Advertisement

ನವರಾತ್ರಿ ಪ್ರಯುಕ್ತ ಡೊಂಬಿವಲಿಯಲ್ಲಿ  ಸೀರೆಗಳ ವಿಶೇಷ ಪ್ರದರ್ಶನ, ಮಾರಾಟ

06:38 PM Oct 14, 2021 | Team Udayavani |

ಡೊಂಬಿವಲಿ: ಮೀರಾರೋಡ್‌ ಪೂರ್ವದ ಶ್ರೀ ಕಟೀಲೇಶ್ವರಿ ಸಾರೀಸ್‌ನವರಿಂದ ನವರಾತ್ರಿ ಪ್ರಯುಕ್ತ ಡೊಂಬಿವಲಿಯಲ್ಲಿ  ಸೀರೆಗಳ ವಿಶೇಷ ಪ್ರದರ್ಶನ ಮತ್ತು ಮಾರಾಟವನ್ನು ಅ. 10ರಂದು ಡೊಂಬಿವಲಿಯ ಠಾಕೂರ್‌ ಹಾಲ್‌ನಲ್ಲಿ ಆಯೊಜಿಸಲಾಗಿತ್ತು.

Advertisement

ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಅನಿತಾ ಬಾಲಕೃಷ್ಣ ಭಂಡಾರಿ ಅವರು ದೀಪ ಪ್ರಜ್ವಲಿಸಿ ಸೀರೆಗಳ ವಿಶೇಷ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿದರು. ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪಾಧ್ಯಕ್ಷ ಎಕ್ಕಾರು ಆನಂದ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್‌ ಡೊಂಬಿವಲಿ ಸ್ಥಳೀಯ ಕಚೇರಿಯ ಸಮಾಜ ಕಲ್ಯಾಣ ವಿಭಾಗದ ಕಾರ್ಯಾಧ್ಯಕ್ಷ ರವಿ ಸನಿಲ್‌, ಜಗಜ್ಯೋತಿ ಕಲಾವೃಂದ ಡೊಂಬಿವಲಿ ಮಾಜಿ ಅಧ್ಯಕ್ಷ ವಸಂತ ಸುವರ್ಣ, ಸುಮಾ ಕರುಣಾಕರ ಶೆಟ್ಟಿ, ದಿವ್ಯಾ ಸುಧಾಕರ ಶೆಟ್ಟಿ, ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯ ಜಯರಾಮ್‌ ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕೋಶಾಧಿಕಾರಿ ಲತಾ ಆನಂದ ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ  ಮತ್ತು ಲೀಲಾ ಶೆಟ್ಟಿ, ಸುಜಯಾ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ಥಳೀಯ ತುಳು- ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಶ್ರೀ ಕಟೀಲೇಶ್ವರಿ ಸಾರೀಸ್‌ ಸಂಸ್ಥೆಯ ಪಾಲುದಾರರಾದ ಹಂಸರಾಜ್‌ ಶೆಟ್ಟಿ  ಮತ್ತು ಸುರೇಶ್‌ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಸುಮಾರು 7 ವರ್ಷಗಳ ಹಿಂದೆ ಮೀರಾರೋಡ್‌ ರೈಲು ನಿಲ್ದಾಣ ಸಮೀಪದ ಶಾಂತಿ ಶಾಪಿಂಗ್‌ ಸೆಂಟರ್‌ನಲ್ಲಿ  ಸ್ಥಾಪನೆಗೊಂಡ ಶ್ರೀ ಕಟೀಲೇಶ್ವರಿ ಸಾರೀಸ್‌ ಸಂಸ್ಥೆಯು ಊರ-ಪರವೂರ ಬಾಂಧವರ ಉತ್ತಮ ಮಟ್ಟದ ಸೀರೆಗಳ ಮಾರಾಟ ಮಳಿಗೆ ಎಂದೇ ಪ್ರಶಂಸೆಗೆ ಪಾತ್ರವಾಗಿದೆ. ತನ್ನ ಸೇವಾ ತತ್ಪರತೆಯಲ್ಲಿ ಉತ್ಪಾದನ ಘಟಕಗಳಿಂದಲೇ ಸೀರೆಗಳನ್ನು ತಂದು ಗ್ರಾಹಕರ ಅನುಕೂಲತೆಗೆ ತಕ್ಕಂತೆ ಕೈಗೆಟಕುವ ದರದಲ್ಲಿ ಸೀರೆಗಳನ್ನು ಮಾರಾಟ ಮಾಡುತ್ತಿರುವ ಸಂಸ್ಥೆಯು ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಹಬ್ಬದ ಸಂಭ್ರಮಕ್ಕೆ ರಿಯಾಯಿತಿ ದರ :

Advertisement

ಮೀರಾರೋಡ್‌ನ‌ಲ್ಲಿರುವ ಶ್ರೀ ಕಟೀಲೇಶ್ವರಿ ಸಾರೀಸ್‌ ಮಳಿಗೆಯು ಇದೀಗ ಸುಮಾರು 1,200 ಚದರ ಅಡಿಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಗ್ರಾಹಕರಿಗೆ ಗುಣಮಟ್ಟದ ಸೀರೆಗಳ ಖರೀದಿಗೆ ಯೋಗ್ಯ ತಾಣವಾಗಿ ಕಂಗೊಳಿಸುತ್ತಿದೆ. ಕಾಂಜೀವರಂ ಸಿಲ್ಕ್ Õ, ವೈವಿಧ್ಯಮಯ ವಿನ್ಯಾಸಗಳ ಮದುವೆ ಸೀರೆಗಳು, ಸಿಲ್ಕ್ ಸೀರೆಗಳು, ಸಾಫ್ಟ್‌ ಸಿಲ್ಕ್ಸ್, ಸಿಲ್ಕ್ಸ್ ಕಾಟನ್‌, ಕಾಂಚಿ ಕಾಟನ್‌, ಬೆಂಗಳೂರು ಸಿಲ್ಕ್, ಡಿಸೈನರ್‌ ಸೀರೆಗಳು, ರಾಮ್‌ ರಾಜ್‌ ದೋತಿ ಹಾಗೂ ಮಕ್ಕಳ ವಿವಿಧ ಶೈಲಿಯ ವಸ್ತ್ರಗಳು ಮಾತ್ರವಲ್ಲದೆ ನಮ್ಮೂರಿನವರ ಅನೂಕೂಲತೆಗಾಗಿ ಹಬ್ಬದ ಸಂಭ್ರಮದಲ್ಲಿ ವಿಶೇಷ ರಿಯಾಯಿತಿ ದರಗಳಲ್ಲಿ ಮಾರಾಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

 

-ಚಿತ್ರ-ವರದಿ: ವೈ. ಟಿ. ಶೆಟ್ಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next