Advertisement
ಎಲ್ಲಾ ಕ್ಷೋಭೆಗಳಿಗೆ ಒಂದೊಂದು ಪರಿಹಾರವಿದ್ದರೆ ಮಾನಸಿಕ ಕ್ಷೋಭೆಗೆ ನಾವೇ ಪರಿಹಾರವನ್ನು ಕಂಡುಕೊಳ್ಳಬೇಕು. ಯಾಕೆಂದರೆ ಅದು ನಮ್ಮ ಅಂಕೆಯಲ್ಲಿರುವ ಮನಸ್ಸಿನಲ್ಲಿ ಉಂಟಾಗುವ ತಳಮಳ, ಖಿನ್ನತೆ, ವ್ಯಾಕುಲತೆಗೆ ಸಂಬಂಧಿಸಿದ್ದಲ್ಲವೇ?
Related Articles
Advertisement
ಈ ಅಂಕಣದಲ್ಲಿ ತಿಮ್ಮಗುರುಗಳ ಜೀವನಾಮೃತ ಸಾಲುಗಳಿರುತ್ತವೆ, ಮುಲ್ಲಾ ನಸ್ರುದ್ದೀನ್ ನ ಸ್ವ-ಅನುಭವದ ಕಥೆಗಳಿರುತ್ತವೆ, ನಮ್ಮ ಪುರಾಣಗಳಿಂದ ಬಸಿದು ಕೊಟ್ಟ ಜೀವನ ಪಾಠದ ಕಥೆಗಳಿರುತ್ತವೆ. ಭಗವದ್ಗೀತೆಯ ಸಾಲುಗಳಿರುತ್ತವೆ. ಬುದ್ಧನ ಕಥೆಗಳಿರುತ್ತವೆ, ನಮ್ಮ ನಾಡಿನ ಜನಪದ ಜೀವನದ ಸಾರಗಳಿರುತ್ತವೆ.. ಹೀಗೆ ಎಲ್ಲವನ್ನೂ ಸಮಪಾಕವಾಗಿಸಿ ನೊಂದ ಮನಸ್ಸುಗಳಿಗೆ ಸಾಂತ್ವನದ ಕೈಗನ್ನಡಿ ಹಿಡಿಯುವ ಕೆಲಸವನ್ನು ಡಾ. ಸಂಧ್ಯಾ ಪೈ ಅವರು ಕಳೆದ ಹಲವಾರು ವರ್ಷಗಳಿಂದ ತಮ್ಮ ಅಕ್ಕರೆಯ ಅಕ್ಷರ ಸಾಲುಗಳಲ್ಲಿ ಓದುಗರಿಗೆ ನೀಡುತ್ತಾ ಬರುತ್ತಿದ್ದಾರೆ.
ಇದೀಗ, ‘ಪ್ರಿಯ ಓದುಗರೇ..’ಯಲ್ಲಿ ಪಡಿಮೂಡಿರುವ ಅಕ್ಷರ ಸಾಲುಗಳನ್ನು ಧ್ವನಿ ರೂಪದಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸುವ ಕೆಲಸವನ್ನು ‘ಪಾಡ್ ಕಾಸ್ಟಿಂಗ್’ (Podcasts) ಎಂಬ ಡಿಜಿಟಲ್ ವಿಧಾನದ ಮೂಲಕ ‘ಸಂಧ್ಯಾವಾಣಿ’ ಎಂಬ ಹೆಸರಿನಲ್ಲಿ udayavani.com ಮಾಡುತ್ತಿದೆ. ಅದೂ ಸ್ವತಃ ಡಾ. ಸಂಧ್ಯಾ ಎಸ್. ಪೈ ಅವರ ಮಧುರ ಧ್ವನಿಯಲ್ಲಿ.
ತಾಯಿಯೊಬ್ಬರು ತನ್ನ ಮಗುವಿಗೆ ನೀತಿ ಪಾಠ ಹೇಳುವಂತೆ ಸಂಧ್ಯಾ ಪೈ ಅವರು ನಮ್ಮಲ್ಲಿ ಜೀವನೋತ್ಸಾಹವನ್ನು ತುಂಬುವ ಮಾತುಗಳನ್ನು ಹೇಳಲಿದ್ದಾರೆ, ಅದುವೇ ‘ಸಂಧ್ಯಾವಾಣಿ’ ಎಂಬ ವಿನೂತನ ‘ಪಾಡ್ ಕಾಸ್ಟಿಂಗ್’ (Podcasting) ಮೂಲಕ. ಇಷ್ಟು ಮಾತ್ರವಲ್ಲದೇ, ಇದೇ ‘ತರಂಗ’ ವಾರಪತ್ರಿಕೆಯಲ್ಲಿ ಮುದ್ದು ಮಕ್ಕಳಿಗೂ ಸಂಧ್ಯಾ ಮಾಮಿಯಾಗಿ ಇವರು ಹೇಳುವ ಕಥೆಗಳು ಅಚ್ಚುಮೆಚ್ಚು. ಇದೀಗ ಆ ಕಥೆಗಳೂ ಸಹ ಅವರದ್ದೇ ಧ್ವನಿಯಲ್ಲಿ ಮಕ್ಕಳ ಮನಸ್ಸಿಗೆ ನಾಟುವಂತೆ, ಅವರ ಮುಗ್ದ ಮನಸ್ಸುಗಳನ್ನು ಅರಳಿಸುವಂತೆ ಸಂಧ್ಯಾ ಪೈ ಅವರ ಧ್ವನಿಯಲ್ಲಿ ಮೂಡಿಬರುತ್ತಿದೆ.
ನಮ್ಮ ನಾಡಿನ ಮಹಾಗ್ರಂಥಗಳಲ್ಲಿ ಒಂದಾದ ‘ರಾಮಾಯಣ’ದ ಕಥೆಗಳನ್ನು ‘ಮನೋಜ್ಞ ರಾಮಾಯಣ’ದ ರೂಪದಲ್ಲಿ ಸರಳವಾಗಿ ಚಿಣ್ಣರ ಮುಂದೆ ಪ್ರಸ್ತುತಪಡಿಸುವ ಕೆಲಸವನ್ನು ನಾವು ‘ಸಂಧ್ಯಾವಾಣಿ’ ಮೂಲಕ ಪ್ರಾರಂಭಿಸಿದ್ದೇವೆ.
ಅಕ್ಷರ ಲೋಕದಿಂದ, ದೃಶ್ಯ ಮಾಧ್ಯಮಕ್ಕೆ ಅಲ್ಲಿಂದ ಬಳಿಕ ಶ್ರಾವ್ಯ (ಧ್ವನಿ) ಮಾಧ್ಯಮಕ್ಕೆ ಜಗತ್ತು ಹೊರಳುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ ನಿಮ್ಮ ಕಿವಿಗಳಿಗಷ್ಟೇ ತಲುಪುವಂತೆ ಜೀವನೋತ್ಸಾಹದ ಮಾತುಗಳನ್ನು ಮತ್ತು ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಅಗಾಧತೆಯನ್ನು ಅವುಗಳ ಸಾರ ರೂಪದಲ್ಲಿ ಕೇಳಿಸುವ ನಮ್ಮ ಈ ಪ್ರಯತ್ನ ಕನ್ನಡ ಪತ್ರಿಕಾ ಮಾಧ್ಯಮದಲ್ಲೊಂದು ಕ್ರಾಂತಿಕಾರಿ ಹೆಜ್ಜೆಯೆಂದೇ ನಾವು ನಂಬಿದ್ದೇವೆ.
ನಿಮ್ಮೆಲ್ಲರ ಬೆಂಬಲ ಪ್ರೋತ್ಸಾಹ ಸಿಕ್ಕಿದಲ್ಲಿ ನಮ್ಮ ಈ ನಂಬಿಕೆ ಸುಳ್ಳಾಗದು!
‘ಸಂಧ್ಯಾವಾಣಿ’ಯನ್ನು ಆಲಿಸಲು ಈ QR ಕೋಡ್ ಸ್ಕ್ಯಾನ್ ಮಾಡಿ: