌ ಕುಮಾರ್, ಉಡುಪಿ

ಕೇಶವ ಕನಿಲ

ಕೆ. ಕೆ. ನೌಶದ್

ಗುರುರಾಜ್

ಡಾ. ಅನಂತ ಪ್ರಭು ಗುರುಪುರ, ಉಪನ್ಯಾಸಕರು, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು

ಡಾ. ಮಾಲತಿ ಶೆಟ್ಟಿ ಮಾಣೂರು, ಸಾಹಿತಿ, ಸಂಪಾದಕಿ, ಅಮೃತ ಪ್ರಕಾಶ ಪತ್ರಿಕೆ

ಕೆ. ಎಂ. ಆಸೀಫ್ ಡೀಲ್ಸ್, ಸ್ಥಾಪಕಾಧ್ಯಕ್ಷರು, ಬಿಹ್ಯೂಮನ್ – ಸರ್ವಿಂಗ್ ಹ್ಯೂಮನಿಟಿ

ವಂದನಾ ರೈ ಕಾರ್ಕಳ, ಶಿಕ್ಷಕಿ, ಉಡುಪಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಹನೀಫ್ ಪೆರ್ಲಿಯ, ಯುಎಇ ಮಹಮ್ಮದ್ ರಫಿ ಗಾನಾ ಪ್ರಶಸ್ತಿ ವಿಜೇತರು

ಉದಯ ಪೂಜಾರಿ, ಸ್ಥಾಪಕಾಧ್ಯಕ್ಷರು, ಬಿರುವೆರ್‌ ಕುಡ್ಲ

ಶಿಲ್ಪಾ ನವೀನ್‌ ಘೋರ್ಪಡೆ, ಮಾಲಕರು, ಡಿಟೇಲಿಂಗ್‌ ಡೆವಿಲ್ಸ್

ಗೌರವ ಕ್ರೀಡಾರತ್ನ ಪ್ರಶಸ್ತಿ – ಸಂದೇಶ್ ಹೊಯ್ಗೆಬಜಾರ್‌

Advertisement

Udayavani is now on Telegram. Click here to join our channel and stay updated with the latest news.

Next