Advertisement

ವಾಯವ್ಯ ಸಾರಿಗೆಯಿಂದ ವಿಶೇಷ ಪ್ಯಾಕೇಜ್‌ ಟೂರ್

09:25 PM Jul 21, 2021 | Team Udayavani |

ಹುಬ್ಬಳ್ಳಿ: ಮಳೆಗಾಲ ಸಂದರ್ಭದಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿವಿಧ ವಿಭಾಗಗಳಿಂದ ಶನಿವಾರ, ರವಿವಾರ ಹಾಗೂ ರಜೆ ದಿನಗಳಲ್ಲಿ ವಿಶೇಷ ದರದ ಪ್ಯಾಕೇಜ್‌ ಟೂರ್‌ ಬಸ್‌ಗಳ ಸೌಲಭ್ಯ ಕಲ್ಪಿಸಿದೆ.

Advertisement

ಹುಬ್ಬಳ್ಳಿ ವಿಭಾಗ: ಇಲ್ಲಿನ ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣದಿಂದ ಬೆಳಿಗ್ಗೆ 7:30 ಕ್ಕೆ ಬಸ್‌ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗೆ ಮೊ: 7760991682, 7760991662 ಗೆ ಸಂಪರ್ಕಿಸಬಹುದು.

ಧಾರವಾಡ ವಿಭಾಗ: ಧಾರವಾಡ ಹೊಸ ಬಸ್‌ ನಿಲ್ದಾಣದಿಂದ ಬೆಳಿಗ್ಗೆ 7.30 ಗಂಟೆಗೆ ಹೊರಟು ದಾಂಡೇಲಿ- ಮೊಸಳೆ ಪಾರ್ಕ್‌-ಮೌಳಂಗಿ ಫಾಲ್ಸ್‌-ಕೊಳಗಿ ನೇಚರ್‌ ಕ್ಯಾಂಪ್‌-ಉಳವಿ ಚನ್ನಬಸವೇಶ್ವರ ದೇವಸ್ಥಾನ.

ದಾಂಡೇಲಿ ಬಸ್‌ ನಿಲ್ದಾಣದಿಂದ ಬೆಳಿಗ್ಗೆ: 8:00 ಕೊಳಗಿ ನೇಚರ್‌ ಕ್ಯಾಂಪ್‌ -ಸಿಂಥೇರಿ ರಾಕ್ಸ್‌-ಉಳವಿ ಚನ್ನಬಸವೇಶ್ವರ ದೇವಸ್ಥಾನ-ಸೂಪಾ ಡ್ಯಾಮ್‌-ಮೌಳಂಗಿ ಫಾಲ್ಸ್‌ ವೀಕ್ಷಿಸಿ ಹಿಂತಿರುಗಲಿದೆ. ಮೊ: 7760982552, 7760991679, 7760991731, ಸಂಪರ್ಕಿಸಬಹುದಾಗಿದೆ.

ಉತ್ತರ ಕನ್ನಡ ವಿಭಾಗ: ಯಲ್ಲಾಪೂರ-ಜೋಗಫಾಲ್ಸ್‌ 8:00 ಗಂಟೆಗೆ ಬಿಟ್ಟು ಶಿರಸಿ ಮಾರಿಕಾಂಬಾ ದರ್ಶನ, ನಿಪ್ಪಲಿ ಫಾಲ್ಸ್‌, ಜೋಗ್‌ಫಾಲ್ಸ್‌. ಕಾರವಾರ-ಜೋಗಫಾಲ್ಸ್‌ ಬೆಳಿಗ್ಗೆ: 8: 00 ಗಂಟೆಗೆ ಹೊರಟು ಮಿರ್ಜಾನಕೋಟೆ, ಬಂಗಾರಮಕ್ಕಿ ಮಾರ್ಗವಾಗಿ ಜೋಗಫಾಲ್ಸ್‌.

Advertisement

ಕಾರವಾರ- ಮುಡೇìಶ್ವರ ಬೆಳಿಗ್ಗೆ: 8-00 ಗಂಟೆಗೆ ಬಿಟ್ಟು ಮಿರ್ಜಾನಕೋಟೆ, ಇಕೊ ಬೀಚ್‌ ಹಾಗೂ ಮುಡೇìಶ್ವರ. ಮೊ: 7760991702, 7760991713 ಸಂಪರ್ಕಿಸಬಹುದು.

ಹಾವೇರಿ ವಿಭಾಗ: ಹಾವೇರಿಯಿಂದ ಬೆಳಿಗ್ಗೆ 7:30ಕ್ಕೆ ಗಂಟೆಗೆ ಹಾಗೂ ರಾಣೇಬೆನ್ನೂರಿನಿಂದ 8: 00 ಗಂಟೆಗೆ. ಜೋಗಫಾಲ್ಸ್‌ಗೆ ಹೊರಡಲಿವೆ. ಮೊ:7259954181, 7259954305 ಗೆ ಸಂಪರ್ಕಿಸಬಹುದಾಗಿದೆ.

ಗದಗ ವಿಭಾಗದಿಂದ: ಗದಗ- ಕಪ್ಪತಗುಡ್ಡ ಮತ್ತು ಬೆಟಗೇರಿಯಿಂದ ಪ್ರಾಣಿ ಸಂಗ್ರಹಾಲಯ, ಸಾಲುಮರದ ತಿಮ್ಮಕ್ಕ ಉದ್ಯಾನವನಗಳಿಗೆ ಸಾರ್ವಜನಿಕರ ಬೇಡಿಕೆ ಗಳಿಗನುಗುಣವಾಗಿ ಬಸ್‌ ಗಳನ್ನು ಕಾರ್ಯಾಚರಣೆ ಗೊಳಿಸ ಲಾಗುವುದು. ಮೊ: 7760991802 ಗೆ ಸಂಪರ್ಕಿಸಬಹುದಾಗಿದೆ.

ಬಾಗಲಕೋಟ ವಿಭಾಗ: ಬಾಗಲಕೋಟ ನವನಗರ ಬಸ್‌ ನಿಲ್ದಾಣದಿಂದ ಬದಾಮಿ-ಬನಶಂಕರಿ- ಶಿವಯೋಗ ಮಂದಿರ-ಮಹಾಕೂಟ (ದಕ್ಷಿಣ ಕಾಶಿ)-ಪಟ್ಟದಕಲ್ಲು- ಐಹೊಳೆ-ಕೂಡಲಸಂಗಮ ಮತ್ತು ಆಲಮಟ್ಟಿಗೆ ಬೆಳಿಗ್ಗೆ 8:30 ರಿಂದ ಪ್ರತಿದಿನ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಹೆಚ್ಚಿನ ವಿವರಗಳಿಗೆ ಮೊ:7760991775, 7760991783, 7760991752 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next