Advertisement

ರಾಮ ನಾಮ ಬ್ಯಾಂಕ್‌ ‘ಬೋನಸ್‌’ಘೋಷಣೆ

09:32 AM Nov 19, 2019 | Team Udayavani |

ಲಕ್ನೋ: ಅಯೋಧ್ಯೆಯು ರಾಮನದ್ದೇ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಬೆನ್ನಲ್ಲೇ ಲಕ್ನೋದ ರಾಮ್‌ ನಾಮ್‌ ಬ್ಯಾಂಕ್‌ ತನ್ನ ಖಾತೆದಾರರಿಗೆ ಸಿಹಿಸುದ್ದಿ ನೀಡಿದೆ. ತೀರ್ಪು ಹಿನ್ನೆಲೆಯಲ್ಲಿ ಖಾತೆದಾರರಿಗೆ ವಿಶೇಷ ಬೋನಸ್‌ ನೀಡುವುದಾಗಿ ಘೋಷಿಸಿದೆ.
ಈ ಬ್ಯಾಂಕ್‌ನಲ್ಲಿ ಹಣದ ವ್ಯವಹಾರ ನಡೆಯುವುದಿಲ್ಲ. ಇಲ್ಲಿ ಏನಿದ್ದರೂ ರಾಮ ನಾಮವಷ್ಟೇ.

Advertisement

ಶ್ರೀರಾಮನ ಹೆಸರನ್ನು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಬರೆದು, ಆ ಪುಸ್ತಿಕೆಗಳನ್ನು ಈ ಬ್ಯಾಂಕ್‌ನಲ್ಲಿ ಠೇವಣಿ ರೂಪದಲ್ಲಿ ಇಡಲಾಗುತ್ತದೆ. ಅದರಂತೆ, ನ.9 ಮತ್ತು 10ರ ನಡುವಿನ ರಾತ್ರಿ ಯಾರೆಲ್ಲ ಕನಿಷ್ಠ 1.25 ಲಕ್ಷ ಬಾರಿ ರಾಮನ ಹೆಸರು ಬರೆದಿದ್ದಾರೋ, ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಬ್ಯಾಂಕ್‌ನ ಸರ್ಟಿಫಿಕೇಟ್‌, ಶಾಲು ಮತ್ತು ಶ್ರೀಫ‌ಲವನ್ನು ನೀಡಿ ಸನ್ಮಾನಿಸಲಾಗುತ್ತದೆ. ಜತೆಗೆ, ಅವರು ಬರೆದಿರುವ ರಾಮನಾಮವನ್ನು ದುಪ್ಪಟ್ಟು ಎಂದು ಪರಿಗಣಿಸಲಾಗುತ್ತದೆ.

ಅಂದರೆ, 1 ಲಕ್ಷ ಬಾರಿ ಬರೆದಿದ್ದರೆ, ಅದನ್ನು 2 ಲಕ್ಷ ಎಂದು ಪರಿಗಣಿಸಲಾಗುತ್ತದೆ ಎಂದು ಬ್ಯಾಂಕ್‌ ಹೇಳಿದೆ. ಈ ನಡುವೆ, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ನಾವು ಯಾರಿಂದಲೂ ಹಣ ಸಂಗ್ರಹಿಸುತ್ತಿಲ್ಲ. ನಮ್ಮ ಹೆಸರು ಹೇಳಿಕೊಂಡು ಹಣ ಕೇಳಲು ಬಂದರೆ, ಕೊಟ್ಟು ಬಿಡಬೇಡಿ ಎಂದು ಜನರಿಗೆ ವಿಹಿಂಪ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next