Advertisement

02.02.2020: 900 ವರ್ಷಗಳ ಅಚ್ಚರಿ : ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಓದಿದರೂ ಒಂದೇ ಅರ್ಥ

10:00 AM Feb 04, 2020 | Hari Prasad |

ಹೊಸದಿಲ್ಲಿ: 02-02-2020; ಈ ದಿನಾಂಕ ಅತ್ಯಂತ ಅಪರೂಪವಾದದ್ದು. ರವಿವಾರದ ಈ ದಿನಾಂಕ ಜಾಲತಾಣಗಳಲ್ಲೂ ಪ್ರಚಾರ ಪಡೆದಿದೆ. 900 ವರ್ಷಗಳಲ್ಲಿಯೇ ಮೊದಲ ಬಾರಿಗೆ ಇಂಥ ದಿನಾಂಕ ಬಂದಿದೆ. ಈ ರೀತಿಯ ಪದ ಪುಂಜಗಳನ್ನು ಇಂಗ್ಲಿಷ್‌ನಲ್ಲಿ ‘ಪ್ಯಾಲಿಂಡ್ರೋಮ್‌’ (Palindrome) ಎಂದು ಕರೆಯಲಾಗುತ್ತದೆ. ಶಬ್ದವನ್ನು ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಓದಿದರೂ ಒಂದೇ ಅರ್ಥ ಬರುವ ಪದಗಳಿಗೆ ಇಂಥ ಹೆಸರು ನೀಡಲಾಗಿದೆ ಎಂದು ಆಕ್ಸ್‌ಫ‌ರ್ಡ್‌ ಡಿಕ್ಷನರಿಯಲ್ಲಿ ಉಲ್ಲೇಖೀಸಲಾಗಿದೆ. ಇಂಗ್ರಿಷ್‌ ಭಾಷೆಯ ‘ಮ್ಯಾಡಮ್‌’ (Madam), ‘ಸಿವಿಕ್‌ (civic), ‘ಲೆವೆಲ್‌’ (level), ‘ಮಲಯಾಳಂ’ (malayalam) ಈ ರೀತಿಯ ಪದಪುಂಜಕ್ಕೆ ಉದಾಹರಣೆ.

Advertisement

ಈ ರೀತಿಯ ದಿನಾಂಕ ಪ್ರತಿ ಶತಮಾನಕ್ಕೆ ಒಂದು ಬಾರಿ ಘಟಿಸುತ್ತದೆ. 1111ನೇ ಇಸವಿಯಲ್ಲಿ ಇಂಥ ಅಚ್ಚರಿ ಉಂಟಾಗಿತ್ತು. ಆ ಸಂದರ್ಭದಲ್ಲಿ ನವೆಂಬರ್‌ 11ರಂದು 11-11-1111 ಎಂದು ಬರೆಯಲಾಗಿತ್ತು. ಇನ್ನು ಮುಂದೆ 2121ರ ಡಿ.12ರಂದು 12-12-2121 ಎಂದು ಬರೆಯಲಾಗುತ್ತದೆ. ಅದು ಇನ್ನೂ 101 ವರ್ಷಗಳು ಕಳೆದ ಬಳಿಕ.

ಪೋರ್ಟ್‌ಲ್ಯಾಂಡ್‌ ವಿವಿಯ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಆ್ಯಝಿನ್‌ ಇನಾನ್‌ ಮಾತನಾಡಿ ‘ಸಾಂದರ್ಭಿಕವಾಗಿ ಈ ವರ್ಷ ಇಂಥ ಸಂಖ್ಯೆ ಬಂದಿದೆ. ಈ ರವಿವಾರ ಮಾತ್ರ ಪ್ಯಾಲಿಂಡ್ರೋಮ್‌ ಅಲ್ಲ. 2020 ಹೆಚ್ಚುವರಿ ವರ್ಷವಾಗಿರುವುದರಿಂದ ಇನ್ನೂ 333 ದಿನಗಳು ಇವೆ’ ಎಂದಿದ್ದಾರೆ. ಒಟ್ಟಿನಲ್ಲಿ 20-20-2020ರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರ ಬಗ್ಗೆ ಹಲವು ಮೀಮ್‌ಗಳೂ ಸೃಷ್ಟಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next