Advertisement

ಶಿರಸಿಯಲ್ಲಿ ಯಶಸ್ವಿಯಾಗಿ ಜರುಗಿದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ

09:50 PM Aug 30, 2021 | Team Udayavani |

ಶಿರಸಿ: ಹಿಂದಿನ ದಿನಗಳಿಗೆ ಹೊಲಿಸಿದರೆ ಇಂದಿನ ದಿನದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಸಾಧಿಸಲು ಇಂದು ಅನೇಕ ಅವಕಾಶಗಳಿವೆ. ಅದು ಕ್ರೀಡಾ ಕ್ಷೇತ್ರವಾಗಿರಬಹುದು ಅಥವಾ ಇನ್ನೀತರೇ ಕ್ಷೇತ್ರವಾಗಿರ ಬಹುದು ಎಂದು ರಾಷ್ಟ್ರೀಯ ಕ್ರೀಡಾಪಟು ಜ್ಯೋತಿ ಭಟ್ ಹೇಳಿದರು.

Advertisement

ಶಿರಸಿಯ ಅದ್ವೈತ ಸ್ಕೇಟರ್ಸ  ಸ್ಪೋರ್ಟ್ಸ್ ಕ್ಲಬ್ ಏರ್ಪಡಿಸಿದ್ದ  ಸ್ಕೇಟಿಂಗ್ ಸ್ಪರ್ಧೆಗೆ  ಚಾಲನೆ ನೀಡಿ ಮಾತನಾಡಿದ ಅವರು, ಶಿರಸಿಯಂತಹ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ಸ್ಕೇಟಿಂಗ್ ಕ್ರೀಡೆಯ ತರಬೇತಿ ಆರಂಭವಾಗಿದೆ. ಅನೇಕ ಸ್ಕೇಟಿಂಗ್ ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಜೀವನದಲ್ಲಿ ಸಾಧಿಸಿದಾಗ ಸಿಗುವ‌ ಸಾರ್ಥಕತೆ ಇನ್ನೆಲ್ಲೂ‌ ಸಿಗುವುದಿಲ್ಲ. ಪರಿಶ್ರಮವೇ ಸಾಧನೆಗೆ ದಾರಿಯಾಗುವುದು ಎಂದು ಉಪಸ್ಥಿತರಿದ್ದ ಸ್ಕೇಟಿಂಗ್ ಕ್ರೀಡಾಪಟುಗಳಿಗೆ  ಭವಿಷ್ಯದಲ್ಲಿ ಶಿರಸಿಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುವಂತೆ ಪ್ರೇರೇಪಿಸಿದರು.

ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯನ್ನು ನಾಲ್ಕು ವಿಭಾಗದಲ್ಲಿ‌ ಏರ್ಪಡಿಸಲಾಗಿತ್ತು.

11-14 ವರ್ಷದ ವಿಭಾಗದಲ್ಲಿ

ಪ್ರಥಮ ಸ್ಥಾನ

Advertisement

ನವೀನ ಮಡಿವಾಳ

ದ್ವಿತೀಯ ಸ್ಥಾನ

ನವೀನ ಎಮ್ ಡಿ

9-11 ವರ್ಷದ ವಿಭಾಗದಲ್ಲಿ

ಪ್ರಥಮ ಸ್ಥಾನ

ಆರ್ಯನ್ ಮಾಡಗೆರಿ

ದ್ವಿತೀಯ ಸ್ಥಾನ

ಅದ್ವೈತ ಪ್ರಹ್ಲಾದ ದೇವ

7-8 ವರ್ಷದ ವಿಭಾಗದಲ್ಲಿ

ಪ್ರಥಮ ಸ್ಥಾನ : ಖುಷಿ ಸಾಲೇರ

ದ್ವಿತೀಯ ಸ್ಥಾನ : ಅದ್ವೈತ ಕಿರಣಕುಮಾರ ಕುಡಾಳಕರ

5-7 ವರ್ಷದ ವಿಭಾಗದಲ್ಲಿ

ಪ್ರಥಮ ಸ್ಥಾನ : ಶಂಕರ ಗೌಡ

ದ್ವಿತೀಯ ಸ್ಥಾನ : ಪ್ರಣೀತ ಜೋಗಳೆಕರ.  ಸ್ಪರ್ಧಿಗಳು ವಿಜೇತರಾದರು.

ವಿಜೇತರಿಗೆ  ಶಿರಸಿಯ ಕಾಮಧೇನು ಜ್ಯುವೇಲರಿಸ್ ಮಾಲಕ ಪ್ರಕಾಶ ಪಾಲನಕರ ಪ್ರಮಾಣಪತ್ರವನ್ನು ವಿತರಿಸಿದರು.‌

ಕಾರ್ಯಕ್ರಮದಲ್ಲಿ ಪ್ರಕಾಶ ಪಾಲನಕರ ಹಾಗೂ ರಾಷ್ಟ್ರೀಯ ಕ್ರೀಡಾಪಟು ಜ್ಯೋತಿ ಭಟ್ ಇವರನ್ನು ಸ್ಕೇಟಿಂಗ್ ಕ್ಲಬಿನ ಪ್ರಧಾನ ಕಾರ್ಯದರ್ಶಿ ಗೌರಿ ಲೋಕೇಶ್ ಹಾಗೂ ಟ್ರಸ್ಟಿ ವಿಶ್ವನಾಥ ಕುಡಾಳಕರ ಸನ್ಮಾನಿಸಿದರು.

ಸ್ಪರ್ಧೆಯ ಆರಂಭದಲ್ಲಿ ಕ್ರೀಡಾಪಟುಗಳಿಗೆ ಅರ್ಚನಾ ಪಾವುಸ್ಕರ ಕ್ರೀಡಾ ಪ್ರತಿಜ್ಞಾವಿಧಿಯನ್ನು ಭೋದಿಸಿದರು.

ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯ ಸಂಪೂರ್ಣ ಜವಾಬ್ದಾರಿಯನ್ನು ಕ್ಲಬಿನ ಕ್ರೀಡಾಪಟುಗಳ ಪಾಲಕ ಪೋಷಕರೇ ನಿರ್ವಹಿಸಿದ್ದರು.  ಸ್ಪರ್ಧೆಯ ನಿರ್ಣಾಯಕರಾಗಿ ಶ್ಯಾಮಸುಂದರ ನಿವರ್ಹಿಸಿದರು.

ಅದ್ವೈತ ಸ್ಕೇಟಿಂಗ್ ಕ್ಲಬಿನ ಅಧ್ಯಕ್ಷ ಕಿರಣಕುಮಾರ, ತರಬೇತುದಾರರಾದ ತರುಣ ಗೌಳಿ ಪಾಲಕ ಪೋಷಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next