ಶಹಾಪುರ: ನಗರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಎಬಿವಿಪಿ ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ರವಿವಾರ ರಾತ್ರಿ ಮೌನ ಭೋಜನ ಕೂಟ ಆಯೋಜಿಸಲಾಗಿತ್ತು. ವಿಶೇಷ ಉಪನ್ಯಾಸ ನಂತರ ಆರಬೋಳ ಕಲ್ಯಾಣ ಮಂಟಪದ ಭೋಜನ ಸಭಾಂಗಣದಲ್ಲಿ ಪರಿಷತ್ ಸಹೋದರಿಯರು ಪ್ರತಿ ಊಟದ ತಟ್ಟೆ ಇಡುವ ಸ್ಥಳದಲ್ಲಿ ರಂಗೋಲಿ ಬಿಡಿಸಿ ಅದರೊಳಗಡೆ ಊಟದ ತಟ್ಟೆ ಮತ್ತು ಪಕ್ಕದಲ್ಲಿ ದೀಪ ಹಚ್ಚುವ ಮೂಲಕ ಮೌನ ಬೆಂಕಿನಲ್ಲಿ ಮೌನದ ಭೋಜನ ಸವಿಯುವ ವ್ಯವಸ್ಥೆ ಮಾಡಿದ್ದರು. ಇದರಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ 200ಕ್ಕೂ ಹೆಚ್ಚು ಅತಿಥಿಗಳು ಮತ್ತು 900ಕ್ಕೂ ಹೆಚ್ಚು ವಿವಿಧ ವಿಭಾಗದಿಂದ ಅಭ್ಯಾಸ ವರ್ಗಕ್ಕೆ ಆಗಮಿಸಿದ ವಿದ್ಯಾರ್ಥಿಗಳು ವಿಶಿಷ್ಟ ವಾತಾವರಣದಲ್ಲಿ ಭೋಜನ ಸವಿಯುವ ಮೂಲಕ ಪರಸ್ಪರರು ಸಂತಸ ವ್ಯಕ್ತಪಡಿಸಿದರು. ಊಡದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸಹೋದರ ಸಹೋದರಿಯರಿಗೆ ಅತಿಥಿಗಳಾಗಿ ಆಗಮಿಸಿದ ಪೋಷಕರು ಪಾಲಕರು ಮತ್ತು
ಗಣ್ಯರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ನಗರದ ಗಣ್ಯರು. ಮಹಿಳೆಯರು ಮತ್ತು ಶಿಕ್ಷಕ, ಶಿಕ್ಷಕಿಯರು ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು, ಪತ್ರಕರ್ತರು, ಪ್ರಮುಖರು ಭಾಗವಹಿಸಿದ್ದರು. ಪರಿಷತ್ ಮುಖಂಡರಾದ ಅರವಿಂದ ಉಪ್ಪಿನ್, ಅಮರೇಶ ಐಡಿ, ಮಲ್ಲಿಕಾರ್ಜುನ ಜಾಕಾ, ಅವಿನಾಶ ಗುತ್ತೇದಾರ, ಸಚಿನ್ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.