ಬೆಂಗಳೂರು : ರಾಜ್ಯದಲ್ಲಿ 5 ವರ್ಷಗಳಲ್ಲಿ ಬರೋಬ್ಬರಿ 32,066 ಕಾಳ್ಗಿಚ್ಚು ಪ್ರಕರಣಗಳು ಸಂಭವಿಸಿವೆ. ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗುತ್ತಿರುವುದರಿಂದ ಕಂಗೆಟ್ಟಿರುವ ಸರಕಾರವು ತಂತ್ರಜ್ಞಾನದ ಮೊರೆ ಹೋಗಿದೆ.
ಅರಣ್ಯ ಬೆಂಕಿ, ಉಸ್ತುವಾರಿ ಮತ್ತು ವಿಶ್ಲೇಷಣೆ ಕೋಶ ರಚಿಸಿ ಕಾಳ್ಗಿಚ್ಚು ಪತ್ತೆ ಹಚ್ಚಲು ಉಪಗ್ರಹ ಚಿತ್ರ ಹಾಗೂ ಮಾಹಿತಿ ತಂತ್ರಜ್ಞಾನ ಬಳಸಲಾಗುತ್ತಿದೆ. ನೈಜ ಸಮಯದಲ್ಲಿ ಉಪಗ್ರಹದ ಮೂಲಕ ಸ್ವೀಕೃತವಾದ ಎಸ್‌ಎಂಎಸ್ ಸಂದೇಶವು ಆಯಾ ಕ್ಷೇತ್ರದ ಅರಣ್ಯ ಸಿಬಂದಿಗೆ ರವಾನೆಯಾಗಲಿದೆ. ಜತೆಗೆ ಸಾಫ್ಟ್ವೇರ್‌ನಲ್ಲೂ ದಾಖಲಾಗುತ್ತಿವೆ.
ಮಿತಿ ಮೀರುತ್ತಿರುವ ಕಾಳಿYಚ್ಚಿನ ಮುನ್ಸೂಚನೆ ತಿಳಿದುಕೊಳ್ಳಲು 3 ವರ್ಷಗಳ ಹಿಂದೆ ಕರ್ನಾಟಕದಲ್ಲೇ ಮೊದಲ ಬಾರಿಗೆ ಹೊಸ ಸಾಫ್ಟ್ವೇರ್ ರೂಪಿಸಲಾಗಿತ್ತು. ಈ ಸಾಫ್ಟ್ವೇರ್ ಮೂಲಕ ಈಗ ವಾರ್ಷಿಕವಾಗಿ ಸರಾಸರಿ 5 ಸಾವಿರ ಕಾಳ್ಗಿಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಚಿಂತಿಸಲಾಗಿದೆ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಪ್ರಭಾಷ್ ಚಂದ್ರ ರೇ “ಉದಯವಾಣಿ’ಗೆ ತಿಳಿಸಿದ್ದಾರೆ.
32,066 ಕಾಳ್ಗಿಚ್ಚು
5 ವರ್ಷಗಳಲ್ಲಿ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ 32,066 ಕಾಳಿYಚ್ಚು ಪ್ರಕರಣಗಳು ಸಂಭವಿಸಿ ಸಾವಿರಾರು ಎಕರೆ ನಾಶವಾಗಿದೆ. ತುಮಕೂರು, ರಾಮನಗರ, ಬೆಂ. ಗ್ರಾಮಾಂತರ, ಸಾಗರ, ಚಿಕ್ಕಬಳ್ಳಾಪುರ, ಮಂಡ್ಯ, ಭದ್ರಾವತಿ, ಶಿರಸಿ ಭಾಗದಲ್ಲಿ ಅತೀ ಹೆಚ್ಚು ಕಾಳ್ಗಿಚ್ಚು ಸಂಭವಿಸಿರುವುದು ಈ ನೂತನ ತಂತ್ರಜ್ಞಾನದಿಂದ ಬೆಳಕಿಗೆ ಬಂದಿದೆ.
Related Articles
ಟಿಂಬರ್ ಮಾಫಿಯಾ ರಾಜ್ಯದಲ್ಲಿ ಅವ್ಯಾಹತವಾಗಿದೆ. ದಂಧೆಕೋರರು ಮರ ಕಡಿದ ಜಾಗದ ಕುರುಹು ಸಿಗದಿರಲು ಇಡೀ ಕಾಡಿಗೆ ಬೆಂಕಿ ಹಚ್ಚುತ್ತಾರೆ. ಶೇ. 30ರಷ್ಟು ಕಾಳ್ಗಿಚ್ಚು ಪ್ರಕರಣಗಳಿಗೆ ಇದೇ ಪ್ರಮುಖ ಕಾರಣ. ಕಾಡು ಪ್ರಾಣಿಗಳ ಬೇಟೆಯಾಡಲು ಬರುವವರಿಂದಲೂ ಕಾಡಿಗೆ ಸಂಚಕಾರ ಬಂದ ನೂರಾರು ಉದಾಹರಣೆಗಳಿವೆ ಎಂದು ಅರಣ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಕಿಡಿ ತಾಗಿ ಬೆಂಕಿ
ನಿಸರ್ಗ ಸಹಜವಾಗಿ ಕಾಳ್ಗಿಚ್ಚು ಉಂಟಾಗುವ ಪ್ರಮಾಣ ಶೇ. 5ರಷ್ಟು ಮಾತ್ರ ಇದೆ. ಕಾಡಿನಲ್ಲಿ ಓಡಾಡುವ ಸ್ಥಳೀಯರು ಹಾಗೂ ಪ್ರವಾಸಿಗರು ಸಿಗರೇಟ್ ಸೇದಿ ಎಸೆಯುವುದು, ಕಾಡಿನೊಳಗೆ ಅಕ್ರಮವಾಗಿ ಪ್ರವೇಶಿಸಿ ಅಲ್ಲೇ ಅಡುಗೆ ಮಾಡಿ ಬೆಂಕಿ ನಂದಿಸದೆ ಹೊಗುವುದರಿಂದಲೂ ಸಾಕಷ್ಟು ಬಾರಿ ಬೆಂಕಿ ಅವಘಡ ಸಂಭವಿಸಿದೆ.
ಕಾಳ್ಗಿಚ್ಚನ್ನು ಪತ್ತೆ ಹಚ್ಚಲು ರೂಪಿಸಿರುವ ನೂತನ ತಂತ್ರಜ್ಞಾನವನ್ನು ಬೇರೆ ರಾಜ್ಯಗಳೂ ಅಳವಡಿಸಲು ಉತ್ಸಾಹ ತೋರಿದೆ. ದೊಡ್ಡ ಪ್ರಮಾಣದ ಕಾಳ್ಗಿಚ್ಚನ್ನು ತಪ್ಪಿಸಲು ಇದು ಸಹಕಾರಿ. ಕಾಡಿನಲ್ಲಿ ಬೆಂಕಿ ಕಂಡು ಬಂದರೆ ಸಾರ್ವಜನಿಕರು ಅರಣ್ಯ ಇಲಾಖೆ ಸಿಬಂದಿಗೆ ಮಾಹಿತಿ ನೀಡಿ.
ಸುಭಾಷ್ ಕೆ. ಮಾಲೇVಡೆ, ಐಎಫ್ಎಸ್ ಅಧಿಕಾರಿ.
5 ವರ್ಷಗಳಲ್ಲಿ ಕಾಳ್ಗಿಚ್ಚು
ವರ್ಷ- ಪ್ರಕರಣ
-2017 -5,621
-2018 -5557
-2019 -5,235
-2020 -5,370
-2021 -5,644
-2022 -4,238
– ಅವಿನಾಶ್ ಮೂಡಂಬಿಕಾನ