Advertisement
ನೀವು ಚಿತ್ರರಂಗಕ್ಕೆ ಪ್ರವೇಶ ಪಡೆಯುವಾಗ ಆಗಿನ ಸ್ಥಿತಿ ಹೇಗಿತ್ತು..?
Related Articles
Advertisement
ನೀವು ಮೆಲೋಡಿ ಹಾಗೂ ಟಪಾಂಗುಚ್ಚಿ, ವಿಷಾದದ ಹಾಡುಗಳಿಗೆ ಫೇಮಸ್. ನೀವು ಎಲ್ಲಾ ಥರದ ಹಾಡುಗಳನ್ನು ಬರೆಯುತ್ತೀರಿ. ಹೇಗೆ ಸಾಧ್ಯ..?
ಓದು ಮತ್ತು ತಿಳುವಳಿಕೆಯಿಂದ ಇದು ಸಾಧ್ಯ. ಹಾಡು, ಬರೆದವನಿಗಷ್ಟೇ ಇಷ್ಟವಾದರೆ ಸಾಲದು ಅದು ಕೇಳುಗನಿಗೂ ಹಿತವಾಗಬೇಕು, ಇಷ್ಟವಾಗಬೇಕು. ಕೇಳುಗನನ್ನು ಕೂಡ ಗಮನದಲ್ಲಿಟ್ಟುಕೊಂಡು ಕವಿಯಾದವನು ಬರೆಯಬೇಕಾಗುತ್ತದೆ. ಕೆಲವೊಂದನ್ನು ಕೇಳುವವರು ಒಪ್ಪುತ್ತಾರೆ. ಕೆಲವೊಂದನ್ನು ಒಪ್ಪುವುದಿಲ್ಲ. ನಾವು ಬರೆಯುವಾಗ ಎಲ್ಲಾ ಹಾಡುಗಳನ್ನು ಹಿಟ್ ಆಗಲೇಬೇಕು ಎಂದು ಬರೆಯಬೇಕು. ಆಗ ಮಾತ್ರ ಹಾಡು ಗೆಲ್ಲುವುದಕ್ಕೆ ಸಾಧ್ಯ.
ಈಗಿನ ಹಾಡುಗಳಲ್ಲಿ ಸಾಹಿತ್ಯಕ್ಕಿಂತ ಸೌಂಡ್ ಜಾಸ್ತಿಯಾಗಿರುತ್ತದೆ ಮತ್ತು ವೆಸ್ಟರ್ನ್ ಟಚ್ ಎಲ್ಲಾ ಥರದ ಹಾಡುಗಳಲ್ಲಿ ಸೇರಿಸಿಕೊಳ್ಳುತ್ತಿರುವ ಬೆಳವಣಿಗೆಯ ಬಗ್ಗೆ ನಿಮ್ಮ ಅಭಿಪ್ರಾಯ..?
ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಹಾಡುಗಳಲ್ಲಿ ಹೆಚ್ಚು ಶಕ್ತಿ ಇದ್ದರೆ ಅದು ಉಳಿಯುತ್ತದೆ. ಹಾಗಿದ್ದಾಗ ಮಾತ್ರ ಆ ಹಾಡು ಎಷ್ಟೇ ವರ್ಷದ ಹಿಂದಿನ ಹಾಡಾದರೂ ಕೂಡ ಎಲ್ಲರ ಬಾಯಲ್ಲೂ ಅನುರಣಿಸುತ್ತಲೇ ಇರುತ್ತದೆ. ಸಾಹಿತ್ಯದಲ್ಲಿ ಗಟ್ಟಿತನವಿಲ್ಲದ ಹಾಡುಗಳು ಬದುಕುವುದು ಕೇವಲ ನಾಲ್ಕು ಮತ್ತೊಂದು ದಿನ ಮಾತ್ರ. ಕಾಲಾಂತರದ ಬೆಳವಣಿಗಳು ಕೆಲವೊಮ್ಮೆ ಸಮಾಧಾನಕರವಲ್ಲವಾಗಿದ್ದರೂ ಕೂಡ ಒಪ್ಪಿಕೊಳ್ಳಬೇಕಾದ ಸ್ಥಿತಿ ಇದೆ.
ಕನ್ನಡದ ಹಾಡುಗಳ ನಡುವೆ ಪರಭಾಷೆಗಳ ನುಸುಳುವಿಕೆ ಸರಿಯೇ..?
ಇದಕ್ಕೆ ಕೆಲವರ ಭಿನ್ನಾಭಿಪ್ರಾಯಗಳಿವೆ. ದೊಡ್ಡ ತಪ್ಪೇನಲ್ಲ. ನಿತ್ಯ ನಾವಾಡುವ ಮಾತುಗಳಲ್ಲಿ ಎಷ್ಟೋ ಶಬ್ದಗಳು ಪರಭಾಷೆಯಿಂದ ಬಂದಿರುವವುಗಳಾಗಿರುತ್ತವೆ. ಕಾಲಕ್ಕನುಸಾರವಾಗಿ ಒಮ್ಮೊಮ್ಮೆ ಬಳಸಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಕವಿಯಾದವನಿಗೆ ವಿಷಯ ತಲುಪಿಸುವುದು ಮುಖ್ಯವಾಗಿರುತ್ತದೆ. ಚಿತ್ರ ಸಾಹಿತ್ಯಗಳಿಗೆ ಎಲ್ಲಾ ವರ್ಗದ ಜನರಿಗೆ ತಲುಪಬೇಕಾಗಿರುವ ಸವಾಲುಗಳು ಇರುವುದರಿಂದ ಈ ಪರಭಾಷೆಗಳ ಬಳಕೆ ಒಮ್ಮೊಮ್ಮೆ ಬೇಕಾಗುತ್ತದೆ. ಈ ವಿಚಾರಕ್ಕೆ ತುಂಬಾ ತರ್ಕಗಳಿವೆ. ತುಂಬಾ ವಿಮರ್ಶೆ ಮಾಡುವ ಅಗತ್ಯವಿರುವ ವಿಚಾರ ಅಲ್ಲವಿದು ಅನ್ನಿಸುತ್ತದೆ.
ಗೀತೆ ರಚನಾಕಾರ ಹಾಗೂ ಸಂಗೀತ ಸಂಯೋಜಕರ ನಡುವೆ ಸಂಬಂಧ ಹೇಗಿರಬೇಕು..?
ಗೀತೆ ರಚನೆಕಾರ ಹಾಗೂ ಸಂಗೀತ ಸಂಯೊಜಕ ಗಂಡ ಹೆಂಡತಿ ಇದ್ದ ಹಾಗೆ. ಒಬ್ಬರಿಗೊಬ್ಬರ ಸಹಕಾರದಿಂದ ಒಂದು ಹಾಡು ಗೆಲ್ಲುವುದಕ್ಕೆ ಸಾಧ್ಯ. ಈ ಇಬ್ಬರ ನಡುವಿನ ಕೊಂಡಿ ಕಳಚಿದರೇ ಹಾಡು ಹಿಟ್ ಆಗುವುದಕ್ಕೆ ಸಾಧ್ಯವಿಲ್ಲ. ಗೀತರಚನೆಕಾರ ಎಷ್ಟು ಮುಖ್ಯನೋ, ಸಂಗಿತ ಸಂಯೋಜಕನೂ ಅಷ್ಟೇ ಮುಖ್ಯ. ಒಂದು ಉತ್ತಮವಾದ ಹಾಡು ರೂಪ ಪಡೆಯಬೇಕಾದರೇ ಅಲ್ಲಿ ಈ ಇಬ್ಬರ ಸಂಬಂಧವೂ ಉತ್ತಮವಾಗಿರಬೇಕಾಗುತ್ತದೆ.
ಚಿತ್ರ ಸಾಹಿತ್ಯದಲ್ಲಿ ಗದ್ಯರೂಪಿ ಪದ್ಯಗಳು ಈಗೀಗ ಹೆಚ್ಚಾಗಿ ಬರುತ್ತಿವೆ ಅವುಗಳ ಬಗ್ಗೆ ಏನಂತೀರಿ..?
ಪ್ರಾಸ ಇದ್ದರೆ ಸಾಕು ಎನ್ನುವ ಒಂದು ವರ್ಗ, ಪ್ರತಿಸಾಲುಗಳಿಗೂ ಸೇತು ಬೇಕು ಎನ್ನುವ ವಿಚಾರ ಗೊತ್ತೇ ಇಲ್ಲದ ವರ್ಗ ನಮ್ಮಲ್ಲಿದೆ. ಹಾಡುಗಳಿಗೆ ಇರಬೇಕಾದ ಮಿನಿಮಮ್ ಕ್ವಾಲಿಟೀಸ್ ಏನಿದೆ ಎನ್ನುವ ವಿಚಾರ ಗೊತ್ತಿಲ್ಲದವರೂ ಹಾಡುಗಳನ್ನು ಬರೆದಾಗ ಇಂತಹುಗಲೆಲ್ಲಾ ಹುಟ್ಟಿಕೊಳ್ಳುತ್ತವೆ.
ಈ ಟೀ ಟಾಕ್ ಟೈಮ್ ನಲ್ಲಿ ಉದಯವಾಣಿ ಬಗ್ಗೆ ಏನಾದರೂ ಬರೆಯಬಹುದಾ..?
ಹ್ಹೋ ಹ್ಹೋ… ಬಂದ್ರು ನೋಡಿ ಟ್ರ್ಯಾಕ್ ಗೆ.. ಖಂಡಿತ ಬರೆಯೋಣ… ಅದಕ್ಕೇನಂತೆ.. ಉದಯವಾಣಿ ಬಗ್ಗೆ ಅಪಾರ ಗೌರವವಿದೆ. ನನ್ನ ಬಗ್ಗೆ ಹಲವು ಲೇಖನಗಳು ಉದಯವಾಣಿಯಲ್ಲಿ ಬಂದಿವೆ. ನಾನೇ ಬರೆದ ಹಾಡುಗಳು ಬಂದಿವೆ. ವಾಚಕರ ವಾಣಿಗೆ ಕಳುಹಿಸಿದ ಅಭಿಪ್ರಾಯಗಳು ಕೂಡ ಪ್ರಕಟಗೊಂಡಿವೆ.. ಅಂತ ಹೇಳುತ್ತಾ… ಉದಯವಾಣಿಯ ಬಗ್ಗೆ ಕೇವಲ ಐದು ನಿಮಿಷಗಳೊಳಗಾಗಿ ಬರೆದ ಕಾವ್ಯ ಇಲ್ಲಿದೆ.