Advertisement

ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿ ಸ್ಪೈಸ್‌ಜೆಟ್‌: 80 ಪೈಲಟ್‌ಗಳಿಗೆ “ರಜೆ’!

09:33 PM Sep 20, 2022 | Team Udayavani |

ನವದೆಹಲಿ: ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್‌ ಮಂಗಳವಾರ ತನ್ನ 80 ಪೈಲಟ್‌ಗಳಿಗೆ 3 ತಿಂಗಳ ವೇತನರಹಿತ ರಜೆಯನ್ನು ನೀಡಿದೆ.

Advertisement

ವೆಚ್ಚ ಕಡಿತದ ಉದ್ದೇಶದಿಂದ ತಾತ್ಕಾಲಿಕವಾಗಿ ಇಂಥ ನಿರ್ಧಾರ ಕೈಗೊಂಡಿರುವುದಾಗಿ ಸಂಸ್ಥೆ ತಿಳಿಸಿದೆ.

ಆದರೆ, ಒತ್ತಾಯಪೂರ್ವಕವಾಗಿ ರಜೆ ನೀಡಿರುವ ಸಂಸ್ಥೆ ಬಗ್ಗೆ ಪೈಲಟ್‌ಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

3 ತಿಂಗಳ ಬಳಿಕ ನಮ್ಮನ್ನು ವಾಪಸ್‌ ಕರೆಯುತ್ತಾರೋ ಇಲ್ಲವೋ ಎಂಬುದನ್ನೂ ಸ್ಪಷ್ಟಪಡಿಸಿಲ್ಲ. ಈ ಅನಿಶ್ಚಿತತೆ ಭಯ ಮೂಡಿಸಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next