Advertisement

ಅಂಗವಿಕಲ ವಿದ್ಯಾರ್ಥಿಗಳಿಗೆ ವಿಶೇಷ ಪ್ರಾಧಾನ್ಯ ನೀಡಿ: ಬಸವರಾಜು 

01:00 AM Feb 26, 2019 | Team Udayavani |

ಮಡಿಕೇರಿ :ಸರಕಾರದ ವಿಶೇಷ ಯೋಜನೆಯಡಿ ಜಿಲ್ಲೆಯ ವಿಕಲಚೇತನ ವಿದ್ಯಾರ್ಥಿಗಳಿಗೆ ವಿಶೇಷ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ಯೋಜನೆ ಹಾಗೂ ಅನುದಾನ ನೀಡಿದೆ. ವಿಕಲಚೇತನರ ಕ್ಷೇಮಾಭಿವೃದ್ಧಿಗೆ ಅಧಿಕಾರಿಗಳು ಮತ್ತು ಪೋಷಕರು ವಿಶೇಷ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಅಗತ್ಯ ಎಂದು ಅಂಗವಿಕಲರ ರಾಜ್ಯ ಆಯುಕ್ತರ ವಿ.ಎಸ್‌.ಬಸವರಾಜ್‌ ಅವರು ಸೂಚನೆ ನೀಡಿದ್ದಾರೆ.   

Advertisement

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಅಂಗವಿಕಲರ ‌ ಕ್ಷೇಮಾ ಭಿವೃದ್ಧಿ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಂಗವಿಕಲ‌ರಿಗೆ ವಿಶೇಷ ಪ್ರಾಧಾನ್ಯ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರತಿಯೊಂದು ಇಲಾಖೆಗಳಿಗೂ ಕೂಡ ಅನುದಾನ ಬಿಡುಗಡೆ ಮಾಡಿದೆ. ಅನುದಾನವು ಫ‌ಲಾನುಭವಿಗಳಿಗೆ ನೇರವಾಗಿ ವಿತರಣೆಯಾಗಬೇಕು. ವಿವಿಧ ಇಲಾಖೆಯ ಅಧಿಕಾರಿಗಳು ಅಂಗವಿಕಲರ ಸಂಭಂಧಪಟ್ಟ ಸಮಸ್ಯೆಗಳಿಗೆ ಅಧಿಕಾರಿಯಾಗಿ ಮಾತ್ರವಲ್ಲದೆ ಮಾನ ವೀಯ ದೃಷ್ಟಿಯಿಂದ ಸ್ಪಂದಿಸುವ ಮೂಲಕ ನೆರವಾಗಬೇಕು ಎಂದು ಅವರು ತಿಳಿಸಿದರು.      

ಬ್ಯಾಂಕ್‌ಗಳಲ್ಲಿ ಕೆಲವೊಂದು ಯೋಜನೆ ಗಳಡಿ ವಿಕಲಚೇತನರು ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ಯಾವುದೇ ಸೂಕ್ತ ಕಾರಣ ನೀಡದೇ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ವಿಕಲಚೇತನರು ಸಭೆಯ ಗಮನಕ್ಕೆ ತಂದರು.  ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಾಲ ನೀಡಬೇಕು ಎಂದು ಹೇಳಲಾಗುವುದಿಲ್ಲ. ಸೂಕ್ತ ದಾಖಲಾತಿಗಳಿದ್ದರೇ ಅಂತಹವರಿಗೆ ಸಾಲ ನೀಡಿ ಹಾಗೂ ಯಾವ ಕಾರಣಕ್ಕಾಗಿ ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂಬುದರ ಬಗ್ಗೆ ಬ್ಯಾಂಕ್‌ಗಳು ಮಾಹಿತಿ ನೀಡಬೇಕು ಎಂದು ಲೀಡ್‌ ಬಾಂಕ್‌ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಅಂಗವಿಕಲ‌ರಿಗೆ ನೀಡಲಾಗುವ ಸೌಲಭ್ಯಗಳಿಂದ ವಂಚಿತರಾಗದಂತೆ ಎಲ್ಲಾ ಅಧಿಕಾರಿಗಳ ಕರ್ತವ್ಯವಾಗಿದ್ದು. ಅಧಿಕಾರಿಗಳು ಯಾವುದೇ ಕೆಲಸಗಳನ್ನು ಮಾಡಬೇಕಾದರೆ ಗುರಿ ಇಟ್ಟುಕೊಂಡು ಕೆಲಸ ಮಾಡಿದಾಗ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುವುದಿಲ್ಲ ಎಂದು ಸಲಹೆ ಮಾಡಿದರು.ಅಂಗವಿಕಲರಿಗೆ ನೀಡಲಾಗುವ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವೈದ್ಯರು ವಿನಾಕಾರಣ ವಿಳಂಬ ದೋರಣೆ ಮಾಡಿದರೆ ಅಂತಹ ವೈದ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.    ಜಿ.ಪಂ.ಸಿಇಒ ಕೆ.ಲಕ್ಷಿ¾ಪ್ರಿಯಾ ಅವರು ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಮಾಹಿತಿ ನಿಡಬೇಕು. ಎಂದು ಹೇಳಿದರು.  ಜಿಲ್ಲಾಧಿಕಾರಿ ಅನೀಸ್‌ ಕನ್ಮಣಿ ಜಾಯ್‌, ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಡಾ.| ಸುಮನ್‌ ಡಿ.ಪನ್ನೇಕರ್‌ ಮೊದಲಾದರು ಉಪಸ್ಥಿತರಿದ್ದರು.

ವಿಕಲ ಸ್ನೇಹಿ ಶೌಚಾಲಯ 
ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ಪಡೆದ ಬಸವರಾಜ್‌ ಅವರು ವಿಕಲಚೇತನರ ಕ್ಷೇಮಾಭಿವೃದ್ಧಿಗೆ ವಿಶೇಷವಾದ “ವಿಕಲ ಸ್ನೇಹಿ ಶೌಚಾಲಯ ನಿರ್ಮಾಣ”, ವಿಶೇಷವಾದ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಶಿಕ್ಷಣ ಇಲಾಖೆಯ ಮೂಲಕ ಶಾಲೆಯಿಂದ ಹೊರಗುಳಿದ 18 ವರ್ಷದ ಒಳಗಿನ ಮಕ್ಕಳ ಬಗ್ಗೆ ಕಾಳಜಿ ವಹಿಸಿ “”ಮರಳಿ ಶಾಲೆಗೆ” ಶಿಬಿರ ಏರ್ಪಡಿಸುವಂತಾಗಬೇಕು ಎಂದು ಹೇಳಿದ‌ರು.     

Advertisement

ವಿಕಲಚೇತನರಿಗೆ ಇರುವ ಸೌಲಭ್ಯಗಳ ಬಗ್ಗೆ ಗ್ರಾಮ ಪಂಚಾಯತ್‌ ಮಟ್ಟದಲ್ಲಿ  ಪಿಡಿಒ ಸೌಲಭ್ಯಗಳನ್ನು ಒದಗಿಸುವಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲು ಇಒ ಗಳಿಗೆ ಬಸವರಾಜ್‌ ಅವರು ಈ ಸಂದರ್ಭದಲ್ಲಿ ನಿರ್ದೇಶ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next