Advertisement

ಪರಿಸರ ಮಾಲಿನ್ಯಕ್ಕಿಂತ ಮಾತಿನ ಮಾಲಿನ್ಯ ಹೆಚ್ಚು

12:27 PM Feb 05, 2018 | |

ಬೆಂಗಳೂರು: ಪರಿಸರ ಮಾಲಿನ್ಯಕ್ಕಿಂತ ಮಾತಿನ ಮಲಿನತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಲೇಖಕಿ ಡಾ.ವಿಜಯಾ ಬೇಸರ ವ್ಯಕ್ತಪಡಿಸಿದರು. ನಗರದ ಬಸವನಗುಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಸಾವಣ್ಣ ಪ್ರಕಾಶನ ಹಮ್ಮಿಕೊಂಡಿದ್ದ ಪ್ರಕಾಶ್‌ ರೈ ಅವರ “ಇರುವುದೆಲ್ಲವ ಬಿಟ್ಟು…’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಎಲ್ಲರೂ ಪರಿಸರ ಮಾಲಿನ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ವಾಸ್ತವವಾಗಿ ಇದಕ್ಕಿಂತ ಮಾತಿನ ಮಾಲಿನ್ಯ ಹೆಚ್ಚಾಗುತ್ತಿದೆ. ಈ ಮಲೀನತೆಯನ್ನು ಗೂಡಿಸಿಹಾಕುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಯುವ ಮನಸ್ಸುಗಳು ಒಂದಾಗಬೇಕಿದೆ ಎಂದು ಸೂಚ್ಯವಾಗಿ ಹೇಳಿದರು.

ಅಸಾಹಿತ್ಯಿಕದಿಂದ ಸಾಹಿತ್ಯ: ಕವಿ ಜಯಂತ್‌ ಕಾಯ್ಕಿಣಿ ಮಾತನಾಡಿ, ಬದುಕು ಅಸಾಹಿತ್ಯಿಕವಾಗಿದ್ದು, ಅದನ್ನು ವಿಚಾರಪರತೆಯಿಂದ ಸಾಹಿತ್ಯಿಕಗೊಳಿಸಬೇಕು. ಆಗ ಮಾತ್ರ ಆ ಸಾಹಿತ್ಯ ಸಜೀವಗೊಳ್ಳುತ್ತದೆ. ಅಸಾಹಿತ್ಯಿಕ ಬದುಕನ್ನು ವಿವಿಧ ರೀತಿಗಳಲ್ಲಿ ಹಿಡಿದಿಡುವ ಪ್ರಯತ್ನ ಯಾವಾಗಲೂ ನಡೆಯುತ್ತಿರುತ್ತದೆ.

ಈ ಅನುಭವದಿಂದಲೇ ಸಾಹಿತ್ಯ ಬರಬೇಕು. ಹೀಗೆ ರೂಪುಗೊಳ್ಳುವ ಸಾಹಿತ್ಯ ಸಜೀವವಾಗಿರುತ್ತದೆ. ಇಲ್ಲದಿದ್ದರೆ, ಒತ್ತಾಯಪೂರ್ವಕವಾದ ಸಾಹಿತ್ಯ ಹೊರಬರುತ್ತದೆ ಎಂದು ಹೇಳಿದರು. ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಪುಸ್ತಕ ಬಿಡುಗಡೆ ಮಾಡಿದರು. ನಟರಾದ ಸುದೀಪ್‌, ಶ್ರುತಿ ಹರಿಹರನ್‌, ಅಚ್ಯುತ ಮಾತನಾಡಿದರು. ನಟ ಪ್ರಕಾಶ್‌ ರೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next