Advertisement

ಬೆಳ್ಳಂಬೆಳಗ್ಗೆ ಲಕ್ನೋ-ದೆಹಲಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರು ಸಾವು, 30 ಮಂದಿಗೆ ಗಾಯ

10:31 AM Sep 15, 2022 | Team Udayavani |

ಉತ್ತರ ಪ್ರದೇಶ : ಲಕ್ನೋ-ದೆಹಲಿ ಹೆದ್ದಾರಿಯ ಸೀತಾಪುರ ಜಿಲ್ಲೆಯ ಸಿದ್ಧೌಲಿ ಪ್ರದೇಶದಲ್ಲಿ 35 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಗೆ ವೇಗವಾಗಿ ಬಂದ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ 30 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.

Advertisement

ಬಾರಾಬಂಕಿ ಜಿಲ್ಲೆಯ ದೇವಾ ಷರೀಫ್ ದೇಗುಲಕ್ಕೆ ಮಗುವಿನ ಹೆಸರಿನಲ್ಲಿ ಪೂಜೆ ಮಾಡಿಸಲು ಕುಟುಂಬ ಸದಸ್ಯರು ಶಹಜಹಾನ್‌ಪುರ ರೌಜಾ ಪ್ರದೇಶದಿಂದ ಟ್ರಾಕ್ಟರ್ ಮೂಲಕ ಗುರುವಾರ ಮುಂಜಾನೆ 1:30 ರ ಸುಮಾರಿಗೆ ಹೊರಟಿದ್ದಾರೆ ಈ ವೇಳೆ ಬಾರಿ ಮಳೆ ಸುರಿಯುತ್ತಿದ್ದ ಪರಿಣಾಮ ರಸ್ತೆ ಸರಿಯಾಗಿ ಕಾಣದ ಹಿನ್ನೆಲೆಯಲ್ಲಿ ಚಾಲಕ ಟ್ರ್ಯಾಕ್ಟರ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾನೆ ಈ ವೇಳೆ ವೇಗವಾಗಿ ಬಂದ ಟ್ರಕ್ ಟ್ರ್ಯಾಕ್ಟರ್ ಟ್ರಾಲಿ ಗೆ ಢಿಕ್ಕಿ ಹೊಡೆದಿದೆ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮೂವತ್ತು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಅಪಘಾತದ ಬಳಿಕ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕ್ರೇನ್ ಮೂಲಕ ವಾಹನಗಳನ್ನು ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ದುರ್ಘಟನೆಯಲ್ಲಿ ಮೃತಪಟ್ಟವರನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ : ಇಂಜಿನಿಯರ್ ಡೇ; ಸರ್‌.ಎಂ.ವಿ.ಯವರ162ನೇ ಜನ್ಮ ದಿನಾಚರಣೆ ಜನ್ಮ ದಿನಾಚರಣೆ

Advertisement

Udayavani is now on Telegram. Click here to join our channel and stay updated with the latest news.

Next