Advertisement

ಮಾತಿನ ಮತ,  ಸಂದರ್ಶನ : ಗಂಗಾಧರ ಗೌಡ ಮಾಜಿ ಶಾಸಕರು, ಬೆಳ್ತಂಗಡಿ

12:24 PM Feb 28, 2018 | Team Udayavani |

ತನ್ನ 26ನೆಯ ವಯಸ್ಸಿಗೆ ಶಾಸಕನಾಗಿ ಆಯ್ಕೆಯಾಗಿ 27ನೇ ವಯಸ್ಸಿಗೆ ಯುವಜನ, ಕ್ರೀಡಾ ಇಲಾಖೆ ಸಚಿವರಾದ ಕೆ. ಗಂಗಾಧರ ಗೌಡರು ಬೆಳ್ತಂಗಡಿ ತಾಲೂಕಿನ ಏಕೈಕ ಸಚಿವರು.

Advertisement

ನಿಮ್ಮ ಅವಧಿಯ ಸಾಧನೆಗಳೇನು?
13 ಸಾವಿರ ಜನರಿಗೆ ಭೂಮಿ ಹಕ್ಕು, 7ರಿಂದ 8 ಸಾವಿರ ಜನರಿಗೆ ದರ್ಖಾಸ್ತು ನೀಡಿದ್ದೇವೆ. ಪ್ರತಿ ಗ್ರಾಮಗಳಿಗೆ ಅಂಗನವಾಡಿಯಂತೆ ಒಟ್ಟು 175 ಅಂಗನವಾಡಿಗಳ ರಚನೆಯಾಗಿದೆ. ಹಳ್ಳಿ ಹಳ್ಳಿಗೆ ಡಾಮರು ರಸ್ತೆಯಾಗಿದೆ. ಅನೇಕ ಪ್ರೌಢಶಾಲೆಗಳ ರಚನೆಯಾಗಿದೆ, ಪದವಿ ಪೂರ್ವ ಕಾಲೇಜುಗಳಾಗಿವೆ. ಬೆಳ್ತಂಗಡಿಯಲ್ಲಿ ಪ್ರಥಮ ದರ್ಜೆ ಕಾಲೇಜು ನಮ್ಮ ಅವಧಿಯಲ್ಲೇ ಆದುದು. ಗ್ರಾಮಾಂತರಕ್ಕೆ ವಿದ್ಯುದೀಕರಣ ಕೂಡ ನಮ್ಮ ಅವಧಿಯಲ್ಲಿ ಹೆಚ್ಚಾಗಿ ನಡೆದಿದೆ.

ಈಗ ಬಿಜೆಪಿಯಲ್ಲಿದ್ದೀರಿ, ಟಿಕೆಟ್‌ ಆಕಾಂಕ್ಷಿಯೇ?
ಬಿಜೆಪಿಯಲ್ಲಿ ಕಾಂಗ್ರೆಸ್‌ನಂತೆ ಅರ್ಜಿ ಹಾಕುವ ಪರಿಪಾಠ ಇಲ್ಲ. ಬೇಕು ಅಂದರೆ ಕೊಡುವವರಲ್ಲ, ಬೇಡ ಅಂದರೆ ಬಿಡು
ವವರಲ್ಲ. ಅಮಿತ್‌ ಶಾ ನೇತೃತ್ವದ ಕೋರ್‌ ಕಮಿಟಿ ಇದೆ. ಸರ್ವೆ ಮೂಲಕ ಟಿಕೆಟ್‌ ಹಂಚಿಕೆ ಎಂದು ಘೋಷಣೆಯೂ
ಆಗಿದೆ. ಆದ್ದರಿಂದ ಪಕ್ಷದ ಗೆಲುವಿನ ಕಡೆಗೆ ನಮ್ಮ ಯೋಜನೆ, ಯೋಚನೆ ಹೊರತಾಗಿ ಬೇರೆಡೆ ಗಮನ ಇಲ್ಲ.

ಚುನಾವಣೆಗೆ ಪಕ್ಷ ತಯಾರಾಗಿದೆಯೇ?
ಬಿಜೆಪಿ ಚುನಾವಣೆಗೆ ಸಜ್ಜಾಗಿದೆ. ಅಮಿತ್‌ ಶಾ, ಮೋದಿ, ಯಡಿಯೂರಪ್ಪ ಅವರು ನಿರಂತರ ಮಾರ್ಗದರ್ಶನ ಮಾಡು ತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಯಡಿಯೂರಪ್ಪ ಅವರ ಪರಿವರ್ತನಾ ರ್ಯಾಲಿ ಅಪಾರ ಯಶಸ್ಸು ಪಡೆದಿದೆ. ಚುನಾವಣೆ ಘೋಷಣೆಯಷ್ಟೇ ಬಾಕಿ. ಕಾರ್ಯಕರ್ತರು ಸಿದ್ಧರಾಗಿದ್ದಾರೆ.

ಕಾಂಗ್ರೆಸ್‌ ಸರಕಾರದ ವೈಫಲ್ಯಗಳೇನು?
ಅವರ ಸಾಧನಗಳೇನು ಎನ್ನುವುದು ಜನತೆಗೆ ತಿಳಿಯಬೇಕು. ಅಕ್ಕಿ ವಿತರಣೆ ಮೊದಲೂ ನಡೆಯುತ್ತಿತ್ತು. ಈಗ 2 ರೂ. ಬದಲಿಗೆ ಉಚಿತ ಕೊಡುತ್ತಿದ್ದಾರೆ ಅಷ್ಟೆ. ಬೆಂಗಳೂರಿನ ಹ್ಯಾರಿಸ್‌ಮಗನಿಂದ ತೊಡಗಿ ಬೆಳ್ತಂಗಡಿವರೆಗೂ ಗೂಂಡಾ ಸಂಸ್ಕೃತಿಈ ರಾಜ್ಯಾಡಳಿತದ ದುಷ್ಪರಿಣಾಮ.

Advertisement

ಬೆಳ್ತಂಗಡಿ ಶಾಸಕರ ವೈಫಲ್ಯಗಳೇನು?
ಅವಾಚ್ಯ ಪದಗಳ ಮಾತುಗಳೇ ಅವರ ಬಂಡವಾಳ. ತಾಲೂಕಿನ ಅಧಿಕಾರಿಗಳ ಭ್ರಷ್ಟಾಚಾರ ತಡೆಯಲು ಅವರಿಂದ ಸಾಧ್ಯವಾಗಲೇ ಇಲ್ಲ. 94 ಸಿ, 94 ಸಿಸಿ ಎಷ್ಟೆಷ್ಟೋ ಸಾವಿರ ಜನರಿಗೆ ಕೊಟ್ಟಿದ್ದೇನೆ ಎನ್ನುತ್ತಾರೆ. ಈ ಹೆಸರಲ್ಲಿ ಅಧಿಕಾರಿಗಳು ಬಡವರಿಂದ ದೋಚಿದ ಹಣವೆಷ್ಟು ಎಂಬ ಲೆಕ್ಕ ಅವರಲ್ಲಿ ದೆಯೇ? ಇದಕ್ಕೆಲ್ಲ ಕಡಿವಾಣ ಹಾಕುವ ದಿನಗಳು ಬರಬೇಕಿದೆ.

„ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next