Advertisement

ನಾವು ಯಾವತ್ತೂ ಅಫ್ಘಾನಿಗರ ಪರ; ಎನ್‌ಎಸ್‌ಎ ದೊವಾಲ್‌

08:34 PM May 27, 2022 | Team Udayavani |

ದುಶಾಂಬೆ/ಕಾಬೂಲ್‌: ಅಫ್ಘಾನಿಸ್ತಾನದ ಜನರ ಪರವಾಗಿ ಭಾರತ ಸರ್ಕಾರ ಯಾವತ್ತೂ ನಿಂತಿದೆ. ಆ ನಿಲುವಿನಲ್ಲಿ ಯಾವತ್ತೂ ಬದಲಾವಣೆ ಉಂಟಾಗದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊವಾಲ್‌ ಹೇಳಿದ್ದಾರೆ.

Advertisement

ತಜಕಿಸ್ತಾನ ರಾಜಧಾನಿ ದುಶಾಂಬೆಯಲ್ಲಿ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ನಾಲ್ಕನೇ ಪ್ರಾದೇಶಿಕ ಭದ್ರತಾ ಸಮ್ಮೇಳನದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.

ಅಫ್ಘಾನಿಸ್ತಾನದ ಆಡಳಿತದ ಚುಕ್ಕಾಣಿ ವಹಿಸಿಕೊಂಡ ತಾಲಿಬಾನ್‌ ಉಗ್ರರು ಕಳೆದ ವರ್ಷದ ಆಗಸ್ಟ್‌ನಲ್ಲಿ ವಾಗ್ಧಾನ ಮಾಡಿದ್ದಂತೆ ನಡೆದುಕೊಳ್ಳದೆ ದುರ್ವರ್ತನೆ ತೋರುತ್ತಿದ್ದಾರೆ ಎಂಬ ವರದಿಗಳ ನಡುವೆಯೇ ಈ ಸಮ್ಮೇಳನ ನಡೆದಿದೆ.

“ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಅಗತ್ಯ. ಅಲ್ಲಿ ಮೂಲ ಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿ ಆಗಬೇಕು ಎನ್ನುವುದು ಭಾರತದ ಸಂಕಲ್ಪ. 2021ರ ಆಗಸ್ಟ್‌ ಬಳಿಕ ಇದುವರೆಗೆ 17 ಸಾವಿರ ಮೆಟ್ರಿಕ್‌ ಟನ್‌ ಗೋಧಿ ನೀಡಿದ್ದೇವೆ. 5 ಲಕ್ಷ ಡೋಸ್‌ ಕೊವ್ಯಾಕ್ಸಿನ್‌ ಲಸಿಕೆ ಒದಗಿಸಲಾಗಿದೆ. 60 ಮಿಲಿಯ ಪೊಲಿಯೋ ಡ್ರಾಪ್‌, 13 ಟನ್‌ ಅಗತ್ಯ ಔಷಧಗಳನ್ನು ನೀಡಿದ್ದೇವೆ’ ಎಂದು ದೊವಾಲ್‌ ವಿವರಿಸಿದ್ದಾರೆ.

ಭಾರತಕ್ಕೆ ಸ್ವಾಗತ:
ಇದೇ ವೇಳೆ, ಆಫ್ಘನ್‌ನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದಿದ್ದರೆ ಭಾರತ ಸರ್ಕಾರಕ್ಕೆ ಸ್ವಾಗತ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆಸುತ್ತಿದ್ದ ಕೆಲಸಗಳನ್ನು ಮುಂದುವರಿಸಬಹುದು. ಎರಡೂ ದೇಶಗಳ ನಡುವೆ ಕ್ರಿಕೆಟ್‌ ಬಾಂಧವ್ಯ ಸುಧಾರಿಸಲು ನೆರವು ನೀಡಬಹುದು ಎಂದು ತಾಲಿಬಾಲ್‌ ಸರ್ಕಾರದ ಪ್ರಮುಖ ಅನಾಸ್‌ ಹಕ್ಕಾನಿ ಹೇಳಿದ್ದಾನೆ. ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಸೂಕ್ತ ಭದ್ರತೆಯನ್ನೂ ಕಲ್ಪಿಸುತ್ತೇವೆ ಎಂದೂ ಹೇಳಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next